ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಹುಳಿಯಾರಿನ ರೋಟರಿ ಸಂಸ್ಥೆ , ಕಮ್ಯೂನಿಟಿ ಕಾರ್ಪ್ಸ್ ಹಾಗೂ ಬೆಂಗಳೂರು ರೋಟರಿ ಮಿಡ್ಟೌನ್ ಸಹಯೋಗದಲ್ಲಿ 28ನೇ ಸಾಮೂಹಿಕ ವಿವಾಹ ಶರಣರ ಸಮ್ಮುಖದಲ್ಲಿ ನೆರವೇರಿತು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಮೃತ್ಯಂಜಯ ದೇಶಿಕೇಂದ್ರ ಸ್ವಾಮಿಗಳು ವಿವಾಹ ಬಂಧನಕೊಳಗಾದ ಜೋಡಿಗಳನ್ನು ಕುರಿತಂತೆ ದುಷ್ಚಟಗಳನ್ನು ಬದಿಗೊತ್ತಿ ಬಾಳಬೇಕು, ಆಗ ನಮ್ಮ ಬದುಕು ಹಸನಾಗುತ್ತದೆ,ಗುರುಹಿರಿಯರು ಹಾಕಿದ ಮಾರ್ಗದಲ್ಲಿ ನಡೆದರೆ ಅದರಿಂದ ನಮ್ಮ ಜೀವನ ಉತ್ತಮ ರೀತಿಯಲ್ಲಿ ರೂಪಗೊಳ್ಳತ್ತದೆ ಎಂದರು. ಧರ್ಮನಿಷ್ಠರು,ನೀತಿವಂತರು ಆಗಿ ಸಹಬಾಳ್ವೆಯಿಂದ ಹೊಂದಿಕೊಂಡರೆ ಅದರಿಂದ ಮುಕ್ತಿ ಲಭಿಸುತ್ತದೆ. ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಸಾರ್ವಜನಿಕ ಸೇವಾ ಕಾರ್ರದಲ್ಲಿ ತೊಡಗಿರುವ ರೋಟರಿ ಸಂಸ್ಥೆಗೆ ಸೇವಾಮನೋಭಾವ ಉಳ್ಳವರು ಸದಸ್ಯರಾಗಿ ಸೇರ್ಪಡೆಗೊಳ್ಳುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಮುಂದಾಗಬೇಕು ಎಂದು ಆಶೀರ್ವವಚನ ನೀಡಿದರು.

ಇಂದಿನ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 12 ವಧು-ವರರು ಹಸೆಮಣೆ ಏರುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.
ನೂತನ ವಧೂವರರಿಗೆ ದಾನಿಗಳಿಂದ ರೇಷ್ಮೇಸೀರೆ,ಬಟ್ಟೆಬರೆ,ಕಾಲುಂಗುರ,ತಾಳಿ ನೀಡಲಾಯಿತು.
ಹುಳಿಯಾರು ರೋಟರಿ ಸಂಸ್ಥೆ ಅಧ್ಯಕ್ಷ ಟಿ,ಜಿ.ಮಂಜುನಾಥ ಗುಪ್ತಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲೆ ಶಿವಗಿರಿ ಕ್ಷೇತ್ರದ ಸೂರ್ಯ ನಾರಾಯಣ ಮಹಾಸ್ವಾಮಿಗಳು,ದಾನಿಗಳಾದ ಶ್ರೀನಿವಾಸ ಶೆಟ್ಟಿ,ರೋಟರಿ ಜಿಲ್ಲಾ ರಾಜ್ಯಪಾಲ ಮಾನಂದಿ ಎನ್.ಸುರೇಶ್, ಉಪರಾಜ್ಯಪಾಲ ಶಶಿಧರ್, ಬೆಂಗಳೂರು ರೋಟರಿ ಮಿಡ್ಟೌನ್ನ ಅಧ್ಯಕ್ಷ ಶಶಿಧರ್ ಪಾಟೀಲ್, ಕಾರ್ಯದರ್ಶಿ ಅರುಣ್ ಕೆ,ಕನೂರಿ,ಶ್ರೀ ರಾಮ ಹಾಲ್ ನ ಬಾಲೇಶ್, ಟಿ.ಆರ್.ಲಕ್ಷ್ಮೀಕಾಂತ್,ರವೀಶ್,ಮಲ್ಲಿಕಾರ್ಜುನಯ್ಯ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ