ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಂಗಭೂಮಿಯ ಮುಖಾಂತರ ನಾಡು ನುಡಿ ಭಾಷೆ ಸಂಸ್ಕೃತಿ ಉಳಿಸುವ ಕೆಲಸವಾಗಬೇಕು

ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮೀಪದ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಶ್ರೀಮಾತ ನವರಾತ್ರಿ ಸಾಂಸ್ಕೃತಿಕ ಉತ್ಸವಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ ಚಾಲನೆ ನೀಡಿದರು.ಖ್ಯಾತ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ,ರಂಗಕರ್ಮಿ ಶ್ರೀನಿವಾಸ.ಜಿ.ಕಪ್ಪಣ್ಣ, ವರ್ತಕ ಕೆ.ಬಿ.ಮರುಳ ಸಿದ್ದಪ್ಪ,ಬಾಬು ಹಿರಣ್ಣಯ್ಯ ಇದ್ದರು.  ಹುಳಿಯಾರು: ರಂಗಭೂಮಿ ಉಳಿಯಬೇಕು, ರಂಗಭೂಮಿಯ ಮುಖಾಂತರ ನಾಡು-ನುಡಿ- ಭಾಷೆ- ಸಂಸ್ಕೃತಿ ಉಳಿಸುವ ಕೆಲಸವಾಗಬೇಕು. ಅದಕ್ಕೂ ಮೀರಿ ಸ್ಥಳೀಯರ ರಂಗ ಕಲೆ ಗುರುತಿಸುವ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಈ ರಂಗಭೂಮಿ ಬಳಕೆಯಾಗಬೇಕು ಎಂದು ಖ್ಯಾತ ರಂಗಭೂಮಿ ಹಾಗೂ ಕಿರುತೆರೆ ಕಲಾವಿದ ಬಾಬು ಹಿರಣ್ಣಯ್ಯ ತಿಳಿಸಿದರು.     ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮೀಪದ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಗುರುವಾರ ಸಂಜೆ ನಡೆದ ಶ್ರೀಮಾತ ನವರಾತ್ರಿ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವ್ಯಕ್ತಿ ಬೆಳೆದಂತೆಲ್ಲ ಸಾಧಕನಾಗಬೇಕು, ಸಮಾಜಮುಖಿಯಾಗಿ ಬದುಕಬೇಕು ಎಂದರು.                 ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾದ ರಂಗಮಂದಿರವನ್ನು ಯಾವುದೇ ಫಲಾಪಲ ಅಪೇಕ್ಷೆಯಿಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಿಸಿರುವ ಗಂಗಾಧರ್ ಅವರ ಕಾರ್ಯ ಶ್ಲಾಘನೀಯ.ತನಗಾಗಿ ಏನನ್ನೂ ಬಯಸದೆ ಇಲ್ಲಿನ ಗ್ರಾಮದ ಸಂಸ್ಕೃ

ಜಾನಪದ ನಮ್ಮ ಬದುಕಿನ,ಸಮುದಾಯದ ಸಂಸ್ಕೃತಿ :ಕಪ್ಪಣ್ಣ

ಹುಳಿಯಾರಿನಲ್ಲಿ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ೯ ದಿನಗಳ ಕಾಲ "ಕನ್ನಡದ ಅಂತರಾಷ್ಟ್ರೀಯ ಕಲಾವಿದರಿಂದ ರಾಷ್ಟ್ರೀಯ ಉತ್ಸವ" ಹುಳಿಯಾರು: ಜಾನಪದ ನಮ್ಮ ಬದುಕಿನ,ಸಮುದಾಯದ ಸಂಸ್ಕೃತಿಯಾಗಿದ್ದು ಇದನ್ನು ಉಳಿಸಿ ಬೆಳಸಿ ಮುಂದಿನ ತಲೆಮಾರುಗಳಿಗೆ ಜೀವಂತವಾಗಿರಿಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಸಮಾಜಮುಖಿಯಾಗಿ ಚಿಂತಿಸಿ ,ಜವಬ್ದಾರಿ ಹೊರಬೇಕಿದೆ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ತಿಳಿಸಿದರು.            ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ೯ ದಿನಗಳ ಕಾಲ ಆಯೋಜಿಸಲಾಗಿರುವ ಶ್ರೀ ಮಾತಾ ನವರಾತ್ರಿ ಸಾಂಸ್ಕೃತಿಕ ಉತ್ಸವದ ಆಹ್ವಾನಪತ್ರಿಕೆಯನ್ನು ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಭಾನುವಾರ ಬಿಡುಗಡೆ ಮಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು ಜಾನಪದ ನಮ್ಮ ಮಣ್ಣಿನ ಸಂಸ್ಕೃತಿಯಾಗಿದ್ದು, ಜಾನಪದವಿಲ್ಲದ ಕಲೆಯೇ ಇಲ್ಲ.೧೨ನೇ ಶತಮಾನದ ವಚನಗಳು ಆಗಲೇ ಇಂಗ್ಲೀಷಿಗೆ ಹೋಗಿದ್ದಲ್ಲಿ ವಚನಕಾರರು ವಿಶ್ವದ ಪ್ರಸಿದ್ಧ ವ್ಯಕ್ತಿಗಳಾಗುತ್ತಿದ್ದರು.ನಮ್ಮ ನಾಡಿನ ಮೂಲಕಲೆಯಾದ ಜಾನಪದ ಸಾಹಿತ್ಯ,ದಾಸಸಾಹಿತ್ಯ,ವಚನ ಸಾಹಿತ್ಯದ ಬಗ್ಗೆ ಅನಾದರ ತಳೆದಿರುವುದರಿಂದ ಅವುಗಳಿಗೆ ಸಿಗಬೇಕಾದ ಮನ್ನಣೆ ದೊರೆಯದೆ ಅವು ನಿರ್ಲಕ್ಷ್ಯಕೊಳ್ಳಪಟ್ಟಿವೆ ಎಂದು ಅಭಿಪ್ರಾಯಪಟ್ಟರು.          ನಾಡಿನ ವೈಶಿಷ್ಟಪೂರ್ಣ ಜಾನಪದ ಕಲೆಗಳಕಲೆಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ ಹಾಗೂ ಜಾನಪದ ಕಲಾವಿದರನ್ನು

ಹುಳಿಯಾರಿನಲ್ಲಿ ಸಂಭ್ರಮದ ಗಣಪತಿ ವಿಸರ್ಜನೋತ್ಸವ

ಹುಳಿಯಾರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ 67ನೇ ವರ್ಷದ ಅಂಗವಾಗಿ ವಿಶೇಷವಾಗಿ ಪ್ರತಿಷ್ಠಾಪಿಸಲಾಗಿದ್ದ ಪರಿಸರ ಗಣಪತಿಯನ್ನು ಶುಕ್ರವಾರ ರಾತ್ರಿ ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಶನಿವಾರದಂದು ವಿಸರ್ಜಿಸಲಾಯಿತು. ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪರಿಸರ ಗಣಪತಿಯನ್ನು ಕೇಶವಾಪುರದ ಕೆರೆಯ ದೊಡ್ಡಗುಂಡಿಯಲ್ಲಿ ಶನಿವಾರದಂದು ವಿಸರ್ಜಿಸಲಾಯಿತು. ಸ್ವಾಮಿಯ ಗಂಗಾಪ್ರವೇಶದ ಅಂಗವಾಗಿ ಕಳೆದ ಮೂರು ದಿನಗಳಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬುಧವಾರದಂದು ಹೋಮಹವನಾದಿಗಳನ್ನು ನಡೆದು ಅನ್ನಸಂತರ್ಪಣೆ ಮಾಡಿದರೆ ಗುರುವಾರ ಮತ್ತು ಶುಕ್ತವಾರದಂದು ಸಾಂಸ್ಕೃತಿಕಕಾರ್ಯಕ್ರಮ,ಪ್ರತಿಭಾ ಪುರಸ್ಕಾರ ಹಾಗೂ ಸಂಜೆ ಉತ್ಸವ ,ಮೆರವಣಿಗೆ ಏರ್ಪಡಿಸಲಾಗಿತ್ತು. ದೇವಾಲಯದಿಂದ ಆರಂಭಗೊಂಡ ಸ್ವಾಮಿಯ ಉತ್ಸವ ಪಟ್ಟಣದ ಗಾಂಧಿಪೇಟೆ,ಬಸ್ ನಿಲ್ದಾಣ, ರಾಂಗೋಪಾಲ್ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು, ಮೆರವಣಿಗೆ ಸಂದರ್ಭದಲ್ಲಿ ಚಿಟ್ಟಿಮೇಳ, ನಾದಸ್ವರ,ನಾಸಿಕ್ ಡೋಲು,ಲಾರಿ ಡ್ಯಾನ್ಸ್ ಉತ್ಸವಕ್ಕೆ ಮೆರಗು ನೀಡಿದವು. ಬೀದಿಗಳಲ್ಲಿ ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಭಕ್ತರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೆರವಣಿಗೆ ನಂತರ ಬಸ್ ನಿಲ್ದಾಣದಲ್ಲಿ ಕೆಲ ಕಾಲ ಸಾರ್ವಜನಿಕರ

ಹುಳಿಯಾರು:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಖಂಡನೆ

ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನಾರ್ಹವಾದುದು ಎಂದು ಸಾಹಿತಿ ಹಾಗೂ ಬಿಎಂಎಸ್ ಕಾಲೇಜಿನ ಪ್ರಾಂಶುಪಾಲ ಪ್ರೋ ಬಿಳಿಗೆರೆ ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹುಳಿಯಾರು ಹೋಬಳಿ ಪತ್ರಕರ್ತರ ಸಂಘ ಹಾಗೂ ಚಿಂತನಶೀಲರಿಂದ ನಡೆದ ಸಾಂಕೇತಿಕ ಪ್ರತಿಭಟನೆ.         ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹುಳಿಯಾರು ಹೋಬಳಿ ಪತ್ರಕರ್ತರ ಸಂಘ ಹಾಗೂ ಚಿಂತನಶೀಲರಿಂದ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಗಾಂಧೀಜಿಯ ಜಾತ್ಯಾತೀತತೆ, ಬಸವಣ್ಣನವರ ಸಮಾನತೆಯ ಸಮಾಜ , ಅಂಬೇಡ್ಕರ್ ಸಮಾನತೆಯ ತಳಹದಿಯಲ್ಲಿ ತಮ್ಮ ವಿಚಾರಧಾರೆಗಳನ್ನು ಮಂಡಿಸುತ್ತಿದ್ದ ಗೌರಿಯವರ ಹತ್ಯೆ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ.          ತಮ್ಮ ಪ್ರಗತಿಪರ ವಿಚಾರಧಾರೆ ಹಾಗೂ ಚಿಂತನೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಗೌರಿ ಅವರನ್ನು ಹತ್ಯೆ ಮಾಡುವ ಮೂಲಕ ಯಾವುದೇ ವಿಚಾರ ಅಂತ್ಯಗೊಳಿಸಲು ಸಾಧ್ಯವಿಲ್ಲ.ಹತ್ಯೆಯಿಂದ ಆತಂಕ ಸೃಷ್ಟಿಸಬಹುದು ಅಷ್ಟೇ.ಗೌರಿಯನ್ನು ಹತ್ಯೆ ಮಾಡಿದಾಕ್ಷಣ ಅವರು ಪ್ರತಿಪಾದಿಸಿದ ವಿಚಾರಧಾರೆಗಳ ಮುಗಿಸಿದ್ದೇವೆ ಎಂದು ಭಾವಿಸಿದಲ್ಲಿ ಅದು ಮೂರ್ಖತನ. ವಿಚಾರವಂತರ ಹತ್ಯೆಯ ಬಗ್ಗೆ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದ

ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಹುಳಿಯಾರಿನ ಸಾಕ್ಷ್ಯ ಐ ಕೇರ್ ಅಂಡ್ ಡೆಂಟಲ್ ಹಾಸ್ಪಿಟಲ್ ಇವರ ಸಹಕಾರದೊಂದಿಗೆ ಸೆ.7 ರ ಗುರುವಾರದಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 3 ಗಂಟೆವರೆಗೂ ಉಚಿತ ಹೃದಯರೋಗ,ನರರೋಗ,ಮೂತ್ರಪಿಂಡ ಮತ್ತು ಕಣ್ಣಿನ ತಪಾಸಣಾಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹುಳಿಯಾರು ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಉಚಿತ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಲಕ್ಷ್ಮೀ 9743839070 ಇವರನ್ನು ಸಂಪರ್ಕಿಸಬಹುದಾಗಿದೆ.

ದೊಡ್ಡಎಣ್ಣೇಗೆರೆಯಲ್ಲಿ ಶಿಕ್ಷಕರ ದಿನಾಚರಣೆ

ಹುಳಿಯಾರು: ಸಮೀಪದ ದೊಡ್ಡ ಎಣ್ಣೇಗೆರೆಯ ಜ್ಞಾನಭಾರತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲಾ ಆಡಳಿತವರ್ಗ ಮತ್ತು ಪೋಷಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಹುಳಿಯಾರು ಸಮೀಪದ ದೊಡ್ಡ ಎಣ್ಣೇಗೆರೆಯ ಜ್ಞಾನಭಾರತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ನಿಮಿತ್ತ ಶಿಕ್ಷಕರಿಗಾಗಿ ಚರ್ಚಾ ಸ್ಪರ್ಧೆ,ಮೂಕಾಭಿನಯ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಪೋಷಕರುಗಳು ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಹಿಂದಿನ ಶಿಕ್ಷಣ ಪದ್ಧತಿ-ಇಂದಿನ ಶಿಕ್ಷಣ ಪದ್ಧತಿ ಎಂಬ ವಿಷಯದ ಬಗ್ಗೆ ಕುವೆಂಪು ತಂಡ ಹಾಗೂ ದರಾ ಬೇಂದ್ರೆ ತಂಡದ ನಡುವೆ ಚರ್ಚೆ ಏರ್ಪಟ್ಟು ದ.ರಾ.ಬೇಂದ್ರೆ ತಂಡ ಗೆಲುವು ಸಾಧಿಸಿತು. ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಡಿ.ಎಸ್.ಪ್ರಶಾಂತ್,ಮುಖ್ಯ ಶಿಕ್ಷಕಿ ಅನಿತಾ,ಎಬಿವಿಪಿ ನರೇಂದ್ರಬಾಬು ಪಾಲ್ಗೊಂಡಿದ್ದರು ಪೋಷಕರುಗಳಾದ ಶಶಿಕಾಂತ್ ಶುಭಾ,ರವಿಆರಾಧ್ಯ ಶ್ವೇತಾ,ಉಮಾ ಲಿಂಗರಾಜು ಹಾಗೂ ಉಮೇಶ್ ದಂಪತಿಗಳು ತೀರ್ಪುಗಾರರಾಗಿ ಆಗಮಿಸಿದ್ದರು