ಹೌದು ಇತ್ತೀಚಿಗಷ್ಟೇ ಕೆಲವೊಂದು ಮಳಿಗೆಗಳಿಗೆ ಬಾಡಿಗೆ ಬಾಕಿ ಇದೆ ಎಂದು ಪಟ್ಟಣ ಪಂಚಾಯಿತಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ನಾವುಗಳು ಬಾಡಿಗೆ ಪಾವತಿಸಿದ್ದರು ಸಹ ಜಮಾ ಖರ್ಚು ಮಾಡಿಲ್ಲ . ಪಂಚಾಯಿತಿಯವರು ನಿರ್ವಹಣೆ ಮಾಡಬೇಕಾಗಿರುವ ಡಿಸಿಬಿ ರಿಜಿಸ್ಟರ್ ತೋರಿಸಿ, ಅದರಲ್ಲಿ ಬಾಡಿಗೆ ಬಾಕಿ ಇದ್ದಲ್ಲಿ ಕಟ್ಟುತ್ತೇವೆ ಎಂದು ಮಳಿಗೆದಾರರು ಡಿಸಿಬಿ ರಿಜಿಸ್ಟರ್ ತೋರಿಸಿಲೇಬೇಕು ಎಂದು ಪಟ್ಟು ಹಿಡಿದಿದ್ದರು.
ನಾವು ನಿರ್ವಹಿಸುವ ಡಿಸಿಬಿ ಬುಕ್ ಇದೇ ಎಂದು ತೋರಿಸಿದ್ದ ನೋಟ್ ಪುಸ್ತಕ |
ಮಳಿಗೆ ಬಾಡಿಗೆ ವಸೂಲಾತಿ ಬಗ್ಗೆ ಅಯಾ ತಿಂಗಳು ಜಮಾ ಖರ್ಚು ಮಾಡಬೇಕಾಗಿದ್ದ ಅಧಿಕೃತ ಡಿಸಿಬಿ ರಿಜಿಸ್ಟರ್ ಆಡಿಟ್‌ಗೆ ಕೊಟ್ಟಿದ್ದೇವೆಂದು ಹೇಳಿ ಬದಲಿಗೆ ಬಿಲ್ ಕಲೆಕ್ಟರ್ ಲಾಂಗ್ ನೋಟ್ ಬುಕ್ ನಲ್ಲಿ ಬರೆದುಕೊಂಡು ಜಮ ಖರ್ಚು ನಿರ್ವಹಿಸುತ್ತಿದ್ದ ಬಗ್ಗೆ ಬಾಡಿಗೆದಾರರು ಪ್ರಶ್ನಿಸಿದ್ದ ಸಂದರ್ಭದಲ್ಲಿ ಇದೇ ರೀತಿಯ ಪುಸ್ತಕವನ್ನು ನಾವು ನಿರ್ವಹಿಸಿಕೊಂಡು ಬಂದಿದ್ದು ಇದರ ಬದಲು ಬೇರೆ ಯಾವುದೇ ಪುಸ್ತಕ ನಮ್ಮಲ್ಲಿಲ್ಲ. ನೀವು ಬಾಡಿಗೆ ಪಾವತಿಸಿದ್ದಲ್ಲಿ ಇದರಲ್ಲಿ ಜಮಾ ಬರೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.
ಈ ಬಗ್ಗೆ ಕಂದಾಯ ಅಧಿಕಾರಿಯ ಪ್ರಶ್ನೆಸಿದರೆ ಡಿಸಿಬಿ ರಿಜಿಸ್ಟರ್ ನಾವು ನಿರ್ವಹಿಸಬೇಕಿದ್ದು ಸದ್ಯಕ್ಕೆ ಪಂಚಾಯಿತಿಯಲ್ಲಿ ಈ ಕಡತ ಏನಾಗಿದೆ ಎಂದು ತಿಳಿಯುತ್ತಿಲ್ಲ ಎಂದಿದ್ದರು. ಈ ಬಗ್ಗೆ ನಾವು ಸಹ ಮುಖ್ಯ ಅಧಿಕಾರಿಗಳಲ್ಲಿ ಪ್ರಶ್ನಿಸಿದ್ದೇವೆ ಎಂದು ಉತ್ತರಿಸಿದ್ದರು.ಇದನ್ನು ಪ್ರಶ್ನಿಸಿ ಬಾಡಿಗೆದಾರರು ಅರ್ಜಿ ಸಲ್ಲಿಸಿ ದೂರು ನೀಡಿದ್ದರು.ಸದರಿ ವಿಚಾರ ಪತ್ರಿಕೆಯಲ್ಲಿ ಪ್ರಚಾರಪಡೆದ ನಂತರವಷ್ಟೆ ಪುಸ್ತಕ ಸಿಕ್ಕಿದೆ ಎಂದು ತಂದಿದ್ದಾರೆ.
ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಪತ್ತೆಯಾದ ಡಿಸಿಬಿ ಪುಸ್ತಕ |
ಹಾಲಿ ಡಿಸಿಬಿ ರಿಜಿಸ್ಟರ್ ಗಮನಿಸಿದಲ್ಲಿ ಪರಿಪೂರ್ಣವಾಗಿ ನಿರ್ವಹಿಸದಿರುವುದು ಕಂಡುಬರುತ್ತದೆ. ಸದ್ಯಕ್ಕೆ ಸಿಕ್ಕಿರುವ ಡಿಸಿಬಿ ರಿಜಿಸ್ಟರ್ ಅಲ್ಲಿ 2019 ರಿಂದ 22 ರವರೆಗೆ ಮಾತ್ರ ಜಮಾಖರ್ಚು ನಮೂದಾಗಿದೆ. 22- 23, 23- 24,24- 25 ನೇ ಸಾಲಿನ ಬೇಡಿಕೆ /ವಸೂಲಿ ಬಗ್ಗೆ ಏನ್ನೊಂದು ನಮೂದು ಮಾಡಿಲ್ಲ.
ಪ್ರಸಕ್ತ ಮಳಿಗೆಗಳ ಬಾಡಿಗೆ/ ಬೇಡಿಕೆ/ ವಸೂಲಾತಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಚಾಲ್ತಿ ಸಾಲಿನವರೆಗೆ ಜಮಾ ಖರ್ಚಿನ ಮಾಡದೆ,ಪಾವತಿ ಮಾಡಿರುವ ಹಣವನ್ನು ಜಮಾ ಮಾಡದೆ ನೀವು ರಸೀತಿ ತಂದರಷ್ಟೆ ಜಮಾ ಮಾಡುತ್ತೇವೆ ಎನ್ನುತ್ತಾರೆ.
ಪ್ರಸ್ತುತ ವಸೂಲಿ ಮಾಡುತ್ತಿರುವ ಮಳಿಗೆಗಳ ಬಾಡಿಗೆ ದರ ನಿಗದಿಪಡಿಸಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಇಲ್ಲವೇ ಪ್ರಸ್ತುತ ವಸೂಲಿಯಾಗುತ್ತಿರುವ ಮಳಿಗೆ ಬಾಡಿಗೆ ಬಗ್ಗೆ ಮೇಲಾಧಿಕಾರಿಗಳು ಸಹ ಅನುಮೋದಿಸಿಲ್ಲ.
ಸದ್ಯ ಈಗಲಾದರೂ ಪಟ್ಟಣ ಪಂಚಾಯಿತಿ ಕಂದಾಯ ಇಲಾಖೆಯ ಅಧಿಕಾರಿಗಳು ಡಿಸಿಬಿ ರಿಜಿಸ್ಟರ್ ಅನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಆಯಾ ತಿಂಗಳು ಜಮಾ ಖರ್ಚನ್ನು ನಮೂದಿಸಿದಲ್ಲಿ ಪ್ರತಿಯೊಬ್ಬ ಬಾಡಿಗೆದಾರರ ಬಾಡಿಗೆ ಎಷ್ಟಿದೆ ಎಂದು ತಿಳಿಯುತ್ತದೆ ಇದನ್ನು ಆಧರಿಸಿ ವಸೂಲಾತಿ ಮಾಡುವುದರ ಮೂಲಕ ಪಂಚಾಯಿತಿಯ ಬರಬೇಕಾದ ಹಣವನ್ನು ಕ್ರೂಢೀಕರಿಸಿಕೊಳ್ಳಬಹುದಾಗಿದೆ. ಬಾಡಿಗೆ ವಸೂಲಾತಿ ಕುಂಟಿತವಾಗಿದ್ದಲ್ಲಿ ಕ್ರಮವಹಿಸಲು ಅನುಕೂಲವಾಗುತ್ತದೆ.
ಒಟ್ಟಾರೆ ಡಿಸಿಬಿ ವಹಿಯಲ್ಲಿ ಸರಿಯಾದ ಬಾಕಿ ವಿವರವನ್ನು ದಾಖಲಿಸದಿರುವುದರಿಂದ ಸಾಕಷ್ಟು ನ್ಯೂನತೆಗಳಿದೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಮೂಲವಾಗಬೇಕಾದ ವಾಣಿಜ್ಯ ಸಂಕೀರ್ಣಗಳು,ಹೊರೆಯಾಗಿ ಪರಿಣಮಿಸುವಂತಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ