ಹುಳಿಯಾರು ಸಮೀಪದ ತೊರೆ ಸೂರಗೊಂಡನಹಳ್ಳಿಯ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯವರ ಜಾತ್ರಾ ಮಹೋತ್ಸವ ಏ. 17ರ ಭಾನುವಾರದಿಂದ ಆರಂಭವಾಗಿದ್ದು ಏ. 20ರ ಬುಧವಾರದವರೆಗೆ ನಡೆಯಲಿದೆ.
ಇಂದು ಏ. 18ರ ಸೋಮವಾರ ಬೆ.9:15ಕ್ಕೆ ಬಸವೇಶ್ವರ ಸ್ವಾಮಿಯವರ ಹೊಳೆಸೇವೆ,ಬೆಳಗ್ಗೆ 11 ಗಂಟೆಗೆ ಅಗ್ನಿಕೊಂಡ,11:30 ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ.
ಮ.1:00 ಗಂಟೆಗೆ ಅನ್ನಸಂತರ್ಪಣೆ, ಸಂಜೆ ಶ್ರೀ ಬಸವೇಶ್ವರ ಸ್ವಾಮಿಯವರ ರಥೋತ್ಸವ,ಸಂಜೆ 7.30 ಕ್ಕೆ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ, 9:00 ಗಂಟೆಗೆ ಆದಿಶಕ್ತಿ ಚೌಡೇಶ್ವರಿ ದೇವಿಯವರ ಮಧುವಣಗಿತ್ತಿಶಾಸ್ತ್ರ ಹಾಗೂ ಮದ್ದಿನಸೇವೆ ನಡೆಯಲಿದೆ.
ನಾಳೆ ಏ. 19ರ ಮಂಗಳವಾರ ಬೆ.8:30ಕ್ಕೆ ಆದಿಶಕ್ತಿ ಚೌಡೇಶ್ವರಿ ದೇವಿಯವರ ಹೊಳೆ ಸೇವೆ,ಬೆ.9ಗಂಟೆಗೆ ನಡೆ-ಮುಡಿಯೊಂದಿಗೆ ಕಳಸೋತ್ಸವ,ಸಂಜೆ 8:00 ಗಂಟೆಗೆ ಆರತಿ ಬಾನ, ರಾತ್ರಿ 9:00 ಗಂಟೆಗೆ ಶ್ರೀ ಆದಿಶಕ್ತಿ ಚೌಡೇಶ್ವರಿ ಅಮ್ಮನವರ ಪುಷ್ಪಾಲಂಕಾರ,ಬೆಳ್ಳಿರಥದ ವಾನದ ಉತ್ಸವ ನಡೆಯಲಿದೆ
9:00 ಗಂಟೆಗೆ ಆರ್ಕೆಸ್ಟ್ರಾ ಹಾಗೂ ಮಧ್ಯಾಹ್ನ ಸೇವೆ ನಡೆಯಲಿದೆ.
ಏ.20ರ ಬುಧವಾರ ಸಂಜೆ 4:30 ಕ್ಕೆ ಧೂತರಾಯಸ್ವಾಮಿಯ ಅದ್ದೂರಿ ಮಣೇವು, ಓಕಳಿ ಸೇವೆ ನಡೆದು ಕಂಕಣ ವಿಸರ್ಜನೆ ಮೂಲಕ ಜಾತ್ರೆಗೆ ತೆರೆಬೀಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ