ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಳಿಯಾರು-ಕೆಂಕೆರೆ ಯಲ್ಲಿ ಕನ್ನಡ ವಿಭಾಗದ ವತಿಯಿಂದ ನಡೆದ “ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ”ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ತರಗತಿಗಳಲ್ಲಿ ವಿದ್ಯಾರ್ಥಿಗಳು ಅರ್ಧ ವೃತ್ತಾಕಾರದಲ್ಲಿ ಕೂರುವ ವ್ಯವಸ್ಥೆ ಆಗಬೇಕು. ಕುವೆಂಪು ಅವರು ಹೇಳಿರುವ “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ” ಎಂಬ ಮಾತನ್ನು ಗಮನದಲ್ಲಿಟ್ಟುಕೊಂಡು ಕೀಳರಿಮೆಯನ್ನು ತೊರೆದು ನಮ್ಮತನವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾನಸಿಕ ಆರೋಗ್ಯಕ್ಕೆ ಉತ್ತಮ ಆಹಾರ ಮತ್ತು ಉತ್ತಮ ಚಿಂತನೆ ಅವಶ್ಯಕ. ಶಿಕ್ಷಣದ ಫಲ ಪಡೆದ ನಾವೆಲ್ಲರೂ ಭಿನ್ನಭೇದದಿಂದ ಮುಕ್ತಿ ಪಡೆಯಬೇಕು ಎಂದರು. ಮನುಷ್ಯನ ಅತಿ ಬುದ್ಧಿಯ ಸಮಕಾಲೀನ ದುಷ್ಪರಿಣಾಮಗಳನ್ನು ನೋಡುತ್ತಿದ್ದರೆ ಆಘಾತವಾಗುತ್ತದೆ. ಹಾಗಾಗಿ ಇಂದು ನಾವು ಮನುಷ್ಯತ್ವಕ್ಕಿಂತ ಮರತ್ವ, ಬೀಜತ್ವ ಹಾಗೂ ಮಣ್ಣುತತ್ವಗಳನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸದ ನಂತರ ಏರ್ಪಟ್ಟ ಸಂವಾದದಲ್ಲಿ ವಿದ್ಯಾರ್ಥಿಗಳು ಹಲವು ಪ್ರಶ್ನೆಗಳನ್ನು ಕೇಳಿ ತಮ್ಮ ಗೊಂದಲಗಳಿಗೆ ಪರಿಹಾರ ಕಂಡುಕೊಂಡರು. ವೇದಿಕೆ ಭಯ ನೀಗುವುದು ಹೇಗೆ? ಕವಿತೆ ಬರೆಯಲು ಏನು ಸಿದ್ಧತೆ ಬೇಕು? ಕಾಲೇಜು ಪತ್ರಿಕೆಗಳಿಗೆ ಏನೇನು ಬರವಣಿಗೆ ಬರೆಯಬಹುದು? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದುಕೊಂಡರು.
ವಿಶಾಲಾಕ್ಷಿ ಪಿ.ಆರ್. ಮತ್ತು ರಂಜಿತ ಆರ್. ಆರಂಭಗೀತೆಯನ್ನು ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರೂ, ಕಾರ್ಯಕ್ರಮದ ಸಂಚಾಲಕರೂ ಆದ ಡಾ. ಮೋಹನ್ ಕುಮಾರ್ ಮಿರ್ಲೆ ಅವರು ಸ್ವಾಗತಿಸಿದರು. ಡಾ. ಜಯಶ್ರೀ ಬಿ. ಕದ್ರಿ ವಂದಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕರಾದ ಪ್ರೊ. ಮಂಜುನಾಥ ಕೆ.ಎಸ್., ಡಾ. ಸುಷ್ಮಾ ಎಲ್. ಬಿರಾದಾರ್ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ