ಹುಳಿಯಾರು : ಸಮೀಪದ ಬೆಳಗುಲಿ ಗ್ರಾಮದಲ್ಲಿ 2024-25ರ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2 ವಾರ್ಷಿಕ ವಿಶೇಷ ಶಿಬಿರವನ್ನು ಮೇ. 10 ರಿಂದ 16 ರವರೆಗೆ ಹಮ್ಮಿಕೊಳ್ಳಲಾಗಿದೆ.
ಮೇ. 10 ರ ಶನಿವಾರ ಶಿಬಿರ ಪ್ರಾರಂಭವಾಗಲಿದ್ದು ಶಾಸಕರಾದ ಸಿ ಬಿ ಸುರೇಶ್ ಬಾಬು ಉದ್ಘಾಟಿಸಲಿದ್ದಾರೆ. ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೀರಣ್ಣ ಎಸ್ ಸಿ ಅಧ್ಯಕ್ಷತೆ ವಹಿಸಲಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಮೌನೇಶ್ವರ ಶ್ರೀನಿವಾಸರಾವ್ ವಿಶೇಷ ಆಹ್ವಾನಿತರಾಗಿದ್ದಾರೆ.
ಮೇ. 11 ರ ಭಾನುವಾರ "ಗ್ರಾಮ ಕಲೆಗಳ ಗಾನ ವೈಭವ-ಜಾನಪದ ಕಲೆಗಳ ಅನಾವರಣ" ದ ಬಗ್ಗೆ ಎಲ್.ಹನುಮಯ್ಯ ಅಧ್ಯಾಪಕರು ಮತ್ತು ಗಾಯಕರು ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ ಇವರಿಂದ ಉಪನ್ಯಾಸ ನಡೆಯಲಿದೆ.
ಮೇ. 12 ರ ಸೋಮವಾರ "ಗುಡಿ ಕೈಗಾರಿಕೆಗಳು ಮತ್ತು ಅದರ ಪ್ರಾಮುಖ್ಯತೆ" ಯ ಬಗ್ಗೆ ಎಲ್ ಆರ್ ಚಂದ್ರಶೇಖರ್ ಕೈಗಾರಿಕೋಧ್ಯಮಿಗಳು, ಗಾಂಧಿಪೇಟೆ ಇವರಿಂದ ಉಪನ್ಯಾಸ ನಡೆಯಲಿದೆ.
ಮೇ. 13 ರ ಮಂಗಳವಾರ "ಕರುಣ - ಕರುಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ" ದ ಬಗ್ಗೆ ಡಾ. ರೆ.ಮ. ನಾಗಭೂಷಣ್ ಸಹಾಯಕ ನಿರ್ದೇಶಕರು ಪಶುಪಾಲನಾ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆ, ಚಿ ನಾ ಹಳ್ಳಿ ಇವರು ಮಾಹಿತಿ ನೀಡಲಿದ್ದಾರೆ.
ಮೇ. 14 ರ ಬುಧವಾರ "ಸ್ವಚ್ಚ ಗ್ರಾಮ ಸಶಕ್ತ ಗ್ರಾಮ" ದ ಬಗ್ಗೆ ಬೆಳಗುಲಿ ಗ್ರಾಮ ಪಂಚಾಯಿತಿ ಪಿಡಿಓ ಆರ್ ಎಸ್ ರಮೇಶ್ ಇವರಿಂದ ಉಪನ್ಯಾಸ ನಡೆಯಲಿದೆ.
ಮೇ. 15 ರ ಗುರುವಾರದಂದು "ಶಿಕ್ಷಣ ಮತ್ತು ಬದುಕು" ಬಗ್ಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಕಾಂತರಾಜು ಇವರು ಉಪನ್ಯಾಸ ನೀಡಲಿದ್ದಾರೆ.ಮೇ. 16 ಶುಕ್ರವಾರ ಸಮಾರೋಪ ಸಮಾರಂಭದೊಂದಿಗೆ ಎನ್‌ಎಸ್‌ಎಸ್ ಶಿಬಿರಕ್ಕೆ ತೆರೆ ಬಿಳಲಿದೆ.
ಶಿಬಿರದಲ್ಲಿ ಪ್ರತಿ ದಿನ ದ್ವಜಾರೋಹಣ, ಯೋಗ, ವ್ಯಾಯಾಮ, ಶ್ರಮದಾನ, ವಿಚಾರ ಮಂಥನ, ಸಂಜೆ ಗಣ್ಯರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ