ಹುಳಿಯಾರು: ಸಮೀಪದ ದೊಡ್ಡ ಎಣ್ಣೇಗೆರೆಯ ಜ್ಞಾನಭಾರತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲಾ ಆಡಳಿತವರ್ಗ ಮತ್ತು ಪೋಷಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಹುಳಿಯಾರು ಸಮೀಪದ ದೊಡ್ಡ ಎಣ್ಣೇಗೆರೆಯ ಜ್ಞಾನಭಾರತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. |
ಈ ನಿಮಿತ್ತ ಶಿಕ್ಷಕರಿಗಾಗಿ ಚರ್ಚಾ ಸ್ಪರ್ಧೆ,ಮೂಕಾಭಿನಯ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಪೋಷಕರುಗಳು ತೀರ್ಪುಗಾರರಾಗಿ ಕೆಲಸ ನಿರ್ವಹಿಸಿದರು. ಹಿಂದಿನ ಶಿಕ್ಷಣ ಪದ್ಧತಿ-ಇಂದಿನ ಶಿಕ್ಷಣ ಪದ್ಧತಿ ಎಂಬ ವಿಷಯದ ಬಗ್ಗೆ ಕುವೆಂಪು ತಂಡ ಹಾಗೂ ದರಾ ಬೇಂದ್ರೆ ತಂಡದ ನಡುವೆ ಚರ್ಚೆ ಏರ್ಪಟ್ಟು ದ.ರಾ.ಬೇಂದ್ರೆ ತಂಡ ಗೆಲುವು ಸಾಧಿಸಿತು.
ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಡಿ.ಎಸ್.ಪ್ರಶಾಂತ್,ಮುಖ್ಯ ಶಿಕ್ಷಕಿ ಅನಿತಾ,ಎಬಿವಿಪಿ ನರೇಂದ್ರಬಾಬು ಪಾಲ್ಗೊಂಡಿದ್ದರು
ಪೋಷಕರುಗಳಾದ ಶಶಿಕಾಂತ್ ಶುಭಾ,ರವಿಆರಾಧ್ಯ ಶ್ವೇತಾ,ಉಮಾ ಲಿಂಗರಾಜು ಹಾಗೂ ಉಮೇಶ್ ದಂಪತಿಗಳು ತೀರ್ಪುಗಾರರಾಗಿ ಆಗಮಿಸಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ