ತಾಲೂಕ್ ಪಂಚಾಯಿತಿ ಸಂಜೀವಿನಿ ಒಕ್ಕೂಟ ಚಿಕ್ಕನಾಯಕನಹಳ್ಳಿ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ ಮತ್ತು ಈಶ ಫೌಂಡೇಶನ್ ತರಬೇನಹಳ್ಳಿ ಜಂಟಿ ಆಶ್ರಯದಲ್ಲಿ ನಡುವನಹಳ್ಳಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಹಾಗೂ ಪ್ರಧಾನಮಂತ್ರಿ ಇನ್ಸೂರೆನ್ಸ್ ವಿಮೆಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಈಶ ಫೌಂಡೇಶನ್ ಮುಖ್ಯಸ್ಥ ಮನೋಹರ್ ಮಾತನಾಡಿ ಹಳ್ಳಿಯ ಜನಗಳಿಗೆ ಆರೋಗ್ಯದ ಬಗ್ಗೆ ಹಾಗೂ ಸಾಂಪ್ರದಾಯಿಕ ಪದ್ಧತಿಗಳ ಬಗ್ಗೆ ತಿಳುವಳಿಕೆ ನೀಡಿ ಆಶ್ರಮದವತಿಯಿಂದ ಹಳ್ಳಿಯಲ್ಲಿ 20ಕ್ಕಿಂತ ಹೆಚ್ಚು ಜನ ಸೇರಿದಲ್ಲಿ ನಾವು ಆರೋಗ್ಯದ ಬಗ್ಗೆ 15 ದಿನಗಳಲ್ಲಿ ನಿಮಗೆ ಎಲ್ಲಾ ವಿಷಯಗಳನ್ನು ತಿಳಿಸಿಕೊಡುತ್ತೇವೆ,ಯೋಗದ ಬಗ್ಗೆ ಹೆಚ್ಚು ವಿಷಯಗಳನ್ನು ನಿಮಗೆ ತಿಳಿಸಲಾಗುತ್ತದೆ.ಇದೆಲ್ಲವೂ ಕೂಡ ಉಚಿತವಾಗಿರುತ್ತದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಚಿಕ್ಕನಾಯಕನಹಳ್ಳಿಯ ಎನ್ ಆರ್ ಎಲ್ ಎಂ ಘಟಕದ ರಮೇಶ್ ಮಾತನಾಡಿ ಖಾಸಗಿ ಫೈನಾನ್ಸ್ ಗಳಿಂದ ಸಂಘಗಳು ಪಡೆಯುತ್ತಿರುವ ಸಾಲದ ಬಗ್ಗೆ ವಿವರಣೆ ನೀಡಿ ಆದಷ್ಟು ಬ್ಯಾಂಕುಗಳ ಮುಖಾಂತರ ಸಾಲ ಪಡೆಯುವಂತೆ ಸೂಚಿಸಿದರು.ಆರೋಗ್ಯ ಶಿಬಿರಗಳನ್ನು ಮೊದಲಿಗೆ ನಿಮ್ಮ ಊರಿನಲ್ಲಿ ಪ್ರಾರಂಭಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ವಸಂತ ಕುಮಾರ್ ತಿಳಿಸಿದರು. ಕರ್ನಾಟಕ ಗ್ರಾಮೀಣ ಬ್ಯಾಂಕಿನನಿವೃತ ವ್ಯವಸ್ಥಾಪಕ ಹಾಗೂ ಆರ್ಥಿಕ ಸಾಕ್ಷರತೆ ಅಂದ್ರದ ಕೇಂದ್ರದ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿಯವರು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಜೀವನ ಯೋಜನೆ ಬಗ್ಗೆ, ಜೀವನಜ್ಯೋತಿ ಬಗ್ಗೆ ವಿವರಣೆ ನೀಡಿದರು. ಈ ಸಮಾರಂಭದಲ್ಲಿ ತಾಲೂಕ ಪಂಚಾಯಿತಿ ಕೋಆರ್ಡಿನೇಟರ್ ಆದ ಶರತ್ ರವರು ಸ್ವಾಗತಿಸಿದರು.ಜಯಸುಧಾ ಪ್ರಾರ್ಥಿಸಿದರು.ಕಾರ್ಯಕ್ರಮದಲ್ಲಿ ಕ್ಲಸ್ಟರ್ ಕೊ ಆರ್ಡಿನೇಟರ್ ಆಶಾ, ಪುಷ್ಪ, ನೇತ್ರಾವತಿ, ರಮೇಶ್,ರೈತರಾದ ವಿವೇಕಾನಂದ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ