ಹಳ್ಳಿ ಹುಡುಗನೊಬ್ಬ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡನ್ನು ಪ್ರಧಾನಿ ಮೋದಿ ಅವರೊಂದಿಗೆ ವೀಕ್ಷಿಸಲಿದ್ದಾನೆ. ಇದೇ ಜನವರಿ 26ರಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿದೇಶಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಳ್ಳುವ ಅವಕಾಶ ಹುಳಿಯಾರಿನ ತಿಮ್ಮನಹಳ್ಳಿಯ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿ ಯಶಸ್‌ಗೆ ದೊರೆತಿದೆ. ಹೌದು...ಯಶಸ್ ಪರಿಕ್ರಮಿಸಿರುವ ಯಶಸ್ಸಿನ ಹಾದಿ ಅವನನ್ನು ಪ್ರಧಾನಮಂತ್ರಿ ಬಾಕ್ಸ್ ನಲ್ಲಿ ಕುಳಿತು ಗಣರಾಜ್ಯೋತ್ಸವ ಪೆರೇಡ್ ವೀಕ್ಷಣೆ ಮಾಡಲು ಅನುವು ಮಾಡಿಕೊಟ್ಟಿದೆ. ಹುಳಿಯಾರು ಸಮೀಪದ ಹಳ್ಳಿಗಾಡಿನ ತಿಮ್ಮನಹಳ್ಳಿಯ ಕೃಷಿಕರಾದ ದೇವರಾಜು ಹಾಗೂ ನೇತ್ರಾವತಿ ಪುತ್ರನಾದ ಯಶಸ್ ದೇವರಾಜು ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿ ಸಾಧಿಸಿದ್ದು ಬಹಳ. ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿ ಯಶಸ್ ಕಳೆದ ಸಾಲಿನ ಸಿಬಿಎಸ್ಸಿ ಹತ್ತನೇ ತರಗತಿಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದು ದಕ್ಷಿಣ ವಲಯ ಹಾಗೂ ರಾಜ್ಯಕ್ಕೆ ಪ್ರಥಮನಾಗಿ ಉತ್ತೀರ್ಣರಾಗುವ ಮೂಲಕ ರಾಜ್ಯಕ್ಕೆ ಹಾಗೂ ತುಮಕೂರು ಜಿಲ್ಲೆ ಸೇರಿದಂತೆ ಹುಳಿಯಾರಿನ ವಿದ್ಯಾವಾರಿಧಿ ಶಾಲೆಗೆ ಕೀರ್ತಿ ತಂದಿದ್ದು ಇದೀಗ ಯಶೋಗಾಥೆ. ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070