ಹುಳಿಯಾರು : "ಹೈನುಗಾರಿಕೆಯಲ್ಲಿ ವರ್ಗೀಸ್ ಕುರಿಯನ್‌ವರ ಪಾತ್ರವನ್ನು ನಾವೆಲ್ಲರೂ ಇಂದಿಗೂ ನೆನೆಯಬೇಕು. ಪ್ರಸ್ತುತ ಭಾರತದ ಜನಸಂಖ್ಯೆಗೆ ಎಲ್ಲರಿಗೂ ಹಾಲಿನ ಉತ್ಪನ್ನಗಳನ್ನು ಒದಗಿಸುವ ಅಗತ್ಯತೆಯಿದೆ. ಹಾಗಾಗಿ ಹೈನುಗಾರಿಕೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ" ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ರೆ.ಮ.ನಾಗಭೂಷಣ್ ತಿಳಿಸಿದರು . ಸಮೀಪದ ಬೆಳಗುಲಿ ಗ್ರಾಮದಲ್ಲಿ ಹುಳಿಯಾರಿನ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2 ರ 2024-25 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು "ಕರುಣ - ಕರುಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ" ದ ಬಗ್ಗೆ ಮಾಹಿತಿ ನೀಡಿದ ಅವರು ಹಸುಗಳ ವಿವಿಧ ತಳಿಗಳನ್ನು ತಿಳಿಸುತ್ತಾ, "ಅವುಗಳಿಗೂ ಮನುಷ್ಯರಂತೆ ಪೌಷ್ಟಿಕಯುತವಾದ ಸಮತೋಲನ ಆಹಾರವನ್ನು ನೀಡಲು ಅವಶ್ಯಕತೆ ಇದೆ" ಎಂದರು. ಪಶು ಸಂಗೋಪನೆಯನ್ನು ಮಾಡಿ ಯಶಸ್ವಿಯಾದವರ ಉದಾಹರಣೆಗಳನ್ನು ನೀಡಿದರು. ಮುಂದುವರಿದು, "ಯ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070