ಇಂದು ನಮ್ಮಲ್ಲಿ ಸಂಪತ್ತಿನ ದುರುಪಯೋಗವಾಗುತ್ತಿದೆ ಅದಕ್ಕೆ ಪುರುಷ ಅಹಂಕಾರವೇ ಕಾರಣವಾಗಿದೆ,ಇದು ಸರಿಯಾಗಬೇಕಾದರೆ ಸಂಪತ್ತಿನ ಜವಾಬ್ದಾರಿಯನ್ನು ಸ್ತ್ರೀ ಹೊಂದಬೇಕು.ಗಾಂಧೀಜಿ ಹೇಳಿರುವಂತೆ ಆಹಿಂಸೆ ಎನ್ನುವುದು ಒಂದು ಅಸ್ತ್ರ ,ಅದನ್ನು ಸ್ತ್ರೀ ಹಿಡಿದಾಗ ಶಾಂತಿ ಎಂಬ ರಾಜ್ಯದ ನಿರ್ಮಾಣವಾಗುತ್ತದೆ ಎಂದು ಸಾಹಿತಿ ಪ್ರೋ.ಎಸ್.ಜಿ.ಸಿದ್ದರಾಮಯ್ಯ ನುಡಿದರು.
ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಬೋರನ ಕಣಿವೆ ಸೇವಾಚೇತನದ ಸಹಯೋಗದಲ್ಲಿ ಮಹಿಳೆ ಮತ್ತು ವಿಜ್ಞಾನ ಯೋಜನೆಯಡಿ ಅಂಗನವಾಡಿ ಕಾರ್ಯರ್ಕತೆಯರು ಮತ್ತು ಸ್ತ್ರೀ ಶಕ್ತಿಸಂಘಟಕರಿಗಾಗಿ ಬೋರನಕಣಿವೆ ಸಮೀಪದ ಸೇವಾಚೇತನ ಕೇಂದ್ರದಲ್ಲಿ ಶನಿವಾರದಂದು ನಡೆದ ರಾಜ್ಯ ಮಟ್ಟದ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಮನೋಧರ್ಮವನ್ನು ಸ್ತ್ರೀ ಆಳವಡಿಸಿಕೊಂಡಾಗ ತನ್ನ ಮನೆಯವರಿಂದ ನಮ್ಮ ಭೂಮಿಗೆ ಉಪಯುಕ್ತವಾಗುವಂತೆ ಮಾಡುತ್ತಾಳೆ,ಇದರಿಂದ ಉತ್ತಮ ಸಂಸ್ಕೃತಿಯನ್ನು ವೃದ್ದಿಸಬಹುದು. ಜೊತೆಯಲ್ಲಿ ಜಗತ್ತಿನಲ್ಲೇ ದೊಡ್ಡ ಪಿಡುಗಾಗಿರುವ ಭ್ರಷ್ಟಾಚಾರದ ನಿರ್ಮೂಲನೆಯಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ ಸಿರಿಯಜ್ಜಿ,ಸಾಲುಮರದ ತಿಮ್ಮಕ್ಕ ಅವರ ಆದರ್ಶದ ಪಾಲನೆ ಆಗಬೇಕಿದೆ.ಬದುಕಿನ ಆಶುದ್ದತೆಯನ್ನು ತೊಡೆದುಹಾಕಲು ವೈಜ್ಞಾನಿಕ ಮನೋಧರ್ಮದೆಡೆಗೆ ನಮ್ಮ ಪಯಣ ಸಾಗಬೆಕಿದೆ ಎಂದ ಅವರು ಹಿಂದೆ ಊರಿಗೊಂದು ಗುಂಡುತೋಪು ಇದ್ದಂತೆ ಇಂದು ಊರಿಗೊಂದು ಉದ್ಯಾನವನ ನಿರ್ಮಿಸಿ ಅದನ್ನು ಕಾಡಿನಂತೆ ಬೆಳೆಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಕರ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಇಂದು ವಿಜ್ಞಾನ ಅಗಾಧ ರೀತಿಯಲ್ಲಿ ಬೆಳೆಯುತ್ತಿದ್ದು ಅದರಿಂದ ನಮಗೆ ಎಷ್ಟೇ ಉಪಯುಕ್ತತೆ ಇದ್ದರೂ ನಮ್ಮ ಭೂಮಿಗೆ ಅದರಿಂದ ಯಾವುದೇ ಉಪಯೋಗವಾಗುತ್ತಿಲ್ಲಾ ಎಂದು ಕಳವಳ ವ್ಯಕ್ತಪಡಿಸಿದರು.
ಚಲನಚಿತ್ರ ನಟ ಅಶೋಕ್ ಡಾ.ವಸುಂಧರಾ ಭೂಪತಿ ರಚಿಸಿದ "ಭೂಮಿಗಾಥೆ" ಎಂಬ ಪುಸ್ತಕವನ್ನು ಅನಾವರಣ ಮಾಡಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಗೌರವ ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ, ಲೇಖಕಿ ಡಾ.ಮೀನಾಕ್ಷಿ ಬಾಳಿ,ತಹಸಿಲ್ದಾರ್ ಟಿ.ಸಿ.ಕಾಂತರಾಜು, ಸೇವಾ ಚೇತನ ಬಳಗದ ವಿಠಲ್ , ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ