ಜಿಲ್ಲಾ ಪಂಚಾಯತ್ ತುಮಕೂರು, ತಾಲೂಕು ಪಂಚಾಯತಿ ಚಿಕ್ಕನಾಯಕನಹಳ್ಳಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ/ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಅಡಿಯಲ್ಲಿ "ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಹೆಚ್ಚಿನ ಒತ್ತು ನೀಡುವ ಪ್ರಧಾನ ಮಂತ್ರಿ ವನಧನ ವಿಕಾಸ ಯೋಜನೆಯ ಅನುಷ್ಟಾನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದಲಿಂಗನ ಕಣಿವೆ ಸಂಜೀವಿನಿ ವನಧನ ವಿಕಾಸ ಕೇಂದ್ರದಡಿಯಲ್ಲಿ ಅಡಿಕೆ, ರಾಗಿ, ತೆಂಗು ಮತ್ತು ಹುಣಿಸೆಹಣ್ಣು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತರಬೇತಿಯನ್ನು ಆಯೋಜಿಸಲಾಗಿತ್ತು.
ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಯೋಜನೆಯಿಂದ ಮೌಲ್ಯವರ್ಧನೆ ಚಟುವಟಿಕೆ ಮಾಡಿಕೊಳ್ಳಲು ಶೇ 80% ಹಾಗೂ ಸದಸ್ಯರ ವಂತಿಕೆ 20% ನಿಯಮಕ್ಕೆ ಒಳಪಟ್ಟು ಒಂದು ತಾಲೂಕು ಒಂದು ಉತ್ಪನ್ನ ಎಂಬ ಮಾದರಿಯಂತೆ ಸುಮಾರು 100 ರಿಂದ 120 ಮಹಿಳೆಯರು ಯಶಸ್ವಿಯಾಗಿ ಭಾಗವಹಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಚಿ ನಾ. ಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್, ಟೈಡ್ ಸಂಸ್ಥೆಯ ಯೋಜನಾ ಸಂಯೋಜಕರಾದ ರಂಗಸ್ವಾಮಿ, ಸಂಜೀವಿನಿ ಘಟಕದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶಿವಶಂಕರ್, ವಲಯ ಮೇಲ್ವಿಚಾರಕರಾದ ಶ್ರೀಮತಿ ಯಮುನಾ, ತಾಲೂಕು ತಾಂತ್ರಿಕ ಸಂಯೋಜಕರಾದ ವಿಜಯ್, ರವಿ ಕುಮಾರ್, ರಮೇಶ್ ಮತ್ತು ಶರತ್ ಹಾಗೂ ತೀರ್ಥಪುರ ಗ್ರಾಮ ಪಂಚಾಯಿತಿಯ ನವಚೇತನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅದ್ಯಕ್ಷರು ಮತ್ತು ಎಂಬಿಕೆ ಎಲ್ ಸಿ ಆರ್ ಪಿ ಹಾಗೂ ಮದಲಿಂಗನ ಕಣಿವೆ ಸಂಜೀವಿನಿ ವನಧನ ವಿಕಾಸ ಕೇಂದ್ರದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ