ಹುಳಿಯಾರು : ಪಟ್ಟಣದ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಿಯ 50ನೇ ವರ್ಷದ ಸುವರ್ಣ ಮಹೋತ್ಸವದ ಜಾತ್ರಾಮಹೋತ್ಸವ ಏ.16 ರ ಶನಿವಾರದಿಂದ ಪ್ರಾರಂಭಗೊಂಡು 24 ರ ಭಾನುವಾರದವರೆಗೆ ಒಂಬತ್ತು ದಿನಗಳ ಕಾಲ ಜರುಗಲಿದೆ.
ಏ.16ರ ಶನಿವಾರ ಕೋಡಿಪಾಳ್ಯ, ಲಿಂಗಪ್ಪನಪಾಳ್ಯದವರಿಂದ ಹಾಗೂ 17 ರ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನ ಪಾಳ್ಯದ ಭಕ್ತಾಧಿಗಳಿಂದ ಅಮ್ಮನವರಿಗೆ ಮಡಿಲಕ್ಕಿ ಸೇವೆ ನಡೆಯಲಿದೆ.
ಏ.18ರ ಸೋಮವಾರ ಬೆಳಿಗ್ಗೆ ಎಡೆಸೇವೆ,ಸಂಜೆ ಅಮ್ಮನವರ ಮಧುವಣಗಿತ್ತಿ ಕಾರ್ಯ ಹಾಗೂ ಧ್ವಜಾರೋಹಣ ಮತ್ತು ಅಂಕುರಾರ್ಪಣೆ ಕಾರ್ಯ ನಡೆಯಲಿದೆ.
ಏ.19 ರ ಮಂಗಳವಾರ ಗ್ರಾಮಸ್ಥರಿಂದ ಆರತಿಬಾನ, ಎಡೆಸೇವೆ ನಡೆಯಲಿದೆ.
ಏ.20ರ ಬುಧವಾರ ರಾತ್ರಿ ಹುಳಿಯಾರಿನ ಹುಳಿಯಾರಮ್ಮ, ಹೊಸಹಳ್ಳಿಯ ಶ್ರೀ ಕೊಲ್ಲಾಪುರದಮ್ಮ ,ಹೊಸಹಳ್ಳಿ ಪಾಳ್ಯದ ಅಂತರಘಟ್ಟೆಅಮ್ಮ, ಗೌಡಗೆರೆಯ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ಗೊಲ್ಲರಹಟ್ಟಿಯ ಶ್ರೀ ಕರಿಯಮ್ಮ ,ಕೆಸಿ ಪಾಳ್ಯದ ಶ್ರೀ ಅಂತರಘಟ್ಟಮ್ಮ, ದಮ್ಮಡಿಹಟ್ಟಿಯ ಶ್ರೀ ಈರಬೊಮ್ಮಕ್ಕದೇವಿ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆದು ನಂತರ ಗಂಗಾಸ್ನಾನಕ್ಕೆ ಕೆರೆಗೆ ದಯಮಾಡಿಸುವುದು.
ತಾ.21ರ ಗುರುವಾರ ಮುಂಜಾನೆ 5ಕ್ಕೆ ಕೆರೆಯ ಬಾವಿಹತ್ತಿರ ಕಳಸ ಸ್ಥಾಪನೆ ನಡೆದು ನಂತರ ಕಳಸ ಸಮೇತ ನಡೆಮುಡಿಯಲ್ಲಿ ಅಮ್ಮನವರ ಮೂಲಸ್ಥಾನಕ್ಕೆ ದಯಮಾಡಿಸುವುದು. ಅದೇ ದಿನ ರಾತ್ರಿ ಉಯ್ಯಾಲೋತ್ಸವ ನಡೆಯಲಿದೆ.
ತಾ.22ರ ಶುಕ್ರವಾರ ಮಧ್ಯಾಹ್ನ ಅಮ್ಮನವರ ವೈಭವಯುತ ಬ್ರಹ್ಮರಥೋತ್ಸವ ನಡೆದು ನಂತರ ವಸಂತಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ರಾತ್ರಿ ವಿನಾಯಕನಗರದ ದುರ್ಗಮ್ಮನ ಮದಾಲ್ ಸಿ ಉತ್ಸವ ಜರುಗಲಿದೆ.
ಇದೇ ದಿನ ಸಂಜೆ ಅಮ್ಮನವರ ಬಂಗಾರದ ರಥದ ಉತ್ಸವ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಡೊಳ್ಳು ಕುಣಿತ- ಚಂಡೆ ವಾದ್ಯ-ಭದ್ರಕಾಳಿ ವೀರಭದ್ರ ಕುಣಿತ- ಅಣ್ಣಮ್ಮನ ತಮಟೆ ಪೂಜಾಕುಣಿತ-ನಾದಸ್ವರ ನಡೆಯಲಿದೆ.
23ರ ಶನಿವಾರ ಬೆಳಿಗ್ಗೆ ಸಿಡಿ ಕಾರ್ಯ ,ಓಕಳಿಸೇವೆ, ಕಂಕಣ ವಿಸರ್ಜನೆ ನಡೆದು 24 ರ ಭಾನುವಾರದಂದು ಮಡಿಲಕ್ಕಿ ಸೇವೆ ನಡೆಯುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.
🙏
ಪ್ರತ್ಯುತ್ತರಅಳಿಸಿ