ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನ ಬಿ.ಎಂ.ಎಸ್‌. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ "ಅಂತರ ರಾಷ್ಟ್ರೀಯ ಯೋಗ ದಿನ" ಆಚರಣೆ

ಹುಳಿಯಾರು-ಕೆಂಕೆರೆಯ ಬಿ.ಎಂ.ಎಸ್‌. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೨ರ ಜೂನ್‌-೨೧ರಂದು "ಅಂತರ ರಾಷ್ಟ್ರೀಯ ಯೋಗ ದಿನ"ದ ಪ್ರಯುಕ್ತ ಯೋಗದ ಮಹತ್ವ ಕುರಿತ ಉಪನ್ಯಾಸ ಮತ್ತು ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ತುಮಕೂರು , ಇಲ್ಲಿನ ಹುಳಿಯಾರು ಶಾಖೆಯ ಯೋಗ ಶಿಕ್ಷಕರಾದ ಶ್ರೀ ದುರ್ಗರಾಜು ಹಾಗೂ ಶ್ರೀಮತಿ ಆಶಾ ಅವರು ಯೋಗ ಮಾರ್ಗದರ್ಶಕರಾಗಿ ಭಾಗವಹಿಸಿದ್ದರು.  ಇವರು ಮೊದಲಿಗೆ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ಕುರಿತು ಉಪನ್ಯಾಸ ನೀಡಿ, ನಂತರ ಪ್ರಾಯೋಗಿಕವಾಗಿ ಯೋಗದ ಕೆಲವು ಆಸನಗಳನ್ನು ಪರಿಚಯಿಸಿದರು.  ಕಾಲೇಜಿನ  ಐಕ್ಯೂಎಸಿ  ಸಂಚಾಲಕರಾದ ಉಪನ್ಯಾಸಕಿ ಪ್ರೊ.ಸುಷ್ಮಾ ಎಲ್. ಬಿರಾದಾರ್‌ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ "ಜೂನ್‌ 21ನೆಯ ದಿನ ಭೂಮಿಯ ಉತ್ತರಾರ್ಧಗೋಳದಲ್ಲಿ ಅತಿ ದೀರ್ಘ ಹಗಲು ಇರುತ್ತದೆ. ಆದ್ದರಿಂದ ಜೀವನದ ಚೈತನ್ಯಕ್ಕೆ ಕಾರಣವಾಗುವ ಸೂರ್ಯ ದೇವನಿಗೆ ನಮಿಸುವ ಭಾರತೀಯರ ಪರಂಪರೆಯ ಭಾಗವಾಗಿ ನಮ್ಮ ಋಷಿ ಮುನಿಗಳ ಕಾಲದಿಂದ ಬೆಳೆದುಬಂದ ಯೋಗ ವಿಜ್ಞಾನ ಇಡೀ ಜಗತ್ತಿನ ಮಾನವ ಕುಲಕ್ಕೆ ಬೆಳಕಾಗಲಿ ಎಂಬ ಉದ್ದೇಶದಿಂದ ಇದೇ ದಿನ ಯೋಗ ದಿನವನ್ನು ಆಚರಿಸಲು ನಿರ್ಧರಿಸಲಾಯಿತು" ಎಂದು ಹೇಳಿದರು.  ಕಾರ್ಯಕ್ರಮದ ಆರಂಭದಲ್ಲಿ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿಯರಾದ ಸಹನ ಮತ್ತು ರಾಧ ಕನಕದಾಸರ ಕೀರ್ತನೆಯನ್ನು ಹಾಡುವ ಮೂಲಕ ಕಾರ್ಯಕ್ರ

ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕಗಳ ವಿತರಣೆ

ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ  (ನೋ.) ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕ   ಇವರ ವತಿಯಿಂದ ಚಿ. ನಾ. ಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ಸೋಮನಹಳ್ಳಿ ಗೊಲ್ಲರಹಟ್ಟಿಯಲ್ಲಿ  ಇಂದು 20/06/2022 ಸೋಮವಾರ  ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕಗಳು ಹಾಗು ಬರವಣಿಗೆ ಸಾಮಗ್ರಿಗಳನ್ನ ವಿತರಿಸುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿ. ನಾ.ಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಂಜುನಾಥ್‌ ಕೆಂಪರಾಯನಹಟ್ಟಿರವರು ವಹಿಸಿದ್ದರು. ಮುಖ್ಯ ಅಥಿತಿಯಾಗಿ ಯುವ ಸೇನೆಯ ರಾಜ್ಯ ಸಮಿತಿಯ ಉಪ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ರಾಮಪ್ಪನಹಟ್ಟಿರವರು ಭಾಗವಹಿಸಿದ್ದರು.  ತಾಲ್ಲೂಕು ಘಟಕದ ಕಾರ್ಯಧರ್ಶಿ ವಿಶ್ವನಾಥ್‌ ಕ್ಯಾತೇದೆವರಹಟ್ಟಿ ಹಾಗೂ ತಾಲ್ಲೂಕು ಘಟಕದ ಉಪ್ಯಾಧ್ಯಕ್ಷರಾದ ಕಾಂತರಾಜು ಸೋಮನಹಳ್ಳಿ ರವರು ಹಾಗೂ ಎಲ್ಲಾ ಪದಾಧಿಕಾರಿಗಳ ಸದಸ್ಯರು ಈ ಕಾರ್ಯಕ್ರಮದ ನೇತೃತ್ವ ವಹಿಕೊಳ್ಳುಕೊಂಡು ಯಶಸ್ಸಿಗೊಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದ ಸೋಮನಹಳ್ಳಿ ಗೊಲ್ಲರಹಟ್ಟಿ ಹಾಗೂ ಅಕ್ಕ ಪಕ್ಕ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದರು. ಕಾಡುಗೊಲ್ಲ ಸಮುದಾಯದ ಹಾಲಿ ಗ್ರಾಮ ಪಂಚಾಯತಿ ಅಧ್ಯಕರು,ಉಪ್ಯಾಧ್ಯಕ್ಷರು ಹಾಗೂ ಸದಸ್ಯರು,ಮಾಜಿಸದಸ್ಯರುಗಳು,ಗೊಲ್ಲರಹಟ್ಟಿಯ ಗೌರವಾನ್ವಿತ  ಹಿರಿಯರು-ಗೌಡ -ಪೂಜಾರಿ- ದಳವಾಯಿ ದಾಸಪ್ಪಗಳು  ಮತ್ತು ಮುಖಂಡರು ಯುವಕ ಯುವತಿಯರು ಭಾಗವಹಿಸಿದ

ಜೂ.20ಕ್ಕೆ G.ಗೊಲ್ಲರಹಟ್ಟಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ಹಾಗು ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮ

ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ  (ನೋ.) ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕ   ಇವರ ವತಿಯಿಂದ   ಚಿ. ನಾ. ಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ಸೋಮನಹಳ್ಳಿ G.ಗೊಲ್ಲರಹಟ್ಟಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟು ಪುಸ್ತಕಗಳು ಹಾಗು ಬರವಣಿಗೆ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ದಿನಾಂಕ 20/06/22 ರ ಸೋಮವಾರ ಬೆಳ್ಳಿಗ್ಗೆ  10:30 ಕ್ಕೆ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸೇನೆಯ ಚಿ.ನಾ.ಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀ ಮಂಜು ಕೆಂಪರಾಯನಹಟ್ಟಿರವರು ವಹಿಕೊಂಡಿದ್ದು ಮುಖ್ಯ ಅಥಿತಿಯಾಗಿ ಯುವ ಸೇನೆಯ ರಾಜ್ಯ ಉಪ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ರಾಮಪ್ಪನಹಟ್ಟಿರವರು ಭಾಗವಹಿಸುತ್ತಿದ್ದಾರೆ. ಯುವ ಸೇನೆಯ ಚಿ.ನಾ.ತಾಲ್ಲೂಕು ಘಟಕದ ಕಾರ್ಯಧರ್ಶಿ ವಿಶ್ವನಾಥ್‌ ಕ್ಯಾತೇದೇವರಹಟ್ಟಿ ಹಾಗೂ ಯುವ ಸೇನೆಯ ಚಿ.ನಾ. ಹಳ್ಳಿ ತಾಲ್ಲೂಕು ಘಟಕದ ಉಪ್ಯಾಧ್ಯಕ್ಷರಾದ ಕಾಂತರಾಜು ಸೋಮನಹಳ್ಳಿರವರು ಈ ಕಾರ್ಯಕ್ರಮದ ನೇತೃತ್ವ  ವಹಿಕೊಂಡಿದ್ದು ಈ ಕಾರ್ಯಕ್ರಮವನ್ನ ಚಿ.ನಾ. ತಾಲ್ಲೂಕು ಘಟಕದ ವತಿಯಿಂದ  ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ. ಸಹಕಾರ :- ಕಾಡುಗೊಲ್ಲ ಸಮುದಾಯದ ಹಾಲಿ ಗ್ರಾಮ ಪಂಚಾಯತಿ ಅಧ್ಯಕರು,ಉಪ್ಯಾಧ್ಯಕ್ಷರು ಹಾಗೂ ಸದಸ್ಯರು, ಮಾಜಿ ಸದಸ್ಯರುಗಳು. ಕಾಡುಗೊಲ್ಲ ಜನಾಂಗದ ಎಲ್ಲಾ ಗೊಲ್ಲರಹಟ್ಟಿಗಳ ಗೌರವಾನ್ವಿತ  ಹಿರಿಯರು ಗೌಡ  ಪೂಜಾರಿ ದಳವಾಯಿ ದಾಸಪ್ಪಗಳು  ಮತ್ತು ಮುಖಂ

ಹುಳಿಯಾರು ಪದವಿ ಕಾಲೇಜಿನಲ್ಲಿ ರಕ್ತದಾನಿಗಳ ದಿನಾಚರಣೆ

ಹುಳಿಯಾರು -ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ "ವಿಶ್ವ ರಕ್ತದಾನಿಗಳ ದಿನಾಚರಣೆ" ಪ್ರಯುಕ್ತ "ರಕ್ತದಾನ ಕುರಿತು ಜಾಗೃತಿ ವಿಶೇಷ ಉಪನ್ಯಾಸ " ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು. ಬಿ.ಎಂ.ಎಸ್.  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಮಂಜುನಾಥ್ ಕೆ.ಎಸ್. ಅವರು “ರಕ್ತದಾನ ಜೀವದಾನ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ರಕ್ತದಾನದ ಉಪಯೋಗ, ರಕ್ತದ ಗುಂಪುಗಳ ವರ್ಗೀಕರಣ ಕುರಿತು, ರಕ್ತ ಪರೀಕ್ಷೆ ಹಾಗೂ ರಕ್ತ ನಿಧಿಯಲ್ಲಿ ರಕ್ತ ಸಂಗ್ರಹಿಸುವ ಪ್ರಕ್ರಿಯೆ ಕುರಿತು ಸವಿವರವಾದ ಮಾಹಿತಿಯನ್ನು ನೀಡಿದರು. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳನ್ನು ತೋರಿಸಿ ವಿಷಯಗಳು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. "ತಲೆಕೂದಲು ನೀಡಿದರೆ ಮತ್ತೆ ಚಿಗುರುವಂತೆ, ರಕ್ತದಾನ ಮಾಡಿದರೆ ಮತ್ತೆ ಹೊಸ ರಕ್ತ ಕಣಗಳು ಶರೀರದಲ್ಲಿ ಉತ್ಪತ್ತಿಯಾಗುತ್ತವೆ. ರಕ್ತ ನೀಡುವುದು ದಾನವೇ ಹೊರತು ದುಡ್ಡಿಗಾಗಿ ಅಲ್ಲ, ಆರೋಗ್ಯವಂತ ಯುವಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದ ಅವರು ಆಪರೇಷನ್ ಗಳು, ರಕ್ತ ಸಂಬಂಧಿ ಕಾಯಿಲೆಗಳು ಹಾಗೂ ಅಪಘಾತದ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಪುರುಷರಾದರೆ ಮೂರು ತಿಂಗಳಿಗೊಮ್ಮೆ, ಮಹಿಳೆಯರಾದರೆ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು,  ರಕ್ತದಾನ ಮಾಡಲು ಯಾವುದೇ ಹಿ

ತುಮಕೂರು ಜಿಲ್ಲೆ ಅಂತರ ಕಾಲೇಜು ಮಟ್ಟದ "ಭಾಷಣ ಸ್ಪರ್ಧೆ"ಯಲ್ಲಿ ವಿದ್ಯಾರ್ಥಿ ಶ್ರೀರಂಗ ಕೆ.ಎಂ. ಗೆ ತೃತೀಯ ಬಹುಮಾನ

"ವಿಶ್ವ ರಕ್ತದಾನಿಗಳ ದಿನ"ದ ನೆನಪಿನಲ್ಲಿ "ಸ್ವಯಂ ಪ್ರೇರಿತ ರಕ್ತದಾನ ಮಾಡುವಲ್ಲಿ ಯುವ ಜನತೆಯ ಪಾತ್ರ" ಎಂಬ ವಿಷಯವನ್ನು ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತುಮಕೂರು; ತಾಲ್ಲೂಕು ಆರೋಗ್ಯ ಕೇಂದ್ರ, ಚಿಕ್ಕನಾಯಕನಹಳ್ಳಿ ಮತ್ತು ನವೋದಯ ಪ್ರಥಮ ದರ್ಜೆ ಕಾಲೇಜು, ಚಿಕ್ಕನಾಯಕನಹಳ್ಳಿ ಇವರ ಸಹಯೋಗದಲ್ಲಿ ನಡೆದ ತುಮಕೂರು ಜಿಲ್ಲೆ ಅಂತರ ಕಾಲೇಜು ಮಟ್ಟದ "ಭಾಷಣ ಸ್ಪರ್ಧೆ"ಯಲ್ಲಿ ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಶ್ರೀರಂಗ ಕೆ.ಎಂ. ಅವರು ತೃತೀಯ ಬಹುಮಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವೀರಣ್ಣ ಎಸ್. ಸಿ., ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಮೋಹನ್ ಕುಮಾರ್ ಎಂ.ಜೆ . ಹಾಗೂ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಣೆ

ಹುಳಿಯಾರು-ಕೆಂಕರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು ಘಟಕ-2ರ ವತಿಯಿಂದ ‘ವಿಶ್ವ ಪರಿಸರ ದಿನ’ ಆಚರಣೆ ಮತ್ತು ‘ಪರಿಸರ ಜಾಗೃತಿ ಕುರಿತು ವಿಶೇಷ ಉಪನ್ಯಾಸ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಂಶುಪಾಲರಾದ ಪ್ರೊ. ವೀರಣ್ಣ ಎಸ್.ಸಿ. ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಶ್ರೀ ರಾಮಕೃಷ್ಣಪ್ಪ, ಅಧ್ಯಕ್ಷರು, ಸುವರ್ಣ ವಿದ್ಯಾ ಚೇತನ, ಬೋರನ ಕಣಿವೆ , ಇವರು “ಇರುವುದೊಂದೇ ಭೂಮಿ – ಉಳಿಸಿಕೊಳ್ಳೋಣ”ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ‘ಪರಿಸರ ದಿನ’ ಎನ್ನುವುದು ಆಚರಣೆಯಲ್ಲ, ನಮ್ಮ ಜೀವನದುದ್ದಕ್ಕೂ ಮಾಡುವ ಕಾರ್ಯಾಚರಣೆ. ಆದ್ದರಿಂದ ನಾವು ವೇದಿಕೆ ಶೂರರಾಗದೆ ಕಾರ್ಯಾಚರಣೆಯಲ್ಲಿ ಶೂರರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಇಂದು ವಾತಾವರಣದ ಉಷ್ಣತೆ ದೇಹದ ಉಷ್ಣತೆಗಿಂತ ಹೆಚ್ಚಿದ್ದು ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇಂದು ಮಳೆಯ ಪ್ರಮಾಣ ಕಡಿಮೆಯಾಗಿಲ್ಲದಿದ್ದರೂ ಮಳೆಯ ದಿನ ಕಡಿಮೆ ಆಗಿದೆ. ಅಲ್ಲದೆ ಬೀಳುವ ಮಳೆ ಕೂಡಾ ಅಕಾಲಿಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಒಂದು ಕೋಟಿ ಮರ ಕಡಿದಿದ್ದು, ಹತ್ತು ಲಕ್ಷ ಸಸಿಗಳನ್ನು ಮಾತ್ರ ನೆಟ್ಟಿದ್ದೇವೆ, ಅದೂ ಸರ್ಕಾರದ ವತಿಯಿಂದ. ಈ ಬಗ್ಗೆಯೂ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಹಾಗೆಯೇ ನಮ್ಮ ಮುಂದಿನ ನಡೆ ‘ಕಾರ್ಬನ್ ಹೆಜ್ಜೆ’

ನಡುವನಹಳ್ಳಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಹಾಗೂ ಪ್ರಧಾನಮಂತ್ರಿ ಇನ್ಸೂರೆನ್ಸ್ ವಿಮೆ ಬಗ್ಗೆ ಮಾಹಿತಿ.

ತಾಲೂಕ್ ಪಂಚಾಯಿತಿ ಸಂಜೀವಿನಿ ಒಕ್ಕೂಟ ಚಿಕ್ಕನಾಯಕನಹಳ್ಳಿ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ ಮತ್ತು ಈಶ ಫೌಂಡೇಶನ್ ತರಬೇನಹಳ್ಳಿ ಜಂಟಿ ಆಶ್ರಯದಲ್ಲಿ ನಡುವನಹಳ್ಳಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಹಾಗೂ ಪ್ರಧಾನಮಂತ್ರಿ  ಇನ್ಸೂರೆನ್ಸ್ ವಿಮೆಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಈಶ ಫೌಂಡೇಶನ್ ಮುಖ್ಯಸ್ಥ ಮನೋಹರ್  ಮಾತನಾಡಿ ಹಳ್ಳಿಯ ಜನಗಳಿಗೆ ಆರೋಗ್ಯದ ಬಗ್ಗೆ ಹಾಗೂ ಸಾಂಪ್ರದಾಯಿಕ ಪದ್ಧತಿಗಳ ಬಗ್ಗೆ ತಿಳುವಳಿಕೆ ನೀಡಿ ಆಶ್ರಮದವತಿಯಿಂದ ಹಳ್ಳಿಯಲ್ಲಿ 20ಕ್ಕಿಂತ ಹೆಚ್ಚು ಜನ  ಸೇರಿದಲ್ಲಿ ನಾವು ಆರೋಗ್ಯದ ಬಗ್ಗೆ  15 ದಿನಗಳಲ್ಲಿ ನಿಮಗೆ ಎಲ್ಲಾ ವಿಷಯಗಳನ್ನು ತಿಳಿಸಿಕೊಡುತ್ತೇವೆ,ಯೋಗದ ಬಗ್ಗೆ ಹೆಚ್ಚು ವಿಷಯಗಳನ್ನು ನಿಮಗೆ ತಿಳಿಸಲಾಗುತ್ತದೆ.ಇದೆಲ್ಲವೂ ಕೂಡ ಉಚಿತವಾಗಿರುತ್ತದೆ ಎಂದು ತಿಳಿಸಿದರು. ತಾಲೂಕು ಪಂಚಾಯಿತಿ ಚಿಕ್ಕನಾಯಕನಹಳ್ಳಿಯ  ಎನ್ ಆರ್ ಎಲ್ ಎಂ ಘಟಕದ ರಮೇಶ್ ಮಾತನಾಡಿ ಖಾಸಗಿ ಫೈನಾನ್ಸ್ ಗಳಿಂದ ಸಂಘಗಳು ಪಡೆಯುತ್ತಿರುವ ಸಾಲದ ಬಗ್ಗೆ ವಿವರಣೆ ನೀಡಿ ಆದಷ್ಟು ಬ್ಯಾಂಕುಗಳ ಮುಖಾಂತರ ಸಾಲ ಪಡೆಯುವಂತೆ ಸೂಚಿಸಿದರು.ಆರೋಗ್ಯ ಶಿಬಿರಗಳನ್ನು ಮೊದಲಿಗೆ ನಿಮ್ಮ ಊರಿನಲ್ಲಿ ಪ್ರಾರಂಭಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ವಸಂತ ಕುಮಾರ್  ತಿಳಿಸಿದರು.   ಕರ್ನಾಟಕ ಗ್ರಾಮೀಣ ಬ್ಯಾಂಕಿನನಿವೃತ ವ್ಯವಸ್ಥಾಪಕ ಹಾಗೂ ಆರ್ಥಿಕ