ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ಹೆಚ್.ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಕಾಟಲಿಂಗಯ್ಯ ಪೂಜಾರಿ ಆಯ್ಕೆಯಾಗಿದ್ದಾರೆ.
ಒಂಬತ್ತು ಸದಸ್ಯರನ್ನು ಒಳಗೊಂಡಿರುವ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಘೋಷಣೆಯಾಗಿ 1-7 -2022 ರಂದು ನಾಮಪತ್ರ ಸಲ್ಲಿಕೆಯಾಗಿ, 2-7-2022 ರಂದು ಚುನಾವಣೆ ನಡೆದಿದ್ದು ಅಧ್ಯಕ್ಷರ ಸ್ಥಾನಕ್ಕೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರಮೇಶ್ ಕುಮಾರ್ ಹಾಗೂ ಮತ್ತೊಬ್ಬ ಅಭ್ಯರ್ಥಿ ಕಾಟಲಿಂಗಯ್ಯ ಪೂಜಾರಿ ಇವರು ಸ್ಪರ್ಧಿಸಿದ್ದು, ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ನಡೆದ ಈ ಚುನಾವಣೆಯಲ್ಲಿ ಪೂಜಾರಿ ಕಾಟಲಿಂಗಯ್ಯ ಆರು ಜನ ಸದಸ್ಯರ ಸಹಮತದಿಂದ ಜಯಶೀಲರಾಗಿದ್ದಾರೆ ಮತ್ತು ರಮೇಶ್ ಕುಮಾರ್ ಅವರು ಮೂರು ಮತಗಳನ್ನು ಪಡೆದು ಪರಾಜಿತಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ