(ಹುಳಿಯಾರು ಸಮೀಪದ ಸೋಮಜ್ಜನಪಾಳ್ಯದಲ್ಲಿ ಬೇರೆ ಗ್ರಾಮದ ನಿರಾಶ್ರಿತರಿಗೆ ಭೂಮಿ ನೀಡದಂತೆ ಗ್ರಾ.ಪಂ.ಸದಸ್ಯರಾದ ಎಂ.ಅಶೋಕ್ ಬಾಬು, ಬಾಲರಾಜು ನೇತೃತ್ವದಲ್ಲಿ ಉಪತಹಸೀಲ್ದಾರ್ ಅಂಜಿನಪ್ಪ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು )
ನಿರಾಶ್ರಿತರಿಗೆ ಸೋಮಜ್ಜನಪಾಳ್ಯದಲ್ಲಿ ಸೂರು ಕಲ್ಪಿಸುವ ಪುನರ್ವಸತಿಗೆ ಯೋಜನೆಗೆ ಗ್ರಾಮಸ್ಥರ ವಿರೋಧ
ಸೋಮಜ್ಜನಪಾಳ್ಯದ ಸರ್ಕಾರಿ ಸರ್ವೆ ನಂ 99 ರಲ್ಲಿ 4 ಎಕರೆ 36 ಕುಂಟೆ ಗೋಮಾಳವಿದ್ದು ಇದರಲ್ಲಿ 91-92 ರಲ್ಲಿಯೇ 45 ಮಂದಿಗೆ ಆಶ್ರಯ ಯೋಜನೆಯಲ್ಲಿ 30*40 ಅಳತೆಯ ನಿವೇಶನದ ಹಕ್ಕು ಪತ್ರ ನೀಡಲಾಗಿದೆಯಲ್ಲದೆ ಇನ್ನೂ ಕೆಲವರಿಗೆ ಶ್ರೀಘದಲ್ಲಿಯೇ ಹಕ್ಕು ಪತ್ರ ನೀಡುಲಾಗುವುದಿದ್ದು ಇದರಲ್ಲಿ ಈಗಾಗಲೇ ಕೆಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವರು ಕಟ್ಟಿದ ಮನೆಗಳು ಬಿದ್ದು ಹೋಗಿವೆ. ಇನ್ನೂ ಕೆಲವರು ನಿವೇಶವನ್ನು ಸಾವಿರಾರರು ರು. ವೆಚ್ಚದಲ್ಲಿ ಸ್ವಚ್ಚಗೊಳಿಸಿಟ್ಟುಕೊಂಡಿದ್ದಾರೆ.ಅಲ್ಲದೆ ಇದೇ ಗ್ರಾಮದಲ್ಲಿಯೇ ನಿರಾಶ್ರಿತರು ಇರುವಾಗ ಬೇರೆ ಗ್ರಾಮದವರಿಗೆ ಇಲ್ಲಿ ಅವಕಾಶ ಕೊಡುವುದು ಎಷ್ಟು ಸರಿ ಎಂದು ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಎಂ.ಅಶೋಕ್ ಬಾಬು, ಬಾಲರಾಜು, ಚಂದ್ರಕಲಾ ಪ್ರಶ್ನಿಸಿದ್ದಾರೆ.
ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವವ ಮೇಲೆ ನಮಗೂ ಅನುಕಂಪವಿದ್ದು ತಹಸೀಲ್ದಾರ್ ರವರು ಅವರಿಗಳಿಗೆ ಬೇರೆ ಎಲ್ಲಿಯಾದರೂ ಭೂಮಿ ಖರೀಧಿಸಿ ಪುನರ್ವಸತಿ ಕಲ್ಪಿಸುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಶೀಘ್ರದಲ್ಲಿಯೇ ನಮ್ಮೂರಿನ ವಸತಿರಹಿತರಿಗೆ ಈ ಜಾಗದಲ್ಲಿ ಹಕ್ಕು ಪತ್ರ ಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಮದ ಮುಖಂಡರಾದ ಹೊನ್ನಪ್ಪ, ಕಿಟ್ಟಪ್ಪ, ದುರ್ಗಯ್ಯ, ನಾಗರಾಜು, ಸಿದ್ದಣ್ಣ ಹಾಗೂ ಐದು ಸ್ರೀಶಕ್ತಿ ಸಂಘಗಳ ಪ್ರತಿನಿಧಿಗಳು ಹಾಜರಿದ್ದರು.

ಹುಳಿಯಾರು ಕೆರೆಗೆ ನೀರು ಹರಿಸುತ್ತಿರುವುದರಿಂದ ಮನೆ ಕಳೆದುಕೊಂಡು ಬೀದಿಗೆ ಬಂದಿರುವ ನಿರಾಶ್ರಿತರಿಗೆ ಸೋಮಜ್ಜನಪಾಳ್ಯದಲ್ಲಿ ಪುನರ್ವಸತಿ ಕಲ್ಪಿಸುವ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಅವರ ಯೋಜನೆಗೆ ಸೋಮಜ್ಜನಪಾಳ್ಯದ ಕೆಲ ಗ್ರಾಮಸ್ಥರು ಹಾಗೂ ಕೆಲವು ಗ್ರಾ.ಪಂ.ಸದಸ್ಯರುಗಳು ವಿರೋಧ ವ್ಯಕ್ತಪಡಿಸಿ ಉಪತಹಸೀಲ್ದಾರ್ ಅಂಜಿನಪ್ಪ ಅವರಿಗೆ ಮಂಗಳವಾರ ಪತ್ರ ಸಲ್ಲಿಸಿದ್ದಾರೆ.
ಸೋಮಜ್ಜನಪಾಳ್ಯದ ಸರ್ಕಾರಿ ಸರ್ವೆ ನಂ 99 ರಲ್ಲಿ 4 ಎಕರೆ 36 ಕುಂಟೆ ಗೋಮಾಳವಿದ್ದು ಇದರಲ್ಲಿ 91-92 ರಲ್ಲಿಯೇ 45 ಮಂದಿಗೆ ಆಶ್ರಯ ಯೋಜನೆಯಲ್ಲಿ 30*40 ಅಳತೆಯ ನಿವೇಶನದ ಹಕ್ಕು ಪತ್ರ ನೀಡಲಾಗಿದೆಯಲ್ಲದೆ ಇನ್ನೂ ಕೆಲವರಿಗೆ ಶ್ರೀಘದಲ್ಲಿಯೇ ಹಕ್ಕು ಪತ್ರ ನೀಡುಲಾಗುವುದಿದ್ದು ಇದರಲ್ಲಿ ಈಗಾಗಲೇ ಕೆಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವರು ಕಟ್ಟಿದ ಮನೆಗಳು ಬಿದ್ದು ಹೋಗಿವೆ. ಇನ್ನೂ ಕೆಲವರು ನಿವೇಶವನ್ನು ಸಾವಿರಾರರು ರು. ವೆಚ್ಚದಲ್ಲಿ ಸ್ವಚ್ಚಗೊಳಿಸಿಟ್ಟುಕೊಂಡಿದ್ದಾರೆ.ಅಲ್ಲದೆ ಇದೇ ಗ್ರಾಮದಲ್ಲಿಯೇ ನಿರಾಶ್ರಿತರು ಇರುವಾಗ ಬೇರೆ ಗ್ರಾಮದವರಿಗೆ ಇಲ್ಲಿ ಅವಕಾಶ ಕೊಡುವುದು ಎಷ್ಟು ಸರಿ ಎಂದು ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಎಂ.ಅಶೋಕ್ ಬಾಬು, ಬಾಲರಾಜು, ಚಂದ್ರಕಲಾ ಪ್ರಶ್ನಿಸಿದ್ದಾರೆ.
ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವವ ಮೇಲೆ ನಮಗೂ ಅನುಕಂಪವಿದ್ದು ತಹಸೀಲ್ದಾರ್ ರವರು ಅವರಿಗಳಿಗೆ ಬೇರೆ ಎಲ್ಲಿಯಾದರೂ ಭೂಮಿ ಖರೀಧಿಸಿ ಪುನರ್ವಸತಿ ಕಲ್ಪಿಸುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಶೀಘ್ರದಲ್ಲಿಯೇ ನಮ್ಮೂರಿನ ವಸತಿರಹಿತರಿಗೆ ಈ ಜಾಗದಲ್ಲಿ ಹಕ್ಕು ಪತ್ರ ಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಮದ ಮುಖಂಡರಾದ ಹೊನ್ನಪ್ಪ, ಕಿಟ್ಟಪ್ಪ, ದುರ್ಗಯ್ಯ, ನಾಗರಾಜು, ಸಿದ್ದಣ್ಣ ಹಾಗೂ ಐದು ಸ್ರೀಶಕ್ತಿ ಸಂಘಗಳ ಪ್ರತಿನಿಧಿಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ