ಸರ್ವೇಶ್ವರಿ ಮಹಾಲಕ್ಷ್ಮಿ ಮದ್ದರಲಕ್ಕಮ್ಮ ಸನ್ನಿಧಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ರೀಮತಿ ಶ್ಯಾಮಲಾ ಎಸ್ ಕುಂದರ್ ಭೇಟಿ
ಚಿಕ್ಕನಾಯಕಹಳ್ಳಿ ಪಟ್ಟಣದ ಶುಕ್ರವಾರದ ಕೋಟೆಬಾಗಿಲು ಶಕ್ತಿಮಾತೆ ಸರ್ವೇಶ್ವರಿ ಮಹಾಲಕ್ಷ್ಮಿ ಮದ್ದರಲಕ್ಕಮ್ಮ ಸನ್ನಿಧಿಗೆ ಮಹಾಶಿವರಾತ್ರಿಯ ಶುಭ ಪ್ರದೋಷ ಸಮಯದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಹಾಗೂ ದಕ್ಷಿಣ ಭಾರತವನ್ನು ಪ್ರತಿನಿಧಿಸಿರುವ ಶ್ರೀಮತಿ ಶ್ಯಾಮಲಾ ಎಸ್ ಕುಂದರ್ ರವರು ಕುಟುಂಬ ಸಮೇತರಾಗಿ ಸರ್ವೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಸರ್ವೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ಯಾಮಲಾ ಕುಂದರ್ ದಂಪತಿಗಳನ್ನು ದೇವಸ್ಥಾನದ ಮುಖ್ಯಸ್ಥರಾದ ಶ್ರೀಯುತ ರಂಗಸ್ವಾಮಿ ಸಿ.ಎನ್, ಶ್ರೀಮತಿ ನಾಗರತ್ನ, ಶ್ರೀಯುತ ಲಕ್ಷ್ಮೀಶ ಸಿ.ಆರ್, ಶ್ರೀಮತಿ ಅಕ್ಷತ ಸಿ.ಎಸ್, ದೇವಸ್ಥಾನದ ವತಿಯಿಂದ ಗೌರವಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ