ಇಂದಿನಿಂದ ಕೆಂಕೆರೆ ಗ್ರಾಮದ ಗ್ರಾಮ ದೇವತೆ ಶ್ರೀ ಕಾಳಿಕಾಂಬ ದೇವಿ ಹಾಗೂ ಶ್ರೀಗುರು ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ಹುಳಿಯಾರು ಸಮೀಪದ ಕೆಂಕೆರೆಯಲ್ಲಿ ಇಂದಿನಿಂದ ಗ್ರಾಮ ದೇವತೆ ಶ್ರೀ ಕಾಳಿಕಾಂಬ ದೇವಿ ಹಾಗೂ ಶ್ರೀಗುರು ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು ಏಪ್ರಿಲ್ 23ರ ಶನಿವಾರ 24 ಭಾನುವಾರ ಹಾಗೂ 25 ಸೋಮವಾರ ಮೂರು ದಿನ ಅಗ್ನಿ ಕುಂಡ ಸೇವೆ ನಡೆಯಲಿದೆ.
ಏಪ್ರಿಲ್ 26ರ ಮಂಗಳವಾರ ದೊಡ್ಡ ಬಾನ, 11:00 ಗಂಟೆಗೆ ಶ್ರೀ ಕಾಳಿಕಾಂಬ ದೇವಿ- ಶ್ರೀ ಈರ ಬೊಮ್ಮಕ್ಕ ದೇವಿ.-ಶ್ರೀ ದುರ್ಗಮ್ಮ ದೇವಿ.-ಶ್ರೀ ಅಂಬಿಕಾ ದೇವಿಯವರ ಆಗಮನ ಹಾಗೂ ಕೂಡು ಭೇಟಿ ನಡೆಯಲಿದೆ.
ಏ. 27ರ ಬುಧವಾರ ಮಡಿಲಕ್ಕಿ ಸೇವೆ, ಏ.28ರ ಗುರುವಾರ ಬೆಳಗ್ಗೆ ಪಟ್ಟದ ಕಲಶ ಹಾಗೂ ರಾತ್ರಿ ಅಮ್ಮನವರ ಉಯ್ಯಾಲೆ ಉತ್ಸವ ,ಏ. 29ರ ಶುಕ್ರವಾರ ಬೆಳಗ್ಗೆ ಅಮ್ಮನವರ ಉತ್ಸವ ಹಾಗೂ ಇದೇ ದಿನ ಸಿಡಿ ಕಾರ್ಯಕ್ರಮ ಜರುಗಲಿದೆ.
ಏ. 30ರ ಶನಿವಾರ ಓಕಳಿ ಸೇವೆ ನಡೆಯಲಿದೆ.
ಮೇ 1ರಿಂದ 3 ರವರೆಗೆ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರ ಜಾತ್ರೆ ನಡೆಯಲಿದೆ.ಮೇ 1ರಂದು 3:00 ಗಂಟೆಗೆ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಶ್ರೀ ಕಾಳಿಕಾಂಬ ದೇವಿ ಹಾಗೂ ಎಲ್ಲಾ ದೇವರುಗಳು ಮೂಲಸ್ಥಾನ ಪುರದ ಮಠಕ್ಕೆ ದಯಮಾಡಿ ಸುವುದು,ಮೇ 2ರಂದು ಸ್ವಾಮಿಗೆ ಅಭಿಷೇಕ ಬಿಲ್ವಾರ್ಚನೆ ಮಂಗಳಾರತಿ ನಡೆಸಲಾಗುತ್ತದೆ, ನಂತರ ಪ್ರಸಾದ ವಿನಿಯೋಗ ಇರುತ್ತದೆ.
ಮೇ 3 ರಂದು ಬೆಳಗ್ಗೆ 6 ಗಂಟೆಗೆ ರಥಕ್ಕೆ ಕಳಸ ಸ್ಥಾಪನೆ ಮಧ್ಯಾಹ್ನ 12 ಗಂಟೆಗೆ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರ ಮಹಾರಥೋತ್ಸವವು ನಡೆಯಲಿದೆ.
ಇದೇ ದಿನ ರಾತ್ರಿ 10 ಗಂಟೆಗೆ ಕೆಂಕೆರೆ ಶ್ರೀ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಇವರಿಂದ ರಾಜ ಸತ್ಯವ್ರತ ಅಥವಾ ಶನಿಪ್ರಭಾವ ಎಂಬ ಸುಂದರ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿರುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ