ಚಿಕ್ಕನಾಯಕನಹಳ್ಳಿ: ವನಕಲ್ಲು ಮಲ್ಲೇಶ್ವರ ಮಠದ ಪರಮ ಪೂಜ್ಯರಾದ ಶ್ರೀ ಶ್ರೀ ಶ್ರೀ ಬಸವರಮಾನಂದ ಸ್ವಾಮೀಜಿಗಳು ಇಂದು ಚಿಕ್ಕನಾಯಕನಹಳ್ಳಿಯ ಪ್ರವಾಸಿ ಮಂದಿರಕ್ಕೆ ಆಗಮಿಸಿ, “ಪೂಜ್ಯರ ನಡೆ – ಭಕ್ತರ ಮನೆ, ಮನಗಳ ಕಡೆ” ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ ಮಾರ್ಗದರ್ಶನ ನೀಡಿದರು.
ಇದೇ ತಿಂಗಳ 27-01-2026 (ಮಂಗಳವಾರ) ರಿಂದ 7 ದಿನಗಳ ಕಾಲ ನಡೆಯಲಿರುವ ಈ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಕಾಡುಗೊಲ್ಲರ ಹಟ್ಟಿಗಳಲ್ಲಿ ನಡೆಯಬೇಕಾದ ಪ್ರವಾಸ ಹಾಗೂ ಕಾರ್ಯಕ್ರಮಗಳ ರೂಪುರೇಷೆ ಕುರಿತು ಸಮಗ್ರವಾಗಿ ವಿಚಾರ ವಿನಿಮಯ ನಡೆಯಿತು.
ಸಭೆಯಲ್ಲಿ ಮುಖ್ಯವಾಗಿ ಕಾಡುಗೊಲ್ಲರ ಹಟ್ಟಿಗಳ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಪ್ರಗತಿ ಕುರಿತು ವಿಸ್ತೃತ ಚರ್ಚೆ ನಡೆಸಿ, ಸಮುದಾಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ನಿರ್ಧಾರ ಕೈಗೊಳ್ಳಲಾಯಿತು.
ಈ ಪೂರ್ವಭಾವಿ ಸಭೆಯಲ್ಲಿ ಶಿವಣ್ಣ (ಮಾದಾಪುರ), ಮಲ್ಲಿಕಾರ್ಜುನ್ (ರಾಮಪ್ಪನಹಟ್ಟಿ), ವಿಶ್ವನಾಥ್ ಪೂಜಾರಿ, ಮಂಜು (ಕೆಂಪರಾಯನಹಟ್ಟಿ), ಕದುರೇಗೌಡ, ಅಜ್ಜಪ್ಪ, ಲೋಕೇಶ್, ಈರಣ್ಣ (NR), ರಮೇಶ್, ಆಟೋ ಶಂಕರ್, ರಾಮಣ್ಣ, ಚಿತ್ರಲಿಂಗಪ್ಪ, ರವಿ ಕುಮಾರ್, ಶಾಂತ ಕುಮಾರ್, ಸುಧಾಕರ್, ಶೇಷಣ್ಣ ಪೂಜಾರಿ, ನಾಟರಾಜ್, ರಾಜಣ್ಣ (ಅಂಕಸಂದ್ರ) ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ