ಹುಳಿಯಾರು ಪಟ್ಟಣದಲ್ಲಿ ಈದ್-ಮಿಲಾದ್ ಅಂಗವಾಗಿ ಭಾನುವಾರ ಮುಸ್ಲಿಂ ಬಾಂಧವರಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಭ್ರಮದ ಮೆರವಣಿಗೆ ನಡೆಯಿತು.
ಮದೀನಾ ಮಸೀದಿಯಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ,ಬಿ ಹೆಚ್ ರಸ್ತೆ,ರಾಮ್ ಗೋಪಾಲ್ ಸರ್ಕಲ್ ಮಾರ್ಗವಾಗಿ ತೆರಳಿತು.ಧಾರ್ಮಿಕ ಬಾವುಟದ ಜೊತೆಗೆ ರಾಷ್ಟ್ರಧ್ವಜ ಹಿಡಿದು ನಡೆದಿದ್ದು ಗಮನಸೆಳೆಯಿತು.ನೂರಾರು ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ,ಮಾಜಿ ಶಾಸಕರಾದ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ,ತಾಲೂಕು ಪಂಚಾಯಿತಿ ಸದಸ್ಯ ಹೆಚ್.ಎನ್ ಕುಮಾರ್ ಮತ್ತಿತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ ಶುಕ್ರವಾರ ಆಯೋಜಿಸಲಾಗಿದ್ದ ಮೆರವಣಿಗೆಯು ಪಟ್ಟಣದಲ್ಲಿ ನಾಮಫಲಕ ವಿವಾದದಿಂದಾಗಿ ಸೆಕ್ಷನ್ 144 ಜಾರಿಯಲ್ಲಿದ್ದರಿಂದ ಮುಂದೂಡಲ್ಪಟ್ಟಿ ಭಾನುವಾರ ಭಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಆಚರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ