ಹುಳಿಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪ್ರಾರಂಭಿಕ ವರ್ಗವು ಹುಳಿಯಾರು ಹೋಬಳಿಯ ಯಳನಡು ಮಹಾಸಂಸ್ಥಾನ ಮಠದಲ್ಲಿ ದಿನಾಂಕ 15-05-2025 ಗುರುವಾರದಿಂದ 18-05-2025 ಭಾನುವಾರದವರೆಗೆ ನಡೆಯಲಿದೆ.
ಈ ವರ್ಗದಲ್ಲಿ ಕರಾಟೆ, ದೊಣ್ಣೆವರೆಸೆ, ಯೋಗಾಸನ ಇತ್ಯಾದಿ ಶಾರೀರಕ ಅಭ್ಯಾಸಗಳನ್ನು ಕಲಿಸಲಾಗುತ್ತದೆ. ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಶಿಕ್ಷಣವನ್ನು ನೀಡಲಾಗುತ್ತದೆ.
ಈ ವರ್ಗಕ್ಕೆ 9ನೇ ತರಗತಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳು, 14 ವರ್ಷ ಮೇಲ್ಪಟ್ಟ 60 ವರ್ಷದೊಳಗಿನ ಉದ್ಯೋಗಸ್ಥರು ಭಾಗವಹಿಸಬಹುದಾಗಿದ್ದು ಹೆಚ್ಚಿನ ವಿವರಗಳಿಗೆ ಹರ್ಷ- 9008207243, ಭರತ್ - 8971438241 ಹಾಗೂ ಶ್ರೀನಿವಾಸ - 9060871266 ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘದ ಸ್ವಯಂಸೇವಕ ಪ್ರಶಾಂತ್ ದಸೂಡಿ ತಿಳಿಸಿದ್ದಾರೆ.
-----------------------------
ವರ್ಗದ ದಿನಾಂಕ : 15-05-2025 ಗುರುವಾರದಿಂದ 18-05-2025 ಭಾನುವಾರದವರೆಗೆ
ವರ್ಗದ ಸ್ಥಳ : ಯಳನಡು ಮಹಾಸಂಸ್ಥಾನ ಮಠ, ಯಳನಡು
----------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ