ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಡಿವಾಳ ಸಂಘದ ವಿವಿಧ ಪದಾಧಿಕಾರಿಗಳ ಆಯ್ಕೆ ಮಾಡುವ ಮೂಲಕ ಸಂಘವನ್ನು ಪುನರ್ ರಚನೆ ಮಾಡಲಾಯಿತು.
ಪಟ್ಟಣದ ಬಾಬು ಜಗಜೀವನರಾಂ ಬಡಾವಣೆಯ ತಾಲ್ಲೂಕು ಮಡಿವಾಳ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜು ಇವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.ತಾಲ್ಲೂ ಕಿನ ಮಡಿವಾಳ ಸಂಘದ ಅಧ್ಯಕ್ಷ ರಾಗಿದ್ದ ಸಿ.ಎಸ್.ನಟರಾಜ್‌ರವರ ಮರಣದ ನಂತರ ತೆರವಾಗಿದ್ದ ಆ ಸ್ಥಾನಕ್ಕೆ ನಾಗರಾಜು ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆಯಾದ ನಂತರ ಹೊಸದಾದ ತಾಲ್ಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅದರಂತೆ ಗೌರವಾಧ್ಯಕ್ಷರಾಗಿ ಗೋಡೆಕೆರೆಯ ಜಿ.ಎನ್.ಗಂಗಾಧರಯ್ಯ, ಕಾರ್ಯಾದ್ಯಕ್ಷರಾಗಿ ಹುಳಿಯಾರಿನ ಪ್ರಸನ್ನ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅವಳಗೆರೆಯ ಗಿರೀಶ್, ಖಜಾಂಚಿಯಾಗಿ ಹೆಸರಹಳ್ಳಿಯ ಮಂಜುನಾಥ್, ಉಪಾಧ್ಯಕ್ಷರುಗಳಾಗಿ ಪ್ರತಿ ಹೋಬಳಿಯಿಂದ ಒಬ್ಬರಂತೆ ಕಸಬಾ ಹೋಬಳಿಯಲ್ಲಿ ಬಸವಲಿಂಗಯ್ಯ, ಕಂದಿಕೆರೆ ಆರ್.ಚಂದ್ರಶೇಖರಯ್ಯ, ಹುಳಿಯಾರು ಹೋಬಳಿಯಿಂದ ದಬ್ಬಗುಂಟೆ ಹೆಂಜಯ್ಯ, ಹಂದನಕೆರೆ ಹೋಬಳಿಗೆ ಸೋರಲಮಾವು ಶಂಕರಯ್ಯ, ಶೆಟ್ಟಿಕೆರೆ ಹೋಬಳಿಗೆ ಹೆಸರಹಳ್ಳಿಯ ಯೋಗರಾಜು, ಹಿರಿಯ ಉಪಾಧ್ಯಕ್ಷರಾಗಿ ದಸೂಡಿ ದೇವರಾಜು, ಸಹಕಾರ್ಯದರ್ಶಿಗಳಾಗಿ ಬರಕನಾಳು ದೊಡ್ಡಕರಿಯಪ್ಪ, ಅವಳಗೆರೆಯ ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿಯಾಗಿ ಬೆಳವಾಡಿಯ ಕುಮಾರ್, ಮಹಿಳಾ ಸಂಘಟನಾಕಾರ್ಯದರ್ಶಿಯಾಗಿ ಜಯರತ್ನ ನಾರಾಯಣಪ್ಪ ನೇಮಕವಾದರು.
ಇದರೊಂದಿಗೆ ಮೂವರು ಸಂಚಾಲಕರು, 16 ನಿರ್ದೇಶಕನ್ನು ನೇಮಕ ಮಾಡಲಾಯಿತು.
ಇವರೆಲ್ಲರಿಗೂ ಅಧ್ಯಕ್ಷ ನಾಗರಾಜು ನೇಮಕಾತಿ ಆದೇಶ ಪತ್ರ ನೀಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ