ಜ್ಞಾನ ಶ್ರೇಷ್ಠ. ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ. ಆದರೆ,ಅನುಭವದಿಂದ ದಕ್ಕಿದ ಜ್ಞಾನ ಅತ್ಯಂತ ಶ್ರೇಷ್ಠ .ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುವುದನ್ನು ಕಲಿತುಕೊಳ್ಳುತ್ತಾರೆ" ಎಂದು ಸಚಿವರಾದ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಹುಳಿಯಾರಿನ ಬಿ.ಎಂ.ಎಸ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-1 ಮತ್ತು ಘಟಕ-2 ರ ವತಿಯಿಂದ 2021-22 ನೆಯ ಸಾಲಿನ "ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ"ವನ್ನು ಗುರುವಾಪುರ ಗ್ರಾಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಮುಂದುವರಿದು ವೈಯಕ್ತಿಕ ನೆಲೆಯಲ್ಲಿಯೂ, ಸಾಮಾಜಿಕ ನೆಲೆಯಲ್ಲಿಯೂ ಗ್ರಾಮಗಳು ಅಭಿವೃದ್ಧಿ ಹೊಂದಬೇಕಾಗಿದೆ.ಈ ನಿಟ್ಟಿನಲ್ಲಿ ಜಾತಿ - ಧರ್ಮದ ಸಂಕೋಲೆಯನ್ನು ತೊಡೆದು ಹಾಕಬೇಕು ಹಾಗೂ ಗಾಂಧೀಜಿಯವರ ಕನಸಿನಂತೆ. ಗ್ರಾಮ ಸ್ವರಾಜ್ಯವಾಗಬೇಕು ಎಂದು ಅವರು ಕರೆ ನೀಡಿದರು.ಗ್ರಾಮಗಳು. ಸಶಕ್ತವಾಗಲು ಯುವ ಶಕ್ತಿಯ ಒಳಗೊಳ್ಳುವಿಕೆ ಅಗತ್ಯವಿದೆ.ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮಗಳ ಬಗ್ಗೆ ಅನುಭವ ಅಗತ್ಯ. ಶ್ರಮದಾನದ ಸಮಯದಲ್ಲಿ ವಿದ್ಯಾರ್ಥಿಗಳು ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಸಹಕಾರ ಮತ್ತು ಸುರಕ್ಷತೆ ನೀಡಿ, ಕೃಷಿ ಹಾಗೂ ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070