ದೊಡ್ಡಬಿದರೆಯಲ್ಲಿ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ, ಪಾತಲಿಂಗೇಶ್ವರ ಸ್ವಾಮಿ, ಲಕ್ಕಮ್ಮದೇವಿ,ಬೇವಿನಳ್ಳಮ್ಮ ದೇವಿಯವರ ಜಾತ್ರಾ ಮಹೋತ್ಸವ ಆರಂಭ
ಹುಳಿಯಾರು ಸಮೀಪದ ದೊಡ್ಡಬಿದರೆಯಲ್ಲಿ ಗ್ರಾಮ ದೇವತೆ ಶ್ರೀ ಕರಿಯಮ್ಮದೇವಿ, ಪಾತಲಿಂಗೇಶ್ವರ ಸ್ವಾಮಿ, ಲಕ್ಕಮ್ಮದೇವಿ,ಬೇವಿನಳ್ಳಮ್ಮ ದೇವಿಯವರ ಜಾತ್ರಾ ಮಹೋತ್ಸವ ಏ.14ರ ಗುರುವಾರ ಮಧುವಣಗಿತ್ತಿ ಶಾಸ್ತ್ರದ ಮೂಲಕ ಚಾಲನೆ ಗೊಂಡಿದ್ದು ಏ. 20ರ ಬುಧವಾರದವರೆಗೂ ನಡೆಯಲಿದೆ.
ಏ. 14ರ ಗುರುವಾರ ಮದುವಣಗಿತ್ತಿ ಕಾರ್ಯಕ್ರಮದ ಮೂಲಕ ಜಾತ್ರಾ ಮಹೋತ್ಸವ ಚಾಲನೆಗೊಂಡಿದ್ದು,
ಏ.15ರ ಶುಕ್ರವಾರ ಬಾನ,ರಾತ್ರಿ 8:00 ಗಂಟೆಗೆ ಮಧುವಣಗಿತ್ತಿ ಶಾಸ್ತ್ರ,ಮಡಿಲಕ್ಕಿ ಸೇವೆ, ನಂತರ ಚಿಕ್ಕಬಿದರೆ ಕರಿಯಮ್ಮದೇವಿ ಮತ್ತು ಕೋಡಿಹಳ್ಳಿ ಕೊಲ್ಲಾಪುರದಮ್ಮನವರ ಆಗಮನವಾಗಲಿದೆ.
ಏ. 16 ರ ಶನಿವಾರ ಬೆಳಗ್ಗೆ 6:30ಕ್ಕೆ ಆರತಿ ಬಾನ, ಗಂಗಾಪೂಜೆ,ನಡೆಮುಡಿಯೊಂದಿಗೆ ಅಮ್ಮನವರು ಮೂಲಸ್ಥಾನಕ್ಕೆ ಆಗಮಿಸುವರು.
ಬೆ.9.30 ಕ್ಕೆ ಅಗ್ನಿಕುಂಡ,ಮ. 12:00 ಗಂಟೆಗೆ ಅನ್ನಸಂತರ್ಪಣೆ ಸಂಜೆ 6:30ಕ್ಕೆ ಸಿಡಿ,ರಾತ್ರಿ 10:00 ಗಂಟೆಗೆ ಆರ್ಕೆಸ್ಟ್ರಾ ಏರ್ಪಡಿಸಲಾಗಿದೆ.
ಏ.17ರ ಭಾನುವಾರ ಬೆಳಿಗ್ಗೆ 8ಗಂಟೆಗೆ ರುದ್ರಾಭಿಷೇಕ, 10 ಗಂಟೆಗೆ ಧ್ವಜಾರೋಹಣ, 11ಗಂಟೆಗೆ ದೋಣಿ ಸೇವೆ, 2:00 ಗಂಟೆಗೆ ಲಕ್ಕಮ್ಮನವರ ಕಳಸ ಸ್ಥಾಪನೆ,ಗಂಗಾಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ ಪಾತಲಿಂಗೇಶ್ವರ ಸ್ವಾಮಿ ಹಾಗೂ ಲಕ್ಕಮ್ಮ ನವರಿಗೆ ಕಂಕಣಧಾರಣೆ.ನಂತರ ಮಡಿಲಕ್ಕಿ ಸೇವೆ ನಡೆದು ಸ್ವಾಮಿಯವರು ಮತ್ತು ಅಮ್ಮನವರು ಮೂಲಸ್ಥಾನಕ್ಕೆ ದಯಮಾಡಿಸುವರು.
ಏ. 18ರ ಸೋಮವಾರ ಸಂಜೆ 7.30 ಕ್ಕೆ ದೊಡ್ಡ ಪರವು ನಡೆಯಲಿದೆ
ಏ. 19ರ ಮಂಗಳವಾರ ಬೆಳಗ್ಗೆ 6 ಗಂಟೆಗೆ ರುದ್ರಾಭಿಷೇಕ 9ರಿಂದ ಪಟ್ಟಧಾರಣೆ,ಮ.4:30ಕ್ಕೆ ಗಾವು, ನಂತರ ಅಮ್ಮನವರ ಹಾಗೂ ಸ್ವಾಮಿಯವರ ಉತ್ಸವ ನಡೆಯಲಿದೆ.
ಇದೇ ದಿನ ಮ. 12:00 ಗಂಟೆಗೆ ಶ್ರೀ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.
ಏ. 20ರ ಬುಧವಾರ ಬೆಳಗ್ಗೆ 6 ಗಂಟೆಗೆ ದೊಡ್ಡ ರಥೋತ್ಸವ, 8ಗಂಟೆಗೆ ಓಕಳಿ ಸೇವೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ನಂತರ ಸ್ವಾಮಿಯವರು ಮೂಲಸ್ಥಾನಕ್ಕೆ ಬಿಜಯಂಗೈಯುವುದರ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ