ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 22/04 /2022 ರಂದು ಶುಕ್ರವಾರ ಬೆಳಗ್ಗೆ 7.30 ಕ್ಕೆ ಶ್ರೀ ರೇಣುಕಾ ಎಲ್ಲಮ್ಮ ದೇವಿಯವರ ರಥೋತ್ಸವವು ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ವಾದ್ಯ ಮೇಳದೊಂದಿಗೆ ಸಕಲ ಭಕ್ತಾದಿಗಳ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಬೆಳಗ್ಗೆ 7.30 ಕ್ಕೆ ಪ್ರಾರಂಭವಾಗಿ ಊರಿನ ಪ್ರಮುಖ ರಾಜಬೀದಿಗಳಲ್ಲಿ ತಾಯಿಯವರ ರಥೋತ್ಸವವು ವೈಭವದಿಂದ ನೆರವೇರಿ ಸಂಜೆ 4:30 ಕ್ಕೆ ನೆಲೆ ನಿಂತಿತ್ತು. ಶ್ರೀ ಕರಿಯಮ್ಮದೇವಿ, ಶ್ರೀ ಆಂಜನೇಯಸ್ವಾಮಿ, ಶ್ರೀಪಾತರಾಯ ಸ್ವಾಮಿ ದೇವರುಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು . ಸುಮಾರು ಗ್ರಾಮದ ಎರಡರಿಂದ ಮೂರು ಕಿಲೋಮೀಟರ್ ದೂರ ರಥೋತ್ಸವ ಎಳೆಯುವುದು ಇಲ್ಲಿನ ವಿಶೇಷ. ಈ ಸಂದರ್ಭದಲ್ಲಿ ಗ್ರಾಮದ ಸಕಲ ಭಕ್ತರು ತಮ್ಮ ಹರಕೆ ಸಲ್ಲಿಸಿ ಹಾರ ,ಫಲಹಾರ ಪಾನಕ ಮುಂತಾದ ಮುಂತಾದ ಸೇವೆ ಸಲ್ಲಿಸುತ್ತಾರೆ. ಸಕಲ ಭಕ್ತಾದಿಗಳು ಶ್ರೀದೇವಿಯವರ ರಥೋತ್ಸವ ಕಾರ್ಯದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು. ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ರೇಣುಕಾ ಎಲ್ಲಮ್ಮ ದೇವಿ ಗೆಳೆಯರ ಬಳಗದವರಿಂದ ಶ್ರೀ ರೇಣುಕ ಎಲ್ಲಮ್ಮ ದೇವಾಲಯದ ಮೂಲ ವಿಗ್ರಹಕ್ಕೆ ಹಾಗೂ ದೇವಸ್ಥಾನದಲ್ಲಿ ವಿಶೇಷ ಹಣ್ಣಿನ ಅಲಂಕಾರದ ವ್ಯವಸ್ಥೆ ಮಾಡಲಾಗಿತ್ತು.
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070