ಚಿಕ್ಕನಾಯಕನಹಳ್ಳಿ ತಾಲ್ಲೂಕು,ಯಳನಾಡು ಗ್ರಾಮದ ಉಪನ್ಯಾಸಕ ಶ್ರೀ ವೈ.ಆರ್.ಗೋಪಿ ಹಾಗೂ ಶ್ರೀಮತಿ ವಿ.ಪುಷ್ಟ ಇವರ ಮಗಳಾದ ಕುಮಾರಿ ಜಿ.ಅರುಂಧತಿ ಇವರು ಎಂ.ಕಾಂ (ಮಾಹಿತಿ ವ್ಯವಸ್ಥೆ) ಅಂತಿಮ ವರ್ಷದ ಪದವಿಯಲ್ಲಿ ಪ್ರಥಮ ರ‌್ಯಾಂಕ್ ಹಾಗೂ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿತಂದಿದ್ದಾರೆ.
ಕುಮಾರಿ ಜಿ.ಅರುಂಧತಿ ಇವರು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ವ್ಯಾಸಂಗ ನಡೆಸಿದ್ದರು.
ದಿ.05.07.2022 ರಂದು ನಡೆದ ತುಮಕೂರು ವಿಶ್ವವಿದ್ಯಾನಿಲಯದ 15 ನೇ ಘಟಿಕೋತ್ಸವದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಹಾಗೂ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ ಸದಸ್ಯರಾದ ಪ್ರೊ.ಸುಷ್ಮಾ ಯಾದವ್ ಇವರು ಕುಮಾರಿ ಅರುಂಧತಿಗೆ ರ‌್ಯಾಂಕ್ ಪ್ರಮಾಣಪತ್ರ ಹಾಗೂ ಚಿನ್ನದ ಪದಕ ಪ್ರಧಾನ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ