ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ವೀರಣ್ಣ ಎಸ್..ಸಿ. ಅವರು ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ರಂಗ ಅಭಿನಯ ಕೂಡ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಂಚಾಲಕರಾದ ಡಾ. ಮೋಹನ್ ಕುಮಾರ್ ಮಿರ್ಲೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ, ವಿದ್ಯಾರ್ಥಿಗಳಲ್ಲಿ ಅಡಗಿರುವ ಅಭಿನಯ ಕೌಶಲ್ಯವನ್ನು ಗುರುತಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಂಗಭೂಮಿಯು ಸಾಮಾಜಿಕ ಜಾಗೃತಿ ಮೂಡಿಸುವ ಪ್ರಭಾವಶಾಲಿ ಮಾಧ್ಯಮವಾಗಿದ್ದು, ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕಲಾವಿದರ ಚಿಂತನಾ ಲಹರಿಗಳ ಮೇಲೂ ಇದು ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದು, ಐತಿಹಾಸಿಕ ಮತ್ತು ಪೌರಾಣಿಕ ಸಂಗತಿಗಳು, ಸಾಮಾಜಿಕ ಜಾಗೃತಿ, ಆರ್ಥಿಕ ಜಾಗೃತಿ, ಕನ್ನಡಾಭಿಮಾನ, ಸಂವಿಧಾನದ ಮಹತ್ವ, ಮಹಿಳಾ ಸಬಲೀಕರಣ, ಹಾಸ್ಯ, ಹೀಗೆ ವೈವಿಧ್ಯಮಯ ವಸ್ತು ವಿಷಯಗಳ ಕಿರು ನಾಟಕಗಳನ್ನು ಪ್ರದರ್ಶಿಸಿದರು.
“ಸಂವಿಧಾನ ಇಲ್ಲದೆ ಹೋದರೆ?!” ಎಂಬ ಕಿರುನಾಟಕವನ್ನು ಅಭಿನಯಿಸಿದ ಅಂತಿಮ ಬಿ.ಎ. ವಿದ್ಯಾರ್ಥಿಗಳಾದ ರಂಜಿತ ಆರ್. ಮತ್ತು ತಂಡದವರು ಪ್ರಥಮ ಸ್ಥಾನ ಪಡೆದರೆ, “ಮಹಿಳಾ ಸಬಲೀಕರಣ” ಎಂಬ ಕಿರುನಾಟಕವನ್ನು ಅಭಿನಯಿಸಿದ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಾದ ಕೋಮಲ ಎನ್. ಮತ್ತು ತಂಡದವರು ದ್ವಿತೀಯ ಸ‍್ಥಾನವನ್ನು ಪಡೆದರು. ಇನ್ನು “ಆರ್ಥಿಕ ವಂಚನೆ” ಎಂಬ ಕಿರುನಾಟಕವನ್ನು ಅಭಿನಯಿಸಿದ ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳಾದ ರಕ್ಷಿತ ಸಿ. ಮತ್ತು ತಂಡದವರು ತೃತೀಯ ಸ‍್ಥಾನವನ್ನು ಪಡೆದರು.
ಈ ಕಿರುನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಪ್ರೊ. ಮಂಜುನಾಥ ಕೆ.ಎಸ್., ಡಾ. ಸುಷ್ಮಾ ಎಲ್. ಬಿರಾದಾರ್ ಮತ್ತು ಪ್ರೊ. ಸಂಗೀತಾ ಪಿ. ಅವರು ಕಾರ್ಯ ನಿರ್ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಮಲ್ಲಿಕಾರ್ಜುನ ಮತ್ತು ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರಸ್ವತಿ ಬಿ.ಕೆ., ಕಾವ್ಯ ಕೆ., ಸ್ವಾತಿ ಎನ್. ಮತ್ತು ಸ್ಫೂರ್ತಿ ಜಿ.ಆರ್. ಆರಂಭಗೀತೆಯನ್ನು ಹಾಡಿದರು. ಸಿಂಧು ಕೆ.ಆರ್. ಸ್ವಾಗತಿಸಿದರು. ತೇಜಸ್ವಿನಿ ಕೆ.ಹೆಚ್. ವಂದಿಸಿದರು. ರುಚಿತಾ ಪಿ. ಕಾರ್ಯಕ್ರಮವನ್ನು ನಿರೂಪಿಸಿದರು.
=============================
*ಸ್ಪರ್ಧೆಯ ವಿಜೇತರು*
ಪ್ರಥಮ ಸ‍್ಥಾನ - (ನಾಟಕ: “ಸಂವಿಧಾನ ಇಲ್ಲದೆ ಹೋದರೆ?!”) – ಅಭಿನಯ: ರಂಜಿತ ಆರ್. ಮತ್ತು ತಂಡ, ಅಂತಿಮ ಬಿ.ಎ.
ದ್ವಿತೀಯ ಸ‍್ಥಾನ - (ನಾಟಕ: “ಮಹಿಳಾ ಸಬಲೀಕರಣ”) - ಅಭಿನಯ: ಕೋಮಲ ಎನ್. ಮತ್ತು ತಂಡ, ಅಂತಿಮ ಬಿ.ಕಾಂ.
ತೃತೀಯ ಸ‍್ಥಾನ - (ನಾಟಕ: “ಆರ್ಥಿಕ ವಂಚನೆ, ಜಾಗೃತಿ”) - ಅಭಿನಯ: ರಕ್ಷಿತ ಸಿ. ಮತ್ತು ತಂಡ, ಪ್ರಥಮ ಬಿ.ಕಾಂ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ