ವಿಷಯಕ್ಕೆ ಹೋಗಿ

ಅಖಿಲ ಭಾರತ ಬಣಜಾರರ ಯಾತ್ರಾಸ್ಥಳವಾದ ದೊಡ್ಡೆಣ್ಣೇಗೆರೆಯಲ್ಲಿ ಶ್ರೀ ಭೀಮಾಸತಿ ತೀಥಾರಾಜಸ್ವಾಮಿ ದೇವತೆಗಳ 67ನೇ ವರ್ಷದ ಜಾತ್ರಾ ಮಹೋತ್ಸವ ಮಾ.14ರ ಗುರುವಾರದಿಂದ ಮಾ.17 ರ ಭಾನುವಾರದವರೆಗೆ

         ✍️ ನರೇಂದ್ರಬಾಬು-ಹುಳಿಯಾರು- 9448760070

ಹುಳಿಯಾರು:ಅಖಿಲ ಭಾರತ ಬಣಜಾರರ ಯಾತ್ರಾಸ್ಥಳವಾದ ತುಮಕೂರು ಜಿಲ್ಲೆಯ ಹಂದನಕೆರೆ ಹೋಬಳಿಯ ದೊಡ್ಡೆಣ್ಣೇಗೆರೆಯಲ್ಲಿ  ಶ್ರೀ ಭೀಮಾಸತಿ ತೀಥಾರಾಜಸ್ವಾಮಿ ದೇವತೆಗಳ 67ನೇ ವರ್ಷದ ಜಾತ್ರಾ ಮಹೋತ್ಸವವು ದಿನಾಂಕ 14-03-2024 ನೇ ಗುರುವಾರದಿಂದ 17-03-2024 ರ ಭಾನುವಾರದವರೆಗೆ  ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.

ಜಾತ್ರಾ ಮಹೋತ್ಸವದ ಬಗ್ಗೆ ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿ ಜಿ ರಘುನಾಥ್ ಕೆಳಕಂಡಂತೆ ಮಾಹಿತಿ ನೀಡಿದರು.

*ಪ್ರತಿದಿನ ನಡೆಯುವ ಪೂಜಾ ಕಾರ್ಯಕ್ರಮಗಳು ಹೀಗಿದೆ.*

*ದಿನಾಂಕ 14-03-2024 ನೇ ಗುರುವಾರದ ಪೂಜಾ ಕಾರ್ಯಕ್ರಮಗಳು*

-------------------------

ಶ್ರೀ ಕರಿಯಮ್ಮದೇವರ ಪುಣ್ಯಾರ್ಚನೆ, ಶ್ರೀ ಗಣಪತಿ ಪುಣ್ಯಾರ್ಚನೆ, ಝಾಂಡೇವು, ಧ್ವಜಾರೋಹಣ ಗರುಡಗಂಬ ಪೂಜೆ, ನಂದಾದೀಪ ಬೆಳಗಿಸುವುದು, ಕಳಸಧಾರಣೆ, ದೇವತೆಗಳಿಗೆ ಅಭಿಷೇಕ

*ದಿನಾಂಕ 15-03-2024 ನೇ ಶುಕ್ರವಾರದ ಪೂಜಾ ಕಾರ್ಯಕ್ರಮಗಳು*

-----------------------------

ಗಂಗಾಪೂಜೆ ಮತ್ತು ಒಳಂಗ್, ಪಂಚಾಮೃತ ಅಭಿಷೇಕ, ಶ್ರೀ ದೇವತೆಗಳಿಗೆ ಪುಣ್ಯಾರ್ಚನೆ, ದೇವತೆಗಳಿಗೆ ಕವಚಧಾರಣೆ, ಸಾತ್ ಸತ್ತಿಮಾತೆಯರಿಗೆ ಪುಣ್ಯಾರ್ಚನೆ, ಶ್ರೀ ತೀಥಾರಾಜಸ್ವಾಮಿಯವರ ಪುಣ್ಯಾರ್ಚನೆ, ರಸಾಯನ, ಪಾನಕ ಪನಿವಾರ


ಬೆಳಿಗ್ಗೆ 10-00 ಘಂಟೆಯ ನಂತರ ಭಕ್ತಾದಿಗಳಿಗೆ ಪೂಜಾ ಮತ್ತು ದೇವರ ದರ್ಶನ ಪ್ರಾರಂಭ

*ದಿನಾಂಕ 16-03-2024 ನೇ ಶನಿವಾರದ ಪೂಜಾ ಕಾರ್ಯಕ್ರಮಗಳು*

-----------------------------

ಗಂಗಾ ಪೂಜೆ ಮತ್ತು ಕುಂಬಾಭಿಷೇಕ, ಶ್ರೀ ದೇವತೆಗಳಿಗೆ ಕ್ಷೀರಾಭೀಷೇಕ, ಪಂಚಾಮೃತ ಅಭಿಷೇಕ ದೇವತೆಗಳಿಗೆ ಬೆಳ್ಳಿ ಕವಚಧಾರಣೆ ಪೂಜೆ, ರಾತ್ರಿ ದುಗ್ಲಾಸೇವೆ, ಅಂಕುರಾರ್ಪಣೆ (ತೀಜ್)


ಮಧ್ಯಾಹ್ನ 4-00 ರಿಂದ 3ನೇ ವರ್ಷದ ಅದ್ಧೂರಿ ರಥೋತ್ಸವವನ್ನು ನಡೆಸಲಾಗುವುದು


ಸಂಜೆ 6-00 ಕ್ಕೆ ಧಾರ್ಮಿಕ ಮತ್ತು ಸನ್ಮಾನ ಸಮಾರಂಭ


ಸಂಜೆ 8-00 ಘಂಟೆಯಿಂದ ಶ್ರೀ ಕರಿಯಮ್ಮ ದೇವಿ, ಶ್ರೀ ಭೀಮಾಸತಿ, ಶ್ರೀ ತೀಥಾರಾಜಸ್ವಾಮಿಯವರ ಉತ್ಸವ 

*ದಿನಾಂಕ 17-03-2024 ನೇ ಭಾನುವಾರ ಪೂಜಾ ಕಾರ್ಯಕ್ರಮಗಳು*

---------------------------

ಶ್ರೀ ದೇವತೆಗಳಿಗೆ ಭಕ್ತಾದಿಗಳಿಂದ ಪೂಜಾ ಕಾರ್ಯಕ್ರಮಗಳು


ಬೆಳಿಗ್ಗೆ 9-00 ಗಂಟೆಯ ನಂತರ ಶ್ರೀ ತೀಥಾರಾಜಸ್ವಾಮಿಗೆ ವಿಶೇಷ ಪೂಜೆ


*ಶ್ರೀ ಭೀಮಾಸತಿ ಜಾನಪದ ರಂಗಮಂದಿರದಲ್ಲಿ ಪ್ರತಿದಿನ ಬಂಜಾರರ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.*


*ಜಾತ್ರೆ ಹೊರತುಪಡಿಸಿ ಪ್ರತಿ ದಿನ ಬರುವ ಭಕ್ತಾದಿಗಳಿಗೆ “ದಾಸೋಹ" ವ್ಯವಸ್ಥೆ ಮಾಡಲಾಗಿದ್ದು ಭಕ್ತಾದಿಗಳು ದವಸ-ಧಾನ್ಯ ಹಾಗೂ ಧನ ಸಹಾಯವನ್ನು ಅರ್ಪಿಸಲು ಕೋರಿದೆ.*

ಶ್ರೀ ದೇವತೆಗಳ ತಿಂಗಳ ಜಾತ್ರೆ ದಿ॥ 12-04-2024 ಶುಕ್ರವಾರದಿಂದ ದಿ।। 14-04-2024 ನೇ ಭಾನುವಾರದವರೆಗೆ

ವಿ.ಸೂ. : ಶ್ರೀ ಕರಿಯಮ್ಮದೇವಿಯವರ ನೂತನ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಭಕ್ತಾಧಿಗಳು ತಮ್ಮ ತನು ಮನ ಧನ ಇತ್ಯಾದಿಗಳನ್ನು ಅರ್ಪಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯ ಸಮಿತಿಯವರು ಕೋರಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...