ಬ್ಯಾಂಕಿನಲ್ಲಿ ಮುದ್ರಾ ಯೋಜನೆ ಅಡಿ 10 ಲಕ್ಷ ಜನರವರೆಗೂ ಉದ್ಯೋಗ ಮಾಡುವವರಿಗೆ ಯಾವುದೇ ಜಾಮೀನು ಇಲ್ಲದೆ ಸಾಲ ನೀಡಬಹುದಾಗಿದ್ದು ಇದನ್ನು ಉದ್ಯೋಗ ಮಾಡಲು ಗುರಿ ಹೊಂದಿರುವ ಯುವಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹುಳಿಯಾರು ಭಾರತೀಯ ಸ್ಟೇಟ್ ಬ್ಯಾಂಕ್‌ನ ವ್ಯವಸ್ಥಾಪಕರಾದ ಸತೀಶ್ ಕೆ ಸಿಂಗ್ ಮಾಹಿತಿ ನೀಡಿದರು. ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಚಿಕ್ಕನಾಯಕನಹಳ್ಳಿಯ ಆರ್ಥಿಕ ಸಾಕ್ಷರತಾ ಕೇಂದ್ರದಿಂದ ಬರಕನಾಳು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ ಕಾರ್ಯಾಗಾರದಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಮಾತನಾಡಿ ಯಾವುದೇ ಯೋಜನೆಗಳು ಫಲಪ್ರಧ ವಾಗಬೇಕೆಂದರೆ ಆ ಯೋಜನೆಯು ಜಾರಿ ಮಾಡಿದ ದಿನದಿಂದ ಎಲ್ಲರಿಗೂ ತಲುಪಿದಿಯೋ ಅಥವಾ ಇನ್ನು ತಲುಪಬೇಕಾಗಿದೆಯೋ ಎಂದು ಯೋಚಿಸಿ ಅದನ್ನು ವಿಮರ್ಶೆ ಮಾಡುವುದೇ ಈ ವಿಕಾಸ ಭಾರತ ಸಂಕಲ್ಪ ಯೋಜನೆಯ ಮುಖ್ಯ ಗುರಿ ಎಂದು ತಿಳಿಸಿದರು ಈ ಕಾರ್ಯಗಾರದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ತುಕ್ಯ ನಾಯಕ್, ಅಧ್ಯಕ್ಷರಾದ ಜಗದೀಶ್ ,ಸದಸ್ಯರಾದ ಪುಟ್ಟರಂಗಮ್ಮ,ಎಂ ಬಿ ಕೆ ಶೀಲಾ,ಎಲ್ ಸಿ ಆರ್ ಪಿ ಗಳಾದ ಜಯಮ್ಮ ಮಂಜುಳಾ ಸ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070