ಭೀಮಾಸತಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ರಾಜಾನಾಯ್ಕ ಮಾತನಾಡಿದರು. |
ದೊಡ್ಡೆಣ್ಣೇಗೆರೆಯ ಭೀಮಾಸತಿ ಸನ್ನಿಧಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದ ವಿವಿಧ ಜಿಲ್ಲೆಗಳಾದ ತುಮಕೂರು, ಶಿವಮೊಗ್ಗ, ದಾವಣಗೆರೆ, ಬೀದರ್, ಗುಲ್ಬರ್ಗ, ರಾಯಚೂರು ಸೇರಿದಂತೆ ಹೊರ ರಾಜ್ಯಗಳಿಂದಲೂ ಜಾತ್ರಾ ಮಹೋತ್ಸವಕ್ಕೆಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಬರುವ ಭಕ್ತರಿಗಾಗಿ ಸಮಿತಿಯಿಂದ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಮಾ.14 ರ ಗುರುವಾರ ಝಂಡೇವು ಏರಿಸಿ ಧ್ವಜಾರೋಹಣದ ಮೂಲಕ ಜಾತ್ರಾ ಮಹೋತ್ಸವ ಚಾಲನೆಗೊಳ್ಳಲಿದ್ದು ಪ್ರತಿನಿತ್ಯವು ನಾನಾ ರೀತಿಯ ಪೂಜಾ ಕಾರ್ಯಕ್ರಮಗಳು ಸನ್ನಿಧಾನದಲ್ಲಿ ನೆರವೇರಲಿದ್ದು, ಮಾರ್ಚ್ 16ರ ಶನಿವಾರ ಅದ್ದೂರಿ ರಥೋತ್ಸವ ಕೂಡ ಜರುಗಲಿದೆ ಎಂದರು.
ಶ್ರೀ ಭೀಮಾಸತಿ ಜಾನಪದ ರಂಗ ಮಂದಿರದಲ್ಲಿ ಪ್ರತಿದಿನ ಬಂಜಾರದ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಯಲಿದ್ದು, ಆಗಮಿಸುವ ಸಕಲ ಭಕ್ತಾದಿಗಳಿಗೂ ಪ್ರತಿದಿನ ಮಧ್ಯಾಹ್ನ ದಾಸೋಹ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.
ಸಮಿತಿ ಉಪಾಧ್ಯಕ್ಷ ಸಿಂಗಟಗೆರೆ ರಾಜಾನಾಯ್ಕ್ ಮಾತನಾಡಿದರು. |
ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಮಿಟಿಯ ಕಾರ್ಯದರ್ಶಿ ಜಿ.ರಘುನಾಥ್ ಮಾತನಾಡಿದರು. |
ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಮಿಟಿಯ ಕಾರ್ಯದರ್ಶಿ ಜಿ.ರಘುನಾಥ್ ಮಾತನಾಡಿ ದೊಡ್ಡೆಣ್ಣೇಗೆರೆಯು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುವ ಪವಿತ್ರ ಯಾತ್ರಾ ಸ್ಥಳವಾಗಿ ಹೆಸರಾಗಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಈ ಪವಿತ್ರ ಯಾತ್ರ ಸ್ಥಳಕ್ಕೆ ಆಗಮಿಸಿ ಇಲ್ಲೇ ನಾಲ್ಕು ದಿನಗಳ ಕಾಲವೂ ವಾಸ್ತವ್ಯ ಹೂಡುವುದು ನಡೆದು ಬಂದಿದೆ ಎಂದರು.
ಭೀಮಾಸತಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಎದುರಾಗದಂತೆ ಎಲ್ಲಾ ಅನುಕೂಲವನ್ನು ಕಲ್ಪಿಸಲಾಗಿದೆ ಎಂದರು. ಏಪ್ರಿಲ್ -ಮೇ ತಿಂಗಳಲ್ಲಿ ಕಾಣಿಸುತ್ತಿದ್ದ ಬಿಸಿಲಿನ ಝಳ ಇದೀಗ ಮಾರ್ಚ್ ತಿಂಗಳಿನಲ್ಲಿಯೇ ಕಾಣಿಸುತ್ತಿದ್ದು ನೀರಿನ ಅಭಾವ ಕೂಡ ಎದುರಾಗಿದೆ. ಆದರೂ ಕೂಡ ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆಯನ್ನು ಸಮಿತಿಯಿಂದ ಮಾಡಲಾಗಿದ್ದು, ಬರತಕ್ಕ ಭಕ್ತಾಧಿಗಳು ಸಣ್ಣಪುಟ್ಟ ಲೋಪಗಳನ್ನೇ ದೊಡ್ಡದು ಮಾಡದೆ ಸಹಕರಿಸಿ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಲಾವಿದ ಅಗ್ಗುಂದ ರಮೇಶ್ ಸೇರಿದಂತೆ ಆಲದಕಟ್ಟೆ ತಿಮ್ಮಾನಾಯ್ಕ, ಗೋವಿಂದ ನಾಯ್ಕ, ಕುಮಾರನಾಯ್ಕ, ಅಗ್ರಹಾರ ತಾಂಡ್ಯದ ರಮೇಶ್ ನಾಯ್ಕ, ಮಹದೇವ ನಾಯ್ಕ, ಹುಳಿಯಾರು ಸೋಮಶೇಖರ್, ಕುಮಾರ್, ಉದಯಕುಮಾರ್, ಕರಿಯನಾಯ್ಕ್, ಪೂಜಾರ್ ಗಂಗಾ ನಾಯ್ಕ್ ಸೇರಿದಂತೆ ಹಲವರಿದ್ದರು
--------------------------------
ಸಮುದಾಯದ ಸಚಿವರು- ಶಾಸಕರು- ನಿಗಮ ಮಂಡಳಿಯ ಅಧ್ಯಕ್ಷರು ಸೇರಿದಂತೆ ಸ್ಥಳೀಯ ಶಾಸಕರು ಹಾಗೂ ಮುಖಂಡರುಗಳನ್ನು, ಸಮುದಾಯದ ಹಿರಿಯರನ್ನು ಕೂಡ ಆಹ್ವಾನಿಸಲಾಗಿದ್ದು ಎಲ್ಲರೂ ಸೇರಿ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲು ಸಹಕರಿಸಬೇಕು.: ಜಿ.ರಘುನಾಥ್,ಕಮಿಟಿಯ ಕಾರ್ಯದರ್ಶಿ
-----------------------------
ಲಕ್ಷಾಂತರ ಜನ ಆಗಮಿಸುವ ಜಾತ್ರಾ ಮಹೋತ್ಸವದಲ್ಲಿ ಕೇವಲ 14- 20 ಜನ ಇರುವ ಕಮಿಟಿಯಿಂದ ಸುಧಾರಿಸಲು ಕಷ್ಟ ಸಾಧ್ಯವಾಗಿದ್ದು ಭಕ್ತಾಧಿಗಳೆಲ್ಲರೂ ಕಮಿಟಿಯೊಂದಿಗೆ ಸಹಕರಿಸಬೇಕು : ಸಿಂಗಟಗೆರೆ ರಾಜಾನಾಯ್ಕ
---------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ