ಹುಳಿಯಾರಿನ ಖಾಸಗಿ ಬಸ್ ಏಜೆಂಟರ ಸೇವಾ ಛಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಕನ್ನಡಸೇನೆ, ಶ್ರೀದುಗಾ೯ಪರಮೇಶ್ವರಿ ಕಲಾ ಸಂಘ, ಫುಟ್ಪಾತ್ ವ್ಯಾಪಾರಸ್ಥರ ಸೇವಾ ಛಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ 55 ನೇ ಕನ್ನಡ ರಾಜ್ಯೋತ್ಸವವನ್ನು ಶನಿವಾರ ಅದ್ದೂರಿಯಿಂದ ಆಚರಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರ ಜಿ.ಎಸ್.ವೆಂಕಟಾಚಲಪತಿಶೆಟ್ಟಿ ಬಸ್ಸ್ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು. ನಂತರ ಊರಿನ ರಾಜಬೀದಿಗಳಲ್ಲಿ ಗ್ರಾಮ ದೇವತೆ ಶ್ರೀದುಗಾ೯ಪರಮೇಶ್ವರಿ ಅಮ್ಮನವರು, ರಾಜರಾಜೇಶ್ವರಿ ಅಮ್ಮನವರ ಭಾವಚಿತ್ರ ಹಾಗೂ ಕನ್ನಡಕ್ಕಾಗಿ ದುಡಿದು ಮಡಿದ ಕಟ್ಟಾಳುಗಳ ವೇಷಧಾರಿಗಳ ಮೆರವಣಿಗೆಯನ್ನು ವೈಭವದಿಂದ ಮಾಡಲಾಯಿತು.
ದೊಡ್ಡಬಿದರೆಯ ವೀರಗಾಸೆ, ಸಿಂಗಾಪುರದ ಡೊಳ್ಳುಕುಣಿತ, ಬಿಳಿಗೆರೆಯ ನಾಸಿಕ್ ಡೋಲ್, ಸಕಾ೯ರಿ ಪ್ರೌಢಶಾಲೆಯ ಕೋಲಾಟ, ಸಿಡಿಮದ್ದಿನ ಪ್ರದರ್ಶನ ಮೆರವಣಿಗೆಗೆ ಮೆರಗು ತಂದವು. ವಿವಿಧ ಶಾಲೆಗಳ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ವಾಸವಿ ಮತ್ತು ಕೇಶವ ಶಾಲೆ ಹಾಗೂ ಯೋಗಿನಾರಾಯಣ ಐಟಿಐ ಕಾಲೇಜು ವಿದ್ಯಾಥಿ೯ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ವೆಂಕಟಮ್ಮ, ತಾ.ಪಂ.ಸದಸ್ಯ ಶಿವನಂಜಪ್ಪ, ರೈತ ಸಂಘದ ಕೆಂಕೆರೆ ಸತೀಶ್, ಏಜೆಂಟರ ಸಂಘದ ಎಂ.ಎ.ಲೋಕೇಶ್, ಹು.ಕೃ.ವಿಶ್ವನಾಥ್, ಮಹಮದ್ ಇಂತಿಯಾಜ್, ಕನ್ನಡಸೇನೆಯ ಎಚ್.ಎನ್.ಕುಮಾರ್, ನಾಗಭೂಷಣ್, ಸತೀಶ್, ಫುಟ್ಪಾತ್ ವ್ಯಾಪಾರಿಗಳ ಸಂಘದ ಎಚ್.ಎನ್.ಮಲ್ಲೇಶ್, ಎಚ್.ಜಿ.ಬಸವರಾಜು, ಎಚ್.ಪಿ.ರಾಘವೇಂದ್ರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕನ್ನಡಭಿಮಾನಿಗಳು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ