ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿಕ್ಕನಾಯಕನಹಳ್ಳಿಯಲ್ಲಿ ಲೋಕಸಭಾ ಚುನಾವಣೆ ಕುರಿತು ಜಾಥಾ

ಚಿಕ್ಕನಾಯಕನಹಳ್ಳಿ ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ , ಲೋಕಸಭಾ ಚುನಾವಣೆ 2024ರ ಅಂಗವಾಗಿ , ಚುನಾವಣಾ ಕುರಿತಾದ ಜಾಥಾ ಕಾರ್ಯಕ್ರಮವನ್ನು ಇಂದು ಅಯೋಜಿಲಾಗಿತ್ತು. ಜಾಥಾ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿಗಳಾದ ವಸಂತಕುಮಾರ್ ವಿ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಹೊನ್ನಪ್ಪ‌ಜಿ, ತಾಲ್ಲೂಕು ಆರೋಗ್ಯ ಇಲಾಖೆಯ ರಂಗನಾಥ್ , ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಅಶಾ ಕಾರ್ಯಕರ್ತೆಯರು ಮತ್ತಿತರರು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಅಖಿಲ ಭಾರತ ಬಣಜಾರರ ಯಾತ್ರಾಸ್ಥಳವಾದ ದೊಡ್ಡೆಣ್ಣೇಗೆರೆಯಲ್ಲಿ ಶ್ರೀ ಭೀಮಾಸತಿ ತೀಥಾರಾಜಸ್ವಾಮಿ ದೇವತೆಗಳ 67ನೇ ವರ್ಷದ ಜಾತ್ರಾ ಮಹೋತ್ಸವ ಮಾ.14ರ ಗುರುವಾರದಿಂದ ಮಾ.17 ರ ಭಾನುವಾರದವರೆಗೆ

          ✍️ ನರೇಂದ್ರಬಾಬು-ಹುಳಿಯಾರು- 9448760070 ಹುಳಿಯಾರು :ಅಖಿಲ ಭಾರತ ಬಣಜಾರರ ಯಾತ್ರಾಸ್ಥಳವಾದ ತುಮಕೂರು ಜಿಲ್ಲೆಯ ಹಂದನಕೆರೆ ಹೋಬಳಿಯ ದೊಡ್ಡೆಣ್ಣೇಗೆರೆಯಲ್ಲಿ  ಶ್ರೀ ಭೀಮಾಸತಿ ತೀಥಾರಾಜಸ್ವಾಮಿ ದೇವತೆಗಳ 67ನೇ ವರ್ಷದ ಜಾತ್ರಾ ಮಹೋತ್ಸವವು ದಿನಾಂಕ 14-03-2024 ನೇ ಗುರುವಾರದಿಂದ 17-03-2024 ರ ಭಾನುವಾರದವರೆಗೆ  ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಜಾತ್ರಾ ಮಹೋತ್ಸವದ ಬಗ್ಗೆ ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿ ಜಿ ರಘುನಾಥ್ ಕೆಳಕಂಡಂತೆ ಮಾಹಿತಿ ನೀಡಿದರು . *ಪ್ರತಿದಿನ ನಡೆಯುವ ಪೂಜಾ ಕಾರ್ಯಕ್ರಮಗಳು ಹೀಗಿದೆ.* *ದಿನಾಂಕ 14-03-2024 ನೇ ಗುರುವಾರದ ಪೂಜಾ ಕಾರ್ಯಕ್ರಮಗಳು* ------------------------- ಶ್ರೀ ಕರಿಯಮ್ಮದೇವರ ಪುಣ್ಯಾರ್ಚನೆ, ಶ್ರೀ ಗಣಪತಿ ಪುಣ್ಯಾರ್ಚನೆ, ಝಾಂಡೇವು, ಧ್ವಜಾರೋಹಣ ಗರುಡಗಂಬ ಪೂಜೆ, ನಂದಾದೀಪ ಬೆಳಗಿಸುವುದು, ಕಳಸಧಾರಣೆ, ದೇವತೆಗಳಿಗೆ ಅಭಿಷೇಕ *ದಿನಾಂಕ 15-03-2024 ನೇ ಶುಕ್ರವಾರದ ಪೂಜಾ ಕಾರ್ಯಕ್ರಮಗಳು* ----------------------------- ಗಂಗಾಪೂಜೆ ಮತ್ತು ಒಳಂಗ್, ಪಂಚಾಮೃತ ಅಭಿಷೇಕ, ಶ್ರೀ ದೇವತೆಗಳಿಗೆ ಪುಣ್ಯಾರ್ಚನೆ, ದೇವತೆಗಳಿಗೆ ಕವಚಧಾರಣೆ, ಸಾತ್ ಸತ್ತಿಮಾತೆಯರಿಗೆ ಪುಣ್ಯಾರ್ಚನೆ, ಶ್ರೀ ತೀಥಾರಾಜಸ್ವಾಮಿಯವರ ಪುಣ್ಯಾರ್ಚನೆ, ರಸಾಯನ, ಪಾನಕ ಪನಿವಾರ ಬೆಳಿಗ್ಗೆ 10-00 ಘಂಟೆಯ ನಂತರ ಭಕ್ತಾದಿಗಳಿಗೆ ಪೂಜಾ ಮ

ಕೆ.ಎಸ್.ಕಿರಣ್ ಕುಮಾರ್ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಿದ ಚಿಕ್ಕನಾಯಕನಹಳ್ಳಿ ಕೆ.ಡಿ.ಪಿ ಸಮಿತಿ ಸದಸ್ಯರು

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಕೆ.ಡಿ.ಪಿ ಸಮಿತಿಗೆ 1.ಶ್ರೀ ಶಂಕರ್ ಬಿ.ಕೆ ಬಿನ್ ಕುಮಾರಸ್ವಾಮಿ, ಬರಕನಾಳು ಗ್ರಾಮ ಮತ್ತು ಅಂಚೆ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು  2.ಶ್ರೀ ಸಿ.ಪಿ.ರಾಮಚಂದ್ರಯ್ಯ ಬಿನ್ ಪರಶುರಾಮಯ್ಯ, ಹೊಸಬೀದಿ, ಚಿಕ್ಕನಾಯಕನಹಳ್ಳಿ.  3.ಶ್ರೀ ಬಿ.ಎನ್.ದೇವರಾಜು ಬಿನ್ ನಿಂಗಪ್ಪ ತಮ್ಮಡಿಹಳ್ಳಿ, ಗೊಲ್ಲರಹಟ್ಟಿ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು. 4.ಶ್ರೀ ಎಸ್. ಮೋಹನ್ ಬಿನ್ ಶಿವಣ್ಣ ಹೆಚ್.ಮೇಲನಹಳ್ಳಿ, ಗಾಣದಾಳು ಅಂಚೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು. ಹುಳಿಯಾರು ಹೋಬಳಿ, 5.ಶ್ರೀ ಶೇಕ್‌ಗೌಸ್ ಫೀರ್ ಬಿನ್ ಶೇಕಇಮಾಮ್ ಸಾಬ್, ಕರಡಿಸಾಬರ ಪಾಳ್ಯ, ಗಾಣದಾಳು ಅಂಚೆ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು.  6.ಶ್ರೀಮತಿ ಕೆ .ಎಸ್.ಮಧು ಕೋಂ ಸಿ.ಎಂ.ಸುರೇಶ್, ಕರೀದೇವರಮಠದ ಬಳಿ, ಚಿಕ್ಕನಾಯಕನಹಳ್ಳಿ ನಗರ. ಇವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶ ಮಾಡಿರುವ ಡಾ| ಜಿ.ಪರಮೇಶ್ವರ್- ಗೃಹ ಸಚಿವರು ಕರ್ನಾಟಕ ಸರ್ಕಾರ  ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಅವರಿಗೆ ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿ ಬ್ಲಾಕ್ ಅಧ್ಯಕ್ಷರುಗಳಾದ ಪಿ ಟಿ ಚಿ

ಹುಳಿಯಾರು ಪಟ್ಟಣ ಪಂಚಾಯಿತಿಯ 2024- 25 ನೇ ಸಾಲಿನ ಆಯವ್ಯಯ ಮಂಡನೆ

ಹುಳಿಯಾರು ಪಟ್ಟಣ ಪಂಚಾಯಿತಿಯ 2024- 25 ನೇ ಸಾಲಿನ ಆಯವ್ಯಯ ಮಂಡನೆ  ಕೋರಂ ಕೊರತೆಯಿಂದ ತಡವಾಗಿ ಆರಂಭವಾದ ಸಭೆ ಆಯವ್ಯಯದ ಪ್ರಮುಖ ಅಂಕಿ ಅಂಶ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಗಳ ಬಗ್ಗೆ  ವಿವರಣೆ ನೀಡಿದ ಅಧ್ಯಕ್ಷ ಕಿರಣ್ ಕುಮಾರ್‌ ------------------------------ ✍️ ನರೇಂದ್ರಬಾಬು-ಹುಳಿಯಾರು- 9448760070 ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿಯ 2024- 25 ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷ ಕಿರಣ್ ಕುಮಾರ್ ಮಂಡಿಸಿದ್ದು ಪಟ್ಟಣ ಪಂಚಾಯಿತಿಗೆ ವಿವಿಧ ಮೂಲಗಳಿಂದ ಒಟ್ಟು 16,91,63,000 ರೂ ಆದಾಯ ನಿರೀಕ್ಷಿಸಲಾಗಿದ್ದು ಹಾಗೂ 16,58,51,000 ರೂ ವೆಚ್ಚ ನಿರೀಕ್ಷಿಸಲಾಗಿದ್ದು ಒಟ್ಟು 65,40,586 ರೂಪಾಯಿ ಆಖೈರು ಶಿಲ್ಕಿನೊಂದಿಗೆ ಉಳಿತಾಯ ಬಜೆಟ್ ಮಂಡಿಸಲಾಯಿತು. ಗುರುವಾರ ಬೆಳಗ್ಗೆ 11 ಗಂಟೆಗೆ ಆಯವ್ಯಯ ಸಭೆ ಕರೆಯಲಾಗಿದ್ದು ಪಂಚಾಯಿತಿಯ ಪೌರಕಾರ್ಮಿಕರಾದ ರಾಜಣ್ಣ ನಿಧನರಾಗಿದ್ದ ಹಿನ್ನೆಲೆಯಲ್ಲಿ ಸಭೆ ತಡವಾಗಿ ಪ್ರಾರಂಭವಾಯಿತಾದರೂ ಪಂಚಾಯಿತಿ ಮಳಿಗೆ ಹರಾಜು ಮಾಡಲು ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂಬ  ಕಾರಣವೊಡ್ಡಿ, ಕೆಲವರು ಗೈರಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ಸೇರಿದಂತೆ 16 ಸದಸ್ಯರ ಪೈಕಿ ಕೇವಲ 8 ಜನ ಸದಸ್ಯರು ಪಾಲ್ಗೊಳ್ಳುವುದರ ಮೂಲಕ ಸಭೆ ಕಡೆಗೂ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ  ಪ್ರಾರಂಭವಾಯಿತು. ಅಧ್ಯಕ್ಷ ಕಿರಣ್ ಕುಮಾರ್ 2024-25 ನೇ ಸಾಲಿನ ನ

ದೊಡ್ಡೆಣ್ಣೇಗೆರೆಯಲ್ಲಿ ಶ್ರೀ ಭೀಮಾಸತಿ ತೀಥಾರಾಜಸ್ವಾಮಿ ದೇವತೆಗಳ 67ನೇ ವರ್ಷದ ಜಾತ್ರಾ ಮಹೋತ್ಸವ ಮಾ.14ರಿಂದ-17ರವರೆಗೆ

ಹುಳಿಯಾರು : ಅಖಿಲ ಭಾರತ ಬಣಜಾರರ(ಲಂಬಾಣಿ) ಯಾತ್ರಾಸ್ಥಳವಾಗಿರುವ ಹಂದನಕೆರೆ ಹೋಬಳಿಯ ದೊಡ್ಡೆಣ್ಣೇಗೆರೆಯಲ್ಲಿ ಶ್ರೀ ಭೀಮಾಸತಿ ತೀಥಾರಾಜಸ್ವಾಮಿ ದೇವತೆಗಳ 67ನೇ ವರ್ಷದ ಜಾತ್ರಾ ಮಹೋತ್ಸವ ಇದೇ ತಿಂಗಳ 14 ರ ಗುರುವಾರದಿಂದ 17ರ ಭಾನುವಾರದವರೆಗೆ ಒಟ್ಟು ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ ಎಂದು ಭೀಮಾಸತಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ರಾಜಾನಾಯ್ಕ ತಿಳಿಸಿದರು. ಭೀಮಾಸತಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ರಾಜಾನಾಯ್ಕ ಮಾತನಾಡಿದರು. ದೊಡ್ಡೆಣ್ಣೇಗೆರೆಯ ಭೀಮಾಸತಿ ಸನ್ನಿಧಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದ ವಿವಿಧ ಜಿಲ್ಲೆಗಳಾದ ತುಮಕೂರು, ಶಿವಮೊಗ್ಗ, ದಾವಣಗೆರೆ, ಬೀದರ್, ಗುಲ್ಬರ್ಗ, ರಾಯಚೂರು ಸೇರಿದಂತೆ ಹೊರ ರಾಜ್ಯಗಳಿಂದಲೂ  ಜಾತ್ರಾ ಮಹೋತ್ಸವಕ್ಕೆಂದು  ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಬರುವ ಭಕ್ತರಿಗಾಗಿ ಸಮಿತಿಯಿಂದ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಮಾ.14 ರ ಗುರುವಾರ ಝಂಡೇವು ಏರಿಸಿ ಧ್ವಜಾರೋಹಣದ ಮೂಲಕ ಜಾತ್ರಾ ಮಹೋತ್ಸವ ಚಾಲನೆಗೊಳ್ಳಲಿದ್ದು ಪ್ರತಿನಿತ್ಯವು ನಾನಾ ರೀತಿಯ ಪೂಜಾ ಕಾರ್ಯಕ್ರಮಗಳು ಸನ್ನಿಧಾನದಲ್ಲಿ ನೆರವೇರಲಿದ್ದು, ಮಾರ್ಚ್ 16ರ ಶನಿವಾರ ಅದ್ದೂರಿ ರಥೋತ್ಸವ ಕೂಡ ಜರುಗಲಿದೆ ಎಂದರು.                           ಶ್ರೀ ಭೀಮಾಸತಿ ಜಾನಪದ ರಂಗ ಮಂದಿರದಲ್ಲಿ ಪ್ರತಿದಿನ ಬಂಜಾರದ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆ