ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯ ಕೃತಿಕೋತ್ಸವ

ಹುಳಿಯಾರಿನ ಪುರಾಣ ಪ್ರಸಿದ್ಧ ಅನಂತಶಯನ ರಂಗನಾಥಸ್ವಾಮಿ ದೇವಾಲಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಕೃತಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ತಿಕ ಮಾಸದಲ್ಲಿ ಕೃತಿಕಾ ನಕ್ಷತ್ರದ ದಿನ ವೈಷ್ಣವ ದೇವಾಲಯದಲ್ಲಿ ಕೃತಿಕೋತ್ಸವ ಎಂಬ ಹೆಸರಿನಲ್ಲಿ ದೀಪೋತ್ಸವ ಆಚರಿಸುವ ಸಂಪ್ರದಾಯವಿದ್ದು ಇದರಂಗವಾಗಿ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಹಣತೆ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಹಾಗೂ ಅಭಿಷೇಕ ಸಲ್ಲಿಸುವ ಮೂಲಕ ಸಡಗರದಿಂದ ಆಚರಿಸಲಾಯಿತು. ಶೇಷಶಯನ ರಂಗನಾಥನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ಸವರ್ಾಲಂಕೃತವಾದ ರಂಗನಾಥ ಸ್ವಾಮಿ ಉತ್ಸವ ಮೂರ್ತಿಗೆ ವಿಧಿವತ್ತಾಗಿ ಪೂಜಿಸಿ ಪ್ರಾಕಾರೋತ್ಸವ ನಡೆಸಲಾಯಿತು. ಗರುಡಗಂಭದ ಮೇಲೆ ಘಟಾರತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಸ್ವಾಮಿಯವರಿಗೆ ಮಣೇವು ಹಾಖುವ ಕಾರ್ಯಕ್ರಮ ಮತ್ತು ಕರುಗು ಸುಡುವ (ತೈಲದಿಂದ ಅದ್ದಿದ ಬಟ್ಟೆಯನ್ನು ಗೋಪುರದ ಮುಂಭಾಗದಲ್ಲಿ ಸುಡುವುದು) ಕಾರ್ಯಕ್ರಮಗಳು ನೆರವೇರಿತು. ಸುಟ್ಟು ಬೂದಿಯಾದ ಕರುಗನ್ನು ಭಕ್ತಾಧಿಗಳು ಸಂಕಷ್ಠಗಳನ್ನು ಕರಗಿಸುವಂತೆ ಪ್ರಾರ್ಥಿಸಿ ಹಣೆಗೆ ಧರಿಸಿದರು. ಪೂಜಾ ಕಾರ್ಯವನ್ನು ಅರ್ಚಕರಾದ ಎಚ್.ಕೆ.ಗುಂಡಣ್ಣ, ಎಚ್.ಎಸ್.ಲಕ್ಷ್ಮೀನರಸಿಂಹಯ್ಯ, ಜೆ.ಗುಂಡಪ್ಪ ಅವರು ನಡೆಸಿಕೊಟ್ಟರು. ವಿಪ್ರ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನರವೇರಿತು. ಎಚ್.ಎ.ಸುಬ್ರಹ್ಮಣ್ಯರವರಿಂದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಹು.ಕೃ.ವಿಶ್ವನಾಥ್, ರಂಗನ

ಹುಳಿಯಾರಿನಲ್ಲಿ ಬಸ್ಸ್ ಏಜೆಂಟರ ಸಂಘದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಹುಳಿಯಾರಿನ ಖಾಸಗಿ ಬಸ್ ಏಜೆಂಟರ ಸೇವಾ ಛಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಕನ್ನಡಸೇನೆ, ಶ್ರೀದುಗಾ೯ಪರಮೇಶ್ವರಿ ಕಲಾ ಸಂಘ, ಫುಟ್ಪಾತ್ ವ್ಯಾಪಾರಸ್ಥರ ಸೇವಾ ಛಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ 55 ನೇ ಕನ್ನಡ ರಾಜ್ಯೋತ್ಸವವನ್ನು ಶನಿವಾರ ಅದ್ದೂರಿಯಿಂದ ಆಚರಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರ ಜಿ.ಎಸ್.ವೆಂಕಟಾಚಲಪತಿಶೆಟ್ಟಿ ಬಸ್ಸ್ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು. ನಂತರ ಊರಿನ ರಾಜಬೀದಿಗಳಲ್ಲಿ ಗ್ರಾಮ ದೇವತೆ ಶ್ರೀದುಗಾ೯ಪರಮೇಶ್ವರಿ ಅಮ್ಮನವರು, ರಾಜರಾಜೇಶ್ವರಿ ಅಮ್ಮನವರ ಭಾವಚಿತ್ರ ಹಾಗೂ ಕನ್ನಡಕ್ಕಾಗಿ ದುಡಿದು ಮಡಿದ ಕಟ್ಟಾಳುಗಳ ವೇಷಧಾರಿಗಳ ಮೆರವಣಿಗೆಯನ್ನು ವೈಭವದಿಂದ ಮಾಡಲಾಯಿತು. ದೊಡ್ಡಬಿದರೆಯ ವೀರಗಾಸೆ, ಸಿಂಗಾಪುರದ ಡೊಳ್ಳುಕುಣಿತ, ಬಿಳಿಗೆರೆಯ ನಾಸಿಕ್ ಡೋಲ್, ಸಕಾ೯ರಿ ಪ್ರೌಢಶಾಲೆಯ ಕೋಲಾಟ, ಸಿಡಿಮದ್ದಿನ ಪ್ರದರ್ಶನ ಮೆರವಣಿಗೆಗೆ ಮೆರಗು ತಂದವು. ವಿವಿಧ ಶಾಲೆಗಳ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ವಾಸವಿ ಮತ್ತು ಕೇಶವ ಶಾಲೆ ಹಾಗೂ ಯೋಗಿನಾರಾಯಣ ಐಟಿಐ ಕಾಲೇಜು ವಿದ್ಯಾಥಿ೯ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ವೆಂಕಟಮ್ಮ, ತಾ.ಪಂ.ಸದಸ್ಯ ಶಿವನಂಜಪ್ಪ, ರೈತ ಸಂಘದ ಕೆಂಕೆರೆ ಸತೀಶ್, ಏಜೆಂಟರ ಸಂಘದ ಎಂ.ಎ.ಲೋಕೇಶ್, ಹು.ಕೃ.ವಿಶ್ವನಾಥ್, ಮಹಮದ್ ಇಂತಿಯಾಜ್, ಕನ್ನಡಸೇನೆಯ ಎಚ್.ಎನ್.ಕುಮಾರ್, ನಾಗಭೂ

ಹುಳಿಯಾರಿನಲ್ಲಿ ಫುಟ್ಪಾತ್ ವ್ಯಾಪಾರಿಗಳ ಸಂಘ ಅಸ್ಥಿತ್ವಕ್ಕೆ

ಹುಳಿಯಾರಿನ ಬಸ್ಸ್ ನಿಲ್ದಾಣದಲ್ಲಿ ಫುಟ್ಪಾತ್ ವ್ಯಾಪಾರಸ್ಥರ ಸೇವಾ ಛಾರಿಟಬಲ್ ಟ್ರಸ್ಟ್ ಅಸ್ಥಿತ್ವಕ್ಕೆ ಬಂದಿದೆ. ನೂತನ ಟ್ರಸ್ಟ್ನ ಸಂಸ್ಥಾಪಕ ಗೌರವ ಅಧ್ಯಕ್ಷರಾಗಿ ಎಚ್.ಎನ್.ಮಲ್ಲೇಶ್, ಅಧ್ಯಕ್ಷರಾಗಿ ಎಚ್.ಜಿ.ಬಸವರಾಜು, ಉಪಾಧ್ಯಕ್ಷರಾಗಿ ಎಚ್.ಕೆ.ನರಸಿಂಹಮೂತಿ೯, ಕಾರ್ಯದಶಿ೯ಯಾಗಿ ಎಚ್.ಪಿ.ರಾಘವೇಂದ್ರ, ಸಹಕಾರ್ಯದಶಿ೯ಯಾಗಿ ಉಮಾದೇವಿ, ಖಜಾಂಜಿಯಾಗಿ ದಯಾನಂದ್ ಅವರು ಆಯ್ಕೆಯಾಗಿದ್ದಾರೆ. ಟ್ರಸ್ಟೀಗಳಾಗಿ ಜಮೀರ್ ಅಹಮದ್, ಪಿ.ಎಸ್.ಮಂಜುನಾಥ್, ಮೌಲಾ, ನಾಗರಾಜು, ಎಚ್.ಎಸ್.ರಘುನಾಥ್ ಅವರುಗಳನ್ನು ಆಯ್ಕೆಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟಗರ ಜಿ.ಎಸ್.ವೆಂಕಟಾಚಲಪತಿಶೆಟ್ಟಿ, ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ವೆಂಕಟಮ್ಮ, ರೈತ ಸಂಘದ ಕೆಂಕೆರೆ ಸತೀಶ್, ಮಲ್ಲಿಕಾಜು೯ನ್, ಏಜೆಂಟರ ಸಂಘದ ಎಂ.ಎ.ಲೋಕೇಶ್, ಹು.ಕೃ.ವಿಶ್ವನಾಥ್, ಮಹಮದ್ ಇಂತಿಯಾಜ್, ಕನ್ನಡಸೇನೆಯ ಎಚ್.ಎನ್.ಕುಮಾರ್, ನಾಗಭೂಷಣ್ ಮತ್ತಿತರರು ನೂತನ ಟ್ರಸ್ಟ್ ಉದ್ಘಾಟಿಸಿದರು.

ಕಾಳಮ್ಮನವರಿಗೆ ಸರ್ಪಾಲಂಕಾರ

ಹುಳಿಯಾರಿನ ಶ್ರೀ ಕಾಳಮ್ಮನವರಿಗೆ ಅರ್ಚಕ ಎಚ್.ಎಚ್.ರಾಜಗೋಪಾಲಚಾರ್ ಅವರು ಕಾರ್ತಿಕ ಮಾಸದ ಅಂಗವಾಗಿ ಸರ್ಪಾಲಂಕಾರ ಮಾಡಿದ್ದು ಭಕ್ತರನ್ನು ಆಕರ್ಷಿಸಿತ್ತು.

ಗ್ರಾಮೀಣ ಭಾಗದಲ್ಲಿ ರೋಟರಿಯ ಸೇವೆ ಶ್ಲಾಘನೀಯ:ಡಿಸಿಪಿ ಸಿದ್ದರಾಮಣ್ಣ

(ಹುಳಿಯಾರಿನ ವಾಸವಿ ಶಾಲೆಯ ಆವರಣದಲ್ಲಿ ರೋಟರಿ ಸಂಸ್ಥೆ ತುಮಕೂರು ಹಾಗೂ ಹುಳಿಯಾರು, ಮಣಿಪಾಲ್ ತುಮಕೂರು ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಡಿಸಿಪಿ ಸಿದ್ದರಾಮಣ್ಣ ಮಾತನಾಡಿದರು. ತುಮಕೂರು ರೋಟರಿ ಅಧ್ಯಕ್ಷ ವಿಶ್ವನಾಥ್,ಮಾಜಿ ಅಧ್ಯಕ್ಷ ವಿಶ್ವನಾಥ್, ಹುಳಿಯಾರು ರೋಟರಿ ಅಧ್ಯಕ್ಷ ಮಂಜುನಾಥ್ ಗುಪ್ತ,ರವೀಶ್ ಇದ್ದಾರೆ.) ಅಂತರಾಷ್ಟ್ರೀಯ ಸೇವಾಸಂಸ್ಥೆಯಾದ ರೋಟರಿ ಸೌಲಭ್ಯ ವಂಚಿತ ಗ್ರಾಮೀಣ ಭಾಗದಲ್ಲೂ ತೊಡಗಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ಸಿದ್ದರಾಮಣ್ಣ ಪ್ರಶಂಸೆ ವ್ಯಕ್ತಪಡಿಸಿದರು. ಹುಳಿಯಾರಿನ ವಾಸವಿ ಶಾಲೆಯ ಆವರಣದಲ್ಲಿ ರೋಟರಿ ಸಂಸ್ಥೆ ತುಮಕೂರು ಹಾಗೂ ಹುಳಿಯಾರು, ಮಣಿಪಾಲ್ ತುಮಕೂರು ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಹೃದಯ ತಪಾಸಣಾ ಶಿಬಿರ ಉಧ್ಘಾಟಿಸಿ ಅವರು ಮಾತನಾಡಿದರು. ಪಟ್ಟಣ ಪ್ರದೇಶದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು,ಉತ್ತಮ ಚಿಕಿತ್ಸ ಸೌಲಭ್ಯಗಳು ಲಭ್ಯವಿದ್ದು ಗ್ರಾಮೀಣ ಭಾಗದ ಜನಗಳಿಗೂ ಇಂತಹ ಸೌಲಭ್ಯ ಅತಿ ಕಡಿಮೆ ಖಚಿ೯ನಲ್ಲಿ ದೊರೆಯಲಿ ಎಂಬ ಸದುದ್ದೇಶದಿಂದ ರೋಟರಿ ಸಂಸ್ಥೆ ಉಚಿತ ತಪಾಸಣ ಶಿಬಿರ ಹಮ್ಮಿಕೊಂಡಿದ್ದು ಮುಂದಿನ ದಿನದಲ್ಲಿ ರೋಟರಿ ಸೇರಿದಂತೆ ಇನ್ನಿತರೆ ಸಂಘ ಸಂಸ್ಥೆಗಳು ಇಂತಹ ಕಾರ್ಯವನ್ನು ಆಂದೋಲನ ರೂಪದಲ್ಲಿ ಹಮ್ಮಿಕೊಂಡು ಸೇವಾಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು ಸ

ಕನಕದಾಸರ ಕೀರ್ತನೆಗಳು ಅನುಭಾವದ ಸಾರ

( ಹುಳಿಯಾರು ಎಚ್ಪಿಜಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ಕನಕಜಯಂತಿ ಕಾರ್ಯಕ್ರಮದಲ್ಲಿ ಸಿಆರ್ಪಿ ಮಹಾಲಿಂಗಪ್ಪ ಅವರು ಮಾತನಾಡಿದರು. ಪ್ರಸನ್ನಕುಮಾರ್, ಲೋಕೇಶ್, ಜಾಕೀರ್ ಹುಸೇನ್, ಎಂ.ನಾಗರಾಜು ಇದ್ದಾರೆ.) ಕನಕದಾಸರ ಕೀರ್ತನೆಗಳು ಅನುಭಾವದ ಸಾರ ಕನಕದಸರ ಕೀರ್ತನೆಗಳು ಅನುಭಾವದ ಸಾರಗಳಾಗಿದ್ದು ಸರ್ವ ಕಾಲಕ್ಕೂ ಶ್ರೇಷ್ಠ ಜ್ಞಾನದ ದೀವಿಗೆಯಾಗಿದೆ ಎಂದು ಶಿಕ್ಷಕ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು. ಹುಳಿಯಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಕನಕದಾಸರ 523 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಿಮ್ಮಪ್ಪನಾಯಕ ತಮಗೆ ಸಿಕ್ಕಿದ ಕನಕವನ್ನು ಬಡಬಗ್ಗರಿಗೆ ಹಂಚುವ ಮೂಲಕ ಕನಕದಾಸರಾದರು. ಉಡುಪಿ ಶ್ರೀ ಕೃಷ್ಣನನ್ನು ಮೇಲ್ವರ್ಗದವರ ಪ್ರಭಲ ಅಡ್ಡಿಯ ನಡುವೆಯೂ ಒಲಿಸಿಕೊಂಡು ಭಕ್ತಶ್ರೇಷ್ಠರಾದರು. ವಿಶಿಷ್ಠ ವೈಚಾರಿಕ ದೃಷ್ಠಿಯಿಂದ ಬದುಕಿನ ನೈಜ ಚಿತ್ರಣವನ್ನು ಬದಲಾಯಿಸಲು ಸಾಹಿತ್ಯ ರಚಿಸಿ ಕವಿಶ್ರೇಷ್ಠರಾದರು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ವಹಿಸಿದ್ದರು. ಉಪಾಧ್ಯಕ್ಷ ಲೋಕೇಶ್, ಸದಸ್ಯರುಗಳಾದ ಜಾಕೀರ್ ಹುಸೇನ್, ಎಂ.ನಾಗರಾಜು, ತಿಪ್ಪೇಶ್, ಫಾತೀಮಾ, ಸಿಆರ್ಪಿ ಮಹಾಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಮಲ ಸಂಗಡಿಗರು ಪ್ರಾರ್ಥಿಸಿ ಮುಖ್ಯ ಶಿಕ್ಷಕ ಪಿ.ಬಿ.ನಂದಾವಾಡಗಿ ಸ್ವಾಗತಿಸಿ ಶಿಕ್ಷಕಿ ಲಕ್ಷ್ಮೀಬಾಯಿ ನಿರೂಪಿಸ

ಕುರುಬರ ಸಂಘದ ವತಿಯಿಂದ ಕನಕ ಜಯಂತಿ

ಹುಳಿಯಾರು ಹೋಬಳಿ ಕುರುಬರ ಸಂಘದ ವತಿಯಿಂದ ಕನಕ ಜಯಂತಿ ಅಂಗವಾಗಿ ರೋಗಿಗಳಿಗೆ ಹಾಲು-ಹಣ್ಣು-ಬ್ರೆಡ್ ವಿತರಿಸಲಾಯಿತು. ಜಿ.ಪಂ.ಸದಸ್ಯ ಹೊನ್ನಯ್ಯ, ತಾ.ಪಂ.ಸದಸ್ಯ ಶಿವನಂಜಪ್ಪ, ವೈ.ಸಿ.ಸಿದ್ಧರಾಮಯ್ಯ, ಎಚ್.ಆರ್.ರಂಗನಾಥ್, ಎಸ್.ರಾಮಯ್ಯ, ಗೋವಿಂದಪ್ಪ, ಮತ್ತಿತರಿದ್ದಾರೆ.

ಕನಕ ಪತ್ತಿನ ಸಹಕಾರ ಸಂಘದಲ್ಲಿ ಕನಕ ಜಯಂತಿ

ಹುಳಿಯಾರಿನ ಕನಕ ಪತ್ತಿನ ಸಹಕಾರ ಸಂಘದಲ್ಲಿ ಕನಕ ಜಯಂತಿ ಆಚರಿಸಲಾಯಿತು. ವೈ.ಸಿ.ಸಿದ್ಧರಾಮಯ್ಯ, ಎಚ್.ಅಶೋಕ್, ಎನ್.ಬಿ.ಗವೀರಂಗಯ್ಯ, ಜಯಣ್ಣ, ಎಚ್.ಆರ್.ರಂಗನಾಥ್ ಮತ್ತಿತರರು ಇದ್ದಾರೆ.

ನಿರಾಶ್ರಿತರಿಗೆ ಸೋಮಜ್ಜನಪಾಳ್ಯದಲ್ಲಿ ಸೂರು ಕಲ್ಪಿಸುವ ಪುನರ್ವಸತಿಗೆ ಯೋಜನೆಗೆ ಗ್ರಾಮಸ್ಥರ ವಿರೋಧ

(ಹುಳಿಯಾರು ಸಮೀಪದ ಸೋಮಜ್ಜನಪಾಳ್ಯದಲ್ಲಿ ಬೇರೆ ಗ್ರಾಮದ ನಿರಾಶ್ರಿತರಿಗೆ ಭೂಮಿ ನೀಡದಂತೆ ಗ್ರಾ.ಪಂ.ಸದಸ್ಯರಾದ ಎಂ.ಅಶೋಕ್ ಬಾಬು, ಬಾಲರಾಜು ನೇತೃತ್ವದಲ್ಲಿ ಉಪತಹಸೀಲ್ದಾರ್ ಅಂಜಿನಪ್ಪ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು ) ನಿರಾಶ್ರಿತರಿಗೆ ಸೋಮಜ್ಜನಪಾಳ್ಯದಲ್ಲಿ ಸೂರು ಕಲ್ಪಿಸುವ ಪುನರ್ವಸತಿಗೆ ಯೋಜನೆಗೆ ಗ್ರಾಮಸ್ಥರ ವಿರೋಧ ಹುಳಿಯಾರು ಕೆರೆಗೆ ನೀರು ಹರಿಸುತ್ತಿರುವುದರಿಂದ ಮನೆ ಕಳೆದುಕೊಂಡು ಬೀದಿಗೆ ಬಂದಿರುವ ನಿರಾಶ್ರಿತರಿಗೆ ಸೋಮಜ್ಜನಪಾಳ್ಯದಲ್ಲಿ ಪುನರ್ವಸತಿ ಕಲ್ಪಿಸುವ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಅವರ ಯೋಜನೆಗೆ ಸೋಮಜ್ಜನಪಾಳ್ಯದ ಕೆಲ ಗ್ರಾಮಸ್ಥರು ಹಾಗೂ ಕೆಲವು ಗ್ರಾ.ಪಂ.ಸದಸ್ಯರುಗಳು ವಿರೋಧ ವ್ಯಕ್ತಪಡಿಸಿ ಉಪತಹಸೀಲ್ದಾರ್ ಅಂಜಿನಪ್ಪ ಅವರಿಗೆ ಮಂಗಳವಾರ ಪತ್ರ ಸಲ್ಲಿಸಿದ್ದಾರೆ. ಸೋಮಜ್ಜನಪಾಳ್ಯದ ಸರ್ಕಾರಿ ಸರ್ವೆ ನಂ 99 ರಲ್ಲಿ 4 ಎಕರೆ 36 ಕುಂಟೆ ಗೋಮಾಳವಿದ್ದು ಇದರಲ್ಲಿ 91-92 ರಲ್ಲಿಯೇ 45 ಮಂದಿಗೆ ಆಶ್ರಯ ಯೋಜನೆಯಲ್ಲಿ 30*40 ಅಳತೆಯ ನಿವೇಶನದ ಹಕ್ಕು ಪತ್ರ ನೀಡಲಾಗಿದೆಯಲ್ಲದೆ ಇನ್ನೂ ಕೆಲವರಿಗೆ ಶ್ರೀಘದಲ್ಲಿಯೇ ಹಕ್ಕು ಪತ್ರ ನೀಡುಲಾಗುವುದಿದ್ದು ಇದರಲ್ಲಿ ಈಗಾಗಲೇ ಕೆಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವರು ಕಟ್ಟಿದ ಮನೆಗಳು ಬಿದ್ದು ಹೋಗಿವೆ. ಇನ್ನೂ ಕೆಲವರು ನಿವೇಶವನ್ನು ಸಾವಿರಾರರು ರು. ವೆಚ್ಚದಲ್ಲಿ ಸ್ವಚ್ಚಗೊಳಿಸಿಟ್ಟುಕೊಂಡಿದ್ದಾರೆ.ಅಲ್ಲದೆ ಇದೇ ಗ್ರಾಮದಲ್ಲಿಯೇ ನಿರಾಶ್ರಿತರು ಇರುವಾಗ ಬೇರೆ ಗ್ರಾಮ

ನಿರಾಶ್ರಿತರಿಗೆ ಸೋಮಜ್ಜನಪಾಳ್ಯದಲ್ಲಿ ಸೂರು ಕಲ್ಪಿಸುವ ಪುನರ್ವಸತಿಗೆ ಯೋಜನೆಗೆ ಗ್ರಾಮಸ್ಥರ ವಿರೋಧ

ನವೆಂಬರ್ 24 ರಿಂದ ರೈತರಿಗೆ ನೀಡುವ ಹಾಲಿನ ದರದಲ್ಲಿ ಏರಿಕೆ:ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ

(ಹುಳಿಯಾರು ಸಮೀಪದ ಬರದಲೇಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹಾಲಿನ ಗುಣಮಟ್ಟ ಪರೀಕ್ಷಿಸುವ ಮೂಲಕ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಉದ್ಘಾಟಿಸಿದರು. ಎನ್.ಗೌಡಯ್ಯ, ಧನಂಜಯ್ಯ, ಕೆ.ಸಿ.ಕೇಶವಮೂರ್ತಿ, ಕೆಂಕೆರೆ ಸತೀಶ್ ಇದ್ದಾರೆ.) ನವೆಂಬರ್ 24 ರಿಂದ ರೈತರಿಗೆ ನೀಡುವ ಹಾಲಿನ ದರದಲ್ಲಿ ಏರಿಕೆ:ಹಳೆಮನೆ ಶಿವನಂಜಪ್ಪ -------------------------------------------------------------------- ನವೆಂಬರ್ 24 ರಿಂದ ತುಮಕೂರು ಹಾಲು ಒಕ್ಕೂಟಕ್ಕೆ ಹಾಲು ಹಾಕುತ್ತಿರುವ ರೈತರಿಗೆ ಇಲ್ಲಿಯವರೆವಿಗೆ ಸರ್ಕಾರದ ಪ್ರೋತ್ಸಾಹ ಧನ ಸೇರಿ ನೀಡಲಾಗಿತ್ತಿದ್ದ ಹದಿನಾರುವರೆ ರು. ಬದಲಿಗೆ ಎಪ್ಪತೈದು ಪೈಸೆ ಹೆಚ್ಚಳ ಮಾಡಿ ಹದಿನೇಳುಕಾಲು ರು. ನೀಡಲು ನಿರ್ಧರಿಸಿರುವುದಾಗಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಅವರು ತಿಳಿಸಿದರು. ಹುಳಿಯಾರು ಸಮೀಪದ ಬರದಲೇಪಾಳ್ಯದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ತುಮಕೂರು ಒಕ್ಕೂಟ ಹಾಲು ಪೌಡರಿಗೆ ಹೋಗಿ ಬಹಳ ನಷ್ಟದಲ್ಲಿತ್ತು. ಆದರೆ ಈಗ ಕೇರಳ, ಬಳ್ಳಾರಿ, ಮುಂಬೈಗಳಿಗೆ ಹೋಗುತ್ತಿದ್ದು ಲಾಭದಲ್ಲಿ ನಡೆಯುತ್ತಿದೆ ಎಂದರಲ್ಲದೆ, ಚಿಕ್ಕನಾಯಕನಹಳ್ಳಿ ತಾಲೂಕಿನಿಂದ ಮೊದಲು ದಿನಕ್ಕೆ 6 ಸಾವಿರ ಲೀ. ಹಾಲು ಒಕ್ಕೂಟಕ್ಕೆ ಹೋಗುತ್ತಿತ್ತು. ಈಗ 40 ಸಾವಿರ ಲೀ. ಹೋಗುತ್ತಿದೆ. ಇದನ್ನು 1 ಲಕ್ಷಕ್ಕೆ ಮುಟ್ಟಿಸುವ ಗುರಿ ಇಟ್ಟುಕೊಂಡಿ