ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನಲ್ಲಿ ತುಮಕೂರು ಹಾಲು ಒಕ್ಕೂಟದ ನೂತನ ನಂದಿನಿ ಮಳಿಗೆ ಶುಭಾರಂಭ

ಹುಳಿಯಾರಿನಲ್ಲಿ ತುಮಕೂರು ಹಾಲು ಒಕ್ಕೂಟದ ನೂತನ ನಂದಿನಿ ಮಳಿಗೆ ಶುಭಾರಂಭ ------------------------------------------ ಹುಳಿಯಾರು ಪಟ್ಟಣದ ಬಸ್ ನಿಲ್ದಾಣದ ಮಾರುತಿ ದರ್ಶನ್ ಹೋಟೆಲ್ ಹಿಂಭಾಗದಲ್ಲಿರುವ ಬನಶಂಕರಿ ಕಾಂಪ್ಲೆಕ್ಸ್ (ಬಸ್ ಏಜೆಂಟ್ ಲೋಕೇಶನ ಬಿಲ್ಡಿಂಗ್) ನಲ್ಲಿ ತುಮಕೂರು ಹಾಲು ಒಕ್ಕೂಟದ ನಂದಿನಿ ಮಳಿಗೆ ಇಂದು ಬುಧವಾರ ಶುಭಾರಂಭಗೊಂಡಿತು. ನಂದಿನಿ ಮಳಿಗೆ ಆರಂಭಿಸಿರುವ ಹರ್ಷ ಮಾತನಾಡಿ ನಂದಿನಿ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳು ಸದಾಕಾಲ ದೊರೆಯಲಿದೆ ಎಂದರು. ನಂದಿನಿ ಬ್ರಾಂಡಿನ ತುಪ್ಪದ ಮೈಸೂರ್ ಪಾಕ್,ಪೇಡ,ಬೇಸನ್ ಲಾಡು,ಚಾಕೊಲೇಟ್ ಬರ್ಫಿ,ಕೊಕೊನೆಟ್ ಬರ್ಫಿ,ಕುಂದಾ,ಬಾದಾಮ್ ಹಲ್ವಾ‌,ಡ್ರೈ ಫ್ರೂಟ್ಸ್ ಬರ್ಫಿ, ಬಾದಾಮ್ ಮಿಲ್ಕ್ ,ಪನೀರ್,ಚೀಸ್,ಎಲ್ಲಾ ಬಗೆಯ ಮೊಸರು,ಹಾಲು,ನಂದಿನಿ ರೆಡಿ ಟು ಈಟ್ ಉತ್ಪನ್ನಗಳು, ಬಟರ್ ಸ್ಕಾಚ್ ಐಸ್ ಕ್ರೀಂ,ಚಾಕೊಲೇಟ್ ಐಸ್ ಕ್ರೀಂ,ಮ್ಯಾಂಗೋ ಲಸ್ಸಿ,ಪೈನಾಪಲ್- ಕಾಜು- ದ್ರಾಕ್ಷಿ- ವೆನಿಲಾ- ಸ್ಟ್ರಾಬೆರಿ- ಚಾಕೋ ಬಾರ್, ನಂದಿನಿ ಮ್ಯಾಜಿಕ್ ಸೇರಿದಂತೆ ಎಲ್ಲಾ ತರಹದ ನಂದಿನಿ ಉತ್ಪನ್ನಗಳು ಇಲ್ಲಿ ದೊರೆಯಲಿದೆ. ಅಲ್ಲದೆ ಕಾರ ತಿನಿಸುಗಳಾದ ಬೆಣ್ಣೆ ಮುರುಕು, ಕೋಡುಬಳೆ, ಬೂಂದಿ ಅಲ್ಲದೆ ನಂದಿನಿ ಬ್ರಾಂಡಿನ ಸಿರಿಧಾನ್ಯ ಉತ್ಪನ್ನ ಸಹ ದೊರೆಯಲಿದೆ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಆರ್ಡರ್

ಹುಳಿಯಾರು ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಮೋಹನ್ ಕುಮಾರ್‌ಗೆ ಡಾಕ್ಟರೇಟ್ ಪದವಿ

ಹುಳಿಯಾರು ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಮೋಹನ್ ಕುಮಾರ್‌ಗೆ ಡಾಕ್ಟರೇಟ್ ಪದವಿ  ಹುಳಿಯಾರು: ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಳಿಯಾರು- ಇಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ. ಮೋಹನ್ ಕುಮಾರ್ ಎಂ.ಜೆ. ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ನಟರಾಜ್ ಹುಳಿಯಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ ಬರ್ಟೋಲ್ಟ್ ಬ್ರೆಕ್ಟ್ ಮತ್ತು ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ಚರಿತ್ರೆ ಮತ್ತು ಸಮಕಾಲೀನ ಸಮಾಜ : ತೌಲನಿಕ ಅಧ್ಯಯನ ” ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ.  ಮೂಲತಃ ಮೈಸೂರು ಜಿಲ್ಲೆಯ, ಕೆ.ಆರ್. ನಗರ ತಾಲ್ಲೂಕಿನ ಮಿರ್ಲೆ ಗ್ರಾಮದವರಾದ ಇವರು ಶ್ರೀ ಜಯರಾಮೇಗೌಡ ಮತ್ತು ದಿವಂಗತ ಸರಸ್ವತಮ್ಮ ದಂಪತಿಗಳ ಪುತ್ರರಾಗಿರುತ್ತಾರೆ. ಡಾಕ್ಟರೇಟ್ ಪದವಿಗೆ ಭಾಜನರಾಗಿರುವ ಮೋಹನ್ ಕುಮಾರ್ ಅವರನ್ನು ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಕೃಷ್ಣಮೂರ್ತಿ ಬಿಳಿಗೆರೆ ಸೇರಿದಂತೆ ಪ್ರಾಧ್ಯಾಪಕರು ಹಾಗೂ ಆಡಳಿತ ವರ್ಗದವರು ಅಭಿನಂದಿಸಿದ್ದಾರೆ.

ನಾಗರಾಜರಾವ್ ಆಗಲಿಕ್ಕೆ ವಿಪ್ರ ಸಮಾಜಕ್ಕೆ ತುಂಬಲಾರದ ನಷ್ಟ:ಹು.ಕೃ.ವಿಶ್ವನಾಥ್

ನಾಗರಾಜರಾವ್ ಆಗಲಿಕ್ಕೆ ವಿಪ್ರ ಸಮಾಜಕ್ಕೆ ತುಂಬಲಾರದ ನಷ್ಟ:ಹು.ಕೃ.ವಿಶ್ವನಾಥ್ ಹುಳಿಯಾರು :ತಮ್ಮ ಸ್ವ ಶಕ್ತಿಯಿಂದಲೇ ಬ್ರಾಹ್ಮಣ ಸಮಾಜದ ಮೂಲಕ ಗುರುತಿಸಿಕೊಂಡು ಸಮುದಾಯದ ಏಳಿಗೆಗೆ ಕಾರಣರಾಗಿ, ತುಮಕೂರಿನ ಕಾರ್ಪೊರೇಟರ್ ಕೂಡ ಆಗಿ, ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಆಗಿ ಎಲ್ಲಾ ಸಮಾಜದ ನಡುವೆ ಕೊಂಡಿಯಂತಿದ್ದ ಎನ್.ಆರ್. ನಾಗರಾಜರಾವ್(ಪಟೇಲ್) ಅವರ ಅಗಲಿಕೆ ಸಮಾಜಕ್ಕೆ  ದೊಡ್ಡ ನಷ್ಟವಾಗಿದೆ. ಎಲ್ಲರೊಡನೆ ಉತ್ತಮ ಒಡನಾಟ ಹೊಂದಿ ಸಮುದಾಯದ ಸಂಘಟನೆಗೆ ಹಾಗೂ ಏಳಿಗೆಗೆ ಕಾರಣೀಕರ್ತರಾಗಿ ಸಮಾಜಸೇವಾ ಮುಖಿಯಾಗಿದ್ದ ಪಟೇಲ್ ನಾಗರಾಜರಾವ್ ಇಂದು ಹೃದಯಾಘಾತದ ಮೂಲಕ ನಿಧನರಾಗಿರುವುದು ವಿಪ್ರ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹುಳಿಯಾರು ವಿಪ್ರ ಸಮಾಜದ ಮುಖಂಡರಾದ ಹು.ಕೃ. ವಿಶ್ವನಾಥ್‌ರವರು ಶ್ರೀ ಸೀತಾರಾಮ ಪ್ರತಿಷ್ಠಾನ ಹಾಗೂ ಹುಳಿಯಾರು ಬ್ರಾಹ್ಮಣ ಸಮಾಜದ ಪರವಾಗಿ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿಯ ವೈ.ವಿ.ನಂಜುಂಡಪ್ಪಗೆ ಸೇವಾ ಭೂಷಣ ಪ್ರಶಸ್ತಿ

ಚಿಕ್ಕನಾಯಕನಹಳ್ಳಿಯ ವೈ.ವಿ.ನಂಜುಂಡಪ್ಪಗೆ ಸೇವಾ ಭೂಷಣ ಪ್ರಶಸ್ತಿ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆಯವರು  ತ ಮ್ಮ ಸಂಘಟನೆಯ ದಶಮಾನೋತ್ಸದ ಪ್ರಯುಕ್ತ  ರಾಜ್ಯದ ವಿವಿಧ ಕ್ಷೇತ್ರದಲ್ಲಿ  ಸೇವೆಸಲ್ಲಿಸಿರುವ ಸಾಧಕರನ್ನು ಗುರುತಿಸಿ  ಅವರುಗಳಿಗೆ ರಾಜ್ಯ ಮಟ್ಟದಲ್ಲಿ "ಸೇವಾ  ಭೂಷಣ '' ಪ್ರಶಸ್ತಿಯನ್ನು ನಿಡುತ್ತಿರುವುದು ಅಭಿನಂದನೀಯ ಕಾರ್ಯಕ್ರಮ. ಪ್ರಸಕ್ತ ಸಾಲಿನಲ್ಲಿ ಚಿಕ್ಕನಾಯಕನಹಳ್ಳಿಯ ಶ್ರೀ ವೈ.ವಿ.ನಂಜುಂಡಪ್ಪನವರನ್ನು ಗುರುತಿಸಿ "ಸೇವಾ ಭೂಷಣ" ಪ್ರಶಸ್ತಿಗೆ ಅಯ್ಕೆಮಾಡಲಾಗಿದ್ದು ಮಾರ್ಚ್‌ 21 ನೇ ಭಾನುವಾರ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶ್ರೀಯುತರನ್ನು  ಸನ್ಮಾನಿಸಲಾಗುವುದು.

ಹುಳಿಯಾರಿನ 16 ವಾರ್ಡಗಳಿಗೆ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ

ಹುಳಿಯಾರು ಪಟ್ಟಣ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಒಟ್ಟು 16 ವಾರ್ಡ್‌ಗಳಿಗೆ ಕೆಳಕಂಡ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 1ನೇ ವಾರ್ಡ್ : ಸಾಹೇರಾ ಬಾನು 2 ನೇ ವಾರ್ಡ್ : ಹೆಚ್.ಡಿ.ರಮಾದೇವಿ 3 ನೇ ವಾರ್ಡ್ : ದಸ್ತಗೀರ್ ಸಾಬ್ 4ನೇ ವಾರ್ಡ್ : ಅಬೂಬಕ್ಕರ್ ಸಿದ್ದಿಕ್ 5 ನೇ ವಾರ್ಡ್ : ಶಶಿಕಲಾ ಪ್ರಸನ್ನಕುಮಾರ್ 6 ನೇ ವಾರ್ಡ್ : ಗಂಗಾಧರಯ್ಯ‌( ಸ್ಟುಡಿಯೋ ರಾಜು) 7 ನೇ ವಾರ್ಡ್ :ವಿನೋದ ರಾಜ್ ( ಪಟೇಲ್) 8 ನೇ ವಾರ್ಡ್ :ಹರೀಶ್ ರಾವ್ (ವಳಗೆರೆಹಳ್ಳಿ) 9 ನೇ ವಾರ್ಡ್ : ಜುಬೇರ್ 10ನೇ ವಾರ್ಡ್ : ಗಾಯತ್ರಿ ಜಯಣ್ಣ 11 ನೇ ವಾರ್ಡ್ : ಎಸ್ಎಸ್ ದಯಾನಂದ್ 12 ನೇ ವಾರ್ಡ್ : ಹರೀಶ್ ನಾಯ್ಕ್ (ಕೋರಿಯರ್) 13 ನೇ ವಾರ್ಡ್ : ವೀಣಾ ರಂಗನಾಥ್( ಧನುಷ್) 14 ನೇ ವಾರ್ಡ್ : ಮೊಹಮ್ಮದ್ ಫಯಾಜ್ 15 ನೇ ವಾರ್ಡ್ : ಶಬೀನಾ ಬೇಗಮ್ 16 ನೇ ವಾರ್ಡ್ : ದುರ್ಗಮ್ಮ

ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಲು ಕರೆ

https://www.facebook.com/groups/530917586966110/permalink/4005995812791586/ ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಗೆ ಆಮ್ ಆದ್ಮಿ ಮತ್ತು ರೈತಸಂಘದಿಂದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಚರ್ಚಿಸಿ ಅದರ ಬಗೆಗಿನ ವಿವರಣೆಗಳನ್ನು ಆಮ್ಆದ್ಮಿ ಪಕ್ಷದ ತಾಲ್ಲೂಕು ಮುಖಂಡರಾದ ಸಾಸಲು ನಿಂಗರಾಜು ನೀಡಿದರು. ಸಂಪರ್ಕಿಸಬಹುದಾದ ಪೋನ್ ನಂಬರ್: 9035789582

ಹುಳಿಯಾರು ಪಟ್ಟಣ ಪಂಚಾಯಿತಿ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿ

ಸರ್ವೇಶ್ವರಿ ಮಹಾಲಕ್ಷ್ಮಿ ಮದ್ದರಲಕ್ಕಮ್ಮ ಸನ್ನಿಧಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ರೀಮತಿ ಶ್ಯಾಮಲಾ ಎಸ್ ಕುಂದರ್ ಭೇಟಿ

ಚಿಕ್ಕನಾಯಕಹಳ್ಳಿ ಪಟ್ಟಣದ ಶುಕ್ರವಾರದ ಕೋಟೆಬಾಗಿಲು ಶಕ್ತಿಮಾತೆ  ಸರ್ವೇಶ್ವರಿ ಮಹಾಲಕ್ಷ್ಮಿ ಮದ್ದರಲಕ್ಕಮ್ಮ ಸನ್ನಿಧಿಗೆ ಮಹಾಶಿವರಾತ್ರಿಯ ಶುಭ ಪ್ರದೋಷ ಸಮಯದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಹಾಗೂ ದಕ್ಷಿಣ ಭಾರತವನ್ನು ಪ್ರತಿನಿಧಿಸಿರುವ ಶ್ರೀಮತಿ ಶ್ಯಾಮಲಾ ಎಸ್ ಕುಂದರ್ ರವರು ಕುಟುಂಬ ಸಮೇತರಾಗಿ ಸರ್ವೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಸರ್ವೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.  ಈ ಸಂದರ್ಭದಲ್ಲಿ  ಶ್ಯಾಮಲಾ ಕುಂದರ್ ದಂಪತಿಗಳನ್ನು ದೇವಸ್ಥಾನದ ಮುಖ್ಯಸ್ಥರಾದ ಶ್ರೀಯುತ ರಂಗಸ್ವಾಮಿ ಸಿ.ಎನ್, ಶ್ರೀಮತಿ  ನಾಗರತ್ನ, ಶ್ರೀಯುತ ಲಕ್ಷ್ಮೀಶ ಸಿ.ಆರ್, ಶ್ರೀಮತಿ ಅಕ್ಷತ ಸಿ.ಎಸ್, ದೇವಸ್ಥಾನದ ವತಿಯಿಂದ ಗೌರವಿಸಿದರು.

ಹುಳಿಯಾರು:ಬೋರನಕಣಿವೆ ಸರ್ಕಾರಿ ಶಾಲೆಯಲ್ಲಿ ವ್ಯಕ್ತಿತ್ವ ವಿಕಾಸನ ಹಾಗು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಹುಳಿಯಾರು ಹೋಬಳಿಯ ಬೋರನಕಣಿವೆ ಸರ್ಕಾರಿ ಶಾಲೆಯಲ್ಲಿ ವ್ಯಕ್ತಿತ್ವ ವಿಕಾಸನ ಹಾಗು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ವೈದ್ಯರಾದ ಡಾ.ಸತೀಶ್‌ರವರು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ಪ್ರವಚನ ನೀಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಎಸ್.ಮಂಜುಳಾರವರ ಸೇವೆಯನ್ನು ಗುರುತಿಸಿ ಶಾಲೆಯ ಶಿಕ್ಷಕ ವೃಂದದಿಂದ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಶಿಕ್ಷಕ ಟಿ.ಎನ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಬೋಧಕ ಹಾಗೂ ಆಡಳಿತ ವರ್ಗದವರು ಉಪಸ್ಥಿತರಿದ್ದರು.

ದೊಡ್ಡಬಿದರೆ ಅಂಗನವಾಡಿಯಲ್ಲಿ ಸೀಮಂತ ಕಾರ್ಯಕ್ರಮ

ಹುಳಿಯಾರು ಹೋಬಳಿಯ ದೊಡ್ಡಬಿದರೆ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗೌರಮ್ಮ, ಸದಸ್ಯರಾದ ಅರುಣ್ ಕುಮಾರ್, ಆಶಾ ಕಾರ್ಯಕರ್ತೆ ನಾಗರತ್ನಮ್ಮ, ಛಾಯಾದೇವಿ, ಆಶಾ ಕಾರ್ಯಕರ್ತೆ ನಾಗರತ್ನಮ್ಮ ,ಶಾಲಾ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು. ಜಯಲಕ್ಷ್ಮಿ ಸ್ವಾಗತಿಸಿ ಲಾವಣ್ಯ,ನಾಗಲಕ್ಷ್ಮಿ ಪ್ರಾರ್ಥಿಸಿದರು

ಹುಳಿಯಾರಿನ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.  ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡಿದ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎನ್.ಜಿ ಕೃಷ್ಣಮೂರ್ತಿ ಮಾತನಾಡಿ ನಿಮ್ಮನ್ನು ನೀವೇ ರೂಪಿಸಿಕೊಳ್ಳಿ ಎಂದು ಕರೆಕೊಟ್ಟರು.  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಸಿ.ಬಿ ಪರಮೇಶ್ವರ್ ಮಾತನಾಡಿ ಮಹಿಳೆಯನ್ನು ಶಕ್ತಿಶಾಲಿಯಾಗಿ ರೂಪಿಸಬೇಕೆಂದರು.  ಈ ವೇಳೆ ಕಾಲೇಜಿನ ಉಪನ್ಯಾಸಕರುಗಳಾದ ನಾರಾಯಣ್,ಚಿದಾನಂದಪ್ಪ,ಶಿವಣ್ಣ ,ಮಂಗಳ ಗೌರಮ್ಮ ,ಶೈಲಜಾ ಸೇರಿದಂತೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು

ಚಿಕ್ಕನಾಯಕನಹಳ್ಳಿ ತಾಲೂಕು ಮಡಿವಾಳ ಸಂಘದ ಪದಾಧಿಕಾರಿಗಳ ಆಯ್ಕೆ

  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಡಿವಾಳ ಸಂಘದ ವಿವಿಧ ಪದಾಧಿಕಾರಿಗಳ ಆಯ್ಕೆ ಮಾಡುವ ಮೂಲಕ ಸಂಘವನ್ನು ಪುನರ್ ರಚನೆ ಮಾಡಲಾಯಿತು. ಪಟ್ಟಣದ ಬಾಬು ಜಗಜೀವನರಾಂ ಬಡಾವಣೆಯ ತಾಲ್ಲೂಕು ಮಡಿವಾಳ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜು ಇವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ತಾಲ್ಲೂ ಕಿನ ಮಡಿವಾಳ ಸಂಘದ ಅಧ್ಯಕ್ಷ ರಾಗಿದ್ದ ಸಿ.ಎಸ್.ನಟರಾಜ್‌ರವರ ಮರಣದ ನಂತರ ತೆರವಾಗಿದ್ದ ಆ ಸ್ಥಾನಕ್ಕೆ ನಾಗರಾಜು ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆಯಾದ ನಂತರ ಹೊಸದಾದ ತಾಲ್ಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅದರಂತೆ ಗೌರವಾಧ್ಯಕ್ಷರಾಗಿ ಗೋಡೆಕೆರೆಯ ಜಿ.ಎನ್.ಗಂಗಾಧರಯ್ಯ, ಕಾರ್ಯಾದ್ಯಕ್ಷರಾಗಿ ಹುಳಿಯಾರಿನ ಪ್ರಸನ್ನ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅವಳಗೆರೆಯ ಗಿರೀಶ್, ಖಜಾಂಚಿಯಾಗಿ ಹೆಸರಹಳ್ಳಿಯ ಮಂಜುನಾಥ್, ಉಪಾಧ್ಯಕ್ಷರುಗಳಾಗಿ ಪ್ರತಿ ಹೋಬಳಿಯಿಂದ ಒಬ್ಬರಂತೆ ಕಸಬಾ ಹೋಬಳಿಯಲ್ಲಿ ಬಸವಲಿಂಗಯ್ಯ, ಕಂದಿಕೆರೆ ಆರ್.ಚಂದ್ರಶೇಖರಯ್ಯ, ಹುಳಿಯಾರು ಹೋಬಳಿಯಿಂದ ದಬ್ಬಗುಂಟೆ ಹೆಂಜಯ್ಯ, ಹಂದನಕೆರೆ ಹೋಬಳಿಗೆ ಸೋರಲಮಾವು ಶಂಕರಯ್ಯ, ಶೆಟ್ಟಿಕೆರೆ ಹೋಬಳಿಗೆ ಹೆಸರಹಳ್ಳಿಯ ಯೋಗರಾಜು, ಹಿರಿಯ ಉಪಾಧ್ಯಕ್ಷರಾಗಿ ದಸೂಡಿ ದೇವರಾಜು, ಸಹಕಾರ್ಯದರ್ಶಿಗಳಾಗಿ ಬರಕನಾಳು ದೊಡ್ಡಕರಿಯಪ್ಪ, ಅವಳಗೆರೆಯ ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿಯಾಗಿ ಬೆಳವಾಡಿಯ ಕುಮಾರ್, ಮಹಿಳಾ ಸಂಘಟನಾಕಾರ್ಯದರ್ಶಿಯಾಗಿ ಜಯರತ್ನ ನಾರಾಯಣಪ್ಪ ನೇಮಕವಾದರು. ಇ