ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದಲ್ಲಿ ಹುಳಿಯಾರಿನ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ ಇವರು ಜಂಟಿಯಾಗಿ ಏರ್ಪಡಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದವು ದೇಶದ ಎಲ್ಲ ಜನರನ್ನು ಆಕರ್ಷಿಸುವಂಥ ಕಡಿಮೆ ವೆಚ್ಚದ ಯೋಜನೆಗಳನ್ನು ಜಾರಿಗೆ ತಂದಿರುವುದು ಶ್ಲಾಘನೀಯ.ವಿಕಸಿತ ಭಾರತ ಸಂಕಲ್ಪ ಯಾತ್ರೆಯು ನಮ್ಮ ದೊಡ್ಡಬಿದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.
ಹುಳಿಯಾರು ಭಾರತೀಯ ಸ್ಟೇಟ್ ಬ್ಯಾಂಕಿನ ಮ್ಯಾನೇಜರ್ ಲೋಹಿತ್ ಮಾತನಾಡಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ತರಬೇತಿ ನೀಡಿ ನಂತರ ಸಾಲ ನೀಡಲು ನಮ್ಮ ಬ್ಯಾಂಕು ಸಿದ್ದವಿದೆ ಎಂದರು.
ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಮಾತನಾಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ರೈತರಿಗೆ ತುಂಬಾ ಪ್ರಯೋಜನವಾಗಿದ್ದು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾಲ ಪಡೆದು ಆರ್ಥಿಕವಾಗಿ ಸಬಲರಾದ ಫಲಾನುಭವಿಗಳನ್ನು ಮಾತನಾಡಿಸಲಾಯಿತು. ಜೊತೆಗೆ ಡ್ರೋನ್ ಮುಖಾಂತರ ಔಷಧಿ ಸಿಂಪಡಿಸುವ ಕೀಟನಾಶಕ ಹಾಗೂ ಗೊಬ್ಬರ ಸಿಂಪಡಿಸುವ ದ್ರೋಣ್ ಪ್ರಾತ್ಯಕ್ಷತೆಯನ್ನು ಸಮಾಜ ಸೇವಕ ತುಮಕೂರಿನ ಉಮೇಶ್ ನಡೆಸಿಕೊಟ್ಟರು.ಕೊನೆಯಲ್ಲಿ ಭಾರತ ದೇಶವನ್ನು ಬಲಪಡಿಸುವ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು
ಈ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶಾಲಿನಿ ಹಾಗೂ ಉಪಾಧ್ಯಕ್ಷರಾದ ರತ್ನಮ್ಮ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅಂಬಿಕಾಬಾಯಿ, ಬಿ.ಕೆ.ಲಕ್ಷ್ಮಿ ,ಅಪ್ಸನಾ ಖಾನ್ ,ಲಲಿತಮ್ಮ, ಬವಿತಾ ಮತ್ತಿತರರು ಸೇರಿದಂತೆ ಸ್ವಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ