ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-1 ಮತ್ತು ಘಟಕ-2 ರ ವತಿಯಿಂದ 2021-22ನೆಯ ಸಾಲಿನ "ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ"ವನ್ನು ಗುರುವಾಪುರ ಗ್ರಾಮದಲ್ಲಿ ಇಂದಿನಿಂದ ಆಗಸ್ಟ್ ನಾಲ್ಕರವರೆಗೆ ಒಟ್ಟು ಏಳು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ||ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ|| ಮೌನೇಶ್ವರ ಶ್ರೀನಿವಾಸರಾವ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಕೆ.ಬಿ. ಮರುಳಸಿದ್ದಪ್ಪ, ಗಾಣದಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ನಾಗರಾಜು, ಸಿಡಿಸಿ ಸದಸ್ಯ ಎಲ್.ಆರ್. ಬಾಲಾಜಿ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆಂಕೆರೆ ನವೀನ್, ಡಾ|| ಕೆ ಚಂದನ, ಕೆ.ಕೆ.ಹನುಮಂತಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶಿಬಿರದಲ್ಲಿ ಸಿರಿಧಾನ್ಯ ಮೇಳ, ಮಿಶ್ರತಳಿ ಕರುಗಳ ಪ್ರದರ್ಶನ ,ಬೇವಿನ ಕಡ್ಡಿ ಆಂದೋಲನ, ಎಳನೀರು ಮೇಳ, ನುಗ್ಗೆಕಾಯಿ ಚಿಗುರು ಆಂದೋಲನ, ದಂತ ಮತ್ತು ನೇತ್ರ ಚಿಕಿತ್ಸಾ ಶಿಬಿರ, ಹುರುಳಿ ಹಬ್ಬ ಮತ್ತಿತರ ವಿಶೇಷತೆಗಳನ್ನು ಆಯೋಜಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ