ಕುಲ ಕುಲವೆಂದು ಹೊಡೆದಾಡಬೇಡಿ ಹುಚ್ಚಪ್ಪಗಳಿರಾ ಎಂದು ಶತಶತಮಾನಗಳ ಹಿಂದೆಯೇ ದಾಸ ಶ್ರೇಷ್ಠ ಕನಕದಾಸರು ಹೇಳಿದ್ದ ವಿಚಾರವನ್ನು ಇಂದಿಗೂ ಅರ್ಥ ಮಾಡಿಕೊಳ್ಳದ ಜನ ಸಲ್ಲದ ವಿಷಯಕ್ಕೇ ಜಾತಿಯನ್ನು ಮುಂದೆ ಮಾಡಿಕೊಂಡು ಇವತ್ತು ಬಡಿದಾಡುತ್ತಿರುವುದು ವಿಪರ್ಯಾಸ ಎಂದು ಮಾಜಿ ಶಾಸಕರಾದ ಕಿರಣ್ ಕುಮಾರ್ ವಿಷಾಧಿಸಿದರು.
ಹುಳಿಯಾರಿನ ಧ್ಯಾನ ನಗರಿಯಲ್ಲಿರುವ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ವಿದ್ಯಾವಾರಧಿ ಇಂಟರ್ ನ್ಯಾಷನಲ್ ಶಾಲೆಯವತಿಯಿಂದ ಕನಕ ಜಯಂತಿ ಆಚರಿಸಲಾಯಿತು. |
ಹುಳಿಯಾರಿನ ಧ್ಯಾನ ನಗರಿಯಲ್ಲಿರುವ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ವಿದ್ಯಾವಾರಧಿ ಇಂಟರ್ ನ್ಯಾಷನಲ್ ಶಾಲೆಯವತಿಯಿಂದ ನಡೆದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹುಳಿಯಾರಿನಲ್ಲಿ ಕಳದೆರಡು ದಿನಗಳಿಂದ ನಡೆಯುತ್ತಿರುವ ವಿದ್ಯಾಮಾನ ಪ್ರಸ್ತಾವಿಸಿ ಅವರು ಮಾತನಾಡಿ ಕನಕದಾಸರ ವೃತ್ತ ಎಂಬ ನಾಮಫಲಕವನ್ನು ಕಿತ್ತೊಗೆದು ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನಿಡಲು ಹೊರಟ ಸಂಗತಿ ಬೇಸರ ತರಿಸುತ್ತದೆ.ವಿಕೃತ ಮನಸ್ಸುಗಳನ್ನು ಕಡಿವಾಣ ಹಾಕದಿದ್ದಲ್ಲಿ ಸೌಹಾರ್ದತೆಗೆ ಧಕ್ಕೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶರಣ ಸಾಹಿತಿಗಳಾದ ಶ್ಯಾಮಸುಂದರ್ ದಿಬ್ಬದಹಳ್ಳಿ,ಕಾರ್ಯದರ್ಶಿ ಕವಿತಾ ಕಿರಣ್,ವಿದ್ಯಾವಾರಿಧಿ ಶಾಲೆಯ ಪ್ರಾಂಶುಪಾಲ ಕೃಷ್ಣನ್ ಕೌಶಿಕ್,ಸತೀಶ್ ನಾಯಕ್ ಪ್ರತಾಪ್ ಟಿ.ಸಿ.ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ