ವಿಷಯಕ್ಕೆ ಹೋಗಿ

ಹುಳಿಯಾರಿನಲ್ಲಿ 'ವಾಸವಿ ತಿಂಡಿ ಮೇಳ'ದ ಘಮಲು: 50ಕ್ಕೂ ಹೆಚ್ಚು ಸ್ವಾದಿಷ್ಟ ಖಾದ್ಯಗಳಿಗೆ ಫಿದಾ ಆದ ಜನತೆ!

ಆಹಾರ ಮೇಳ–2026 : ಹುಳಿಯಾರಿನಲ್ಲಿ ತಿಂಡಿ ಪ್ರಿಯರಿಗೆ ರುಚಿ ರಸದೌತಣ

-----------------------------------

ಹುಳಿಯಾರು: ಹೊಸ ವರ್ಷದ ಪ್ರಯುಕ್ತ ವಾಸವಿ ಯುವಜನ ಸಂಘದ ವತಿಯಿಂದ ಭಾನುವಾರ ರಾತ್ರಿ ಹುಳಿಯಾರು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ವಿಶೇಷ ಆಹಾರ ಮೇಳ–2026 ತಿಂಡಿ ಪ್ರಿಯರ ಮನಗೆದ್ದಿತು.ಚುಮುಚುಮು ಚಳಿಯ ನಡುವೆ ಬಿಸಿಬಿಸಿ ಖಾದ್ಯಗಳ ಸವಿ ಸವಿಯಲು ನೂರಾರು ಜನ ಆಗಮಿಸಿದ್ದು, ಆಹಾರ ಪ್ರಿಯರಿಗೆ ಈ ಮೇಳವು ವಿನೂತನ ಅನುಭವ ನೀಡಿತು. ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆದ ಈ ತಿಂಡಿ ಮೇಳವು ಅತ್ಯಂತ ಶಿಸ್ತಿನಿಂದ, ಯಶಸ್ವಿಯಾಗಿ ಸಂಪನ್ನಗೊಂಡಿತು.

ಒಟ್ಟು 11 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಒಂದೊಂದು ಮಳಿಗೆಯಲ್ಲೂ ಒಂದೊಂದು ವಿಭಿನ್ನ ತಿಂಡಿ ತಿನಿಸುಗಳನ್ನು ತಯಾರಿಸುವ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವಾಗಿ ಒಂದು ಸ್ಟಾಲ್‌ನಲ್ಲಿ ತಯಾರಿಸಿದ ತಿಂಡಿಯನ್ನು ಮತ್ತೊಂದು ಸ್ಟಾಲ್‌ನಲ್ಲಿ ಮಾಡುವಂತಿರಲಿಲ್ಲ ಎಂಬ ವಿಶಿಷ್ಟ ಯೋಜನೆಯಿಂದ, ಮೇಳಕ್ಕೆ ಆಗಮಿಸಿದವರಿಗೆ ನಾನಾ ಬಗೆಯ ಹೊಸ ಹೊಸ ರುಚಿಗಳನ್ನು ಸವಿಯುವ ಅಪರೂಪದ ಅವಕಾಶ ದೊರೆಯಿತು. ಟೋಕನ್ ವ್ಯವಸ್ಥೆ ಮೂಲಕ ಸಾರ್ವಜನಿಕರಿಗೆ ತಮ್ಮಿಷ್ಟದ ಖಾದ್ಯಗಳನ್ನು ಸುಲಭವಾಗಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಚುಮುಚುಮು ಚಳಿಗಾಲದ ವಾತಾವರಣದಲ್ಲಿ ಬಿಸಿ ಬಿಸಿ ತಿಂಡಿಗಳು  ಮೇಳದ ಆಕರ್ಷಣೆಯಾಗಿತ್ತು. ನೂರಾರು ಮಂದಿ ಕುಟುಂಬ ಸಮೇತವಾಗಿ ಮೇಳಕ್ಕೆ ಆಗಮಿಸಿ, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ತಿಂಡಿ ಸವಿದು ಸಂಭ್ರಮಿಸಿದರು. ತಿಂಡಿ ತಯಾರಿಕೆಯಲ್ಲಿ ಮಹಿಳೆಯರು ತಮ್ಮ ಕೈಚಳಕ, ನೈಪುಣ್ಯ ಮತ್ತು ಸಾಂಪ್ರದಾಯಿಕ ರುಚಿಯನ್ನು ಪ್ರದರ್ಶಿಸಿದರು. 11 ಕೌಂಟರ್‌ಗಳಲ್ಲಿ 50ಕ್ಕೂ ಹೆಚ್ಚು ವೈವಿಧ್ಯಮಯ ತಿಂಡಿ ತಿನಿಸುಗಳು ಲಭ್ಯವಿದ್ದವು.

ಮೇಳದಲ್ಲಿ ಅವರೆ ಬೇಳೆ ವಡೆ, ಅವರೆ ಬೇಳೆ ರೊಟ್ಟಿ, ಪಾನಿಪುರಿ, ಟಿಕ್ಕಿ ಪುರಿ, ಮಸಾಲೆ ಪುರಿ, ಮಂಚೂರಿ, ಬದನೆಕಾಯಿ–ಮೆಣಸಿನಕಾಯಿ–ಕ್ಯಾಪ್ಸಿಕಂ ಮಸಾಲೆ ಬೋಂಡಾ, ಮಶ್ರೂಮ್ ಬೋಂಡ, ಕಚೋರಿ, ಮಂಗಳೂರು ಬಜ್ಜಿ, ಸಬ್ಬಕ್ಕಿ ಉಪ್ಪಿಟ್ಟು, ಚಿರುಮುರಿ, ಗಿರ್ಮಿಟ್, ಹೋಂಮೇಡ್ ಚಾಕಲೇಟ್, ಅಗಸೆ ಬೀಜದ ಉಂಡೆ, ಪಾವ್ ಬಾಜಿ, ಮಡಕೆ ಕಾಳು ಉಸುಲಿ, ಅಲಸಂದೆ ಕಾಳು ವಡೆ, ನಿಪ್ಪಟ್ಟು ಮಸಾಲ, ಬಂಗಾರಪೇಟೆ ಪಾನಿಪುರಿ, ಹೆಸರುಬೇಳೆ ಕಾಂಗ್ರೆಸ್ ಪಾಪುಡಿ ಮಸಾಲೆ, ದಮ್ ಬಿರಿಯಾನಿ, ಸ್ಪೆಷಲ್ ಪಿಜ್ಜಾ ಸೇರಿದಂತೆ ಅನೇಕ ಬಗೆಯ ಸ್ಥಳೀಯ ಹಾಗೂ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಜನರನ್ನು ಸೆಳೆದವು. ತಿಂಡಿ ತಿಂದ ನಂತರ ಅರಗಿಸಲು ಹರ್ಬಲ್ ಸೋಡಾ ಕೂಡ ವಿಶೇಷ ಆಕರ್ಷಣೆಯಾಗಿತ್ತು.

ಅತ್ಯಧಿಕ ಮಾರಾಟವಾದ ಸ್ಟಾಲ್‌ಗೆ ಬಹುಮಾನ ನೀಡಲಾಗಿದ್ದು, ತಿಂಡಿ ತಯಾರಿಸಿದ ತಂಡಗಳಿಗೆ ಪ್ರೋತ್ಸಾಹ ದೊರಕಿತು. ಮೇಳದ ಅಂತಿಮ ಘಟ್ಟದಲ್ಲಿ ಫೈರ್ ಕ್ಯಾಂಪ್ ಹಾಗೂ ಡಿಜೆ ಮ್ಯೂಸಿಕ್ ಕಾರ್ಯಕ್ರಮಗಳು ನಡೆಯುವ ಮೂಲಕ ಸಂಭ್ರಮ ಇನ್ನಷ್ಟು ಹೆಚ್ಚಾಯಿತು.

ಈ ಸಂಪೂರ್ಣ ಆಹಾರ ಮೇಳವನ್ನು ವಾಸವಿ ಯುವಜನ ಸಂಘವು ಅತ್ಯಂತ ಶಿಸ್ತಿನಿಂದ ಆಯೋಜಿಸಿದ್ದು, ಸಂಘದ ಅಧ್ಯಕ್ಷರಾದ ಮನೋಜ್ ಟಿ.ಆರ್. ಹಾಗೂ ಕಾರ್ಯದರ್ಶಿ ದುರ್ಗಾ ಪ್ರಸಾದ್ ಅವರ ನೇತೃತ್ವದಲ್ಲಿ ತಂಡದ ಸದಸ್ಯರು ನಿರಂತರವಾಗಿ ನಿಗಾ ವಹಿಸಿ ಶ್ರಮಿಸಿದ ಪರಿಣಾಮ ಮೇಳವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ರುಚಿ, ಸಂಭ್ರಮ ಮತ್ತು ಸಮುದಾಯದ ಒಗ್ಗಟ್ಟನ್ನು ಒಟ್ಟುಗೂಡಿಸಿದ ಈ ಆಹಾರ ಮೇಳವು ಹುಳಿಯಾರಿನ ಹೊಸ ವರ್ಷದ ಆಚರಣೆಗೆ ವಿಶೇಷ ಮೆರಗು ನೀಡಿತು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...