ಹುಳಿಯಾರಿನ ಪುರಾಣ ಪ್ರಸಿದ್ಧ ಅನಂತಶಯನ ರಂಗನಾಥಸ್ವಾಮಿ ದೇವಾಲಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಕೃತಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ತಿಕ ಮಾಸದಲ್ಲಿ ಕೃತಿಕಾ ನಕ್ಷತ್ರದ ದಿನ ವೈಷ್ಣವ ದೇವಾಲಯದಲ್ಲಿ ಕೃತಿಕೋತ್ಸವ ಎಂಬ ಹೆಸರಿನಲ್ಲಿ ದೀಪೋತ್ಸವ ಆಚರಿಸುವ ಸಂಪ್ರದಾಯವಿದ್ದು ಇದರಂಗವಾಗಿ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಹಣತೆ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಹಾಗೂ ಅಭಿಷೇಕ ಸಲ್ಲಿಸುವ ಮೂಲಕ ಸಡಗರದಿಂದ ಆಚರಿಸಲಾಯಿತು.
ಶೇಷಶಯನ ರಂಗನಾಥನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಜೆ ಸವರ್ಾಲಂಕೃತವಾದ ರಂಗನಾಥ ಸ್ವಾಮಿ ಉತ್ಸವ ಮೂರ್ತಿಗೆ ವಿಧಿವತ್ತಾಗಿ ಪೂಜಿಸಿ ಪ್ರಾಕಾರೋತ್ಸವ ನಡೆಸಲಾಯಿತು. ಗರುಡಗಂಭದ ಮೇಲೆ ಘಟಾರತಿಯನ್ನು ಪ್ರತಿಷ್ಠಾಪಿಸಲಾಯಿತು.
ನಂತರ ಸ್ವಾಮಿಯವರಿಗೆ ಮಣೇವು ಹಾಖುವ ಕಾರ್ಯಕ್ರಮ ಮತ್ತು ಕರುಗು ಸುಡುವ (ತೈಲದಿಂದ ಅದ್ದಿದ ಬಟ್ಟೆಯನ್ನು ಗೋಪುರದ ಮುಂಭಾಗದಲ್ಲಿ ಸುಡುವುದು) ಕಾರ್ಯಕ್ರಮಗಳು ನೆರವೇರಿತು. ಸುಟ್ಟು ಬೂದಿಯಾದ ಕರುಗನ್ನು ಭಕ್ತಾಧಿಗಳು ಸಂಕಷ್ಠಗಳನ್ನು ಕರಗಿಸುವಂತೆ ಪ್ರಾರ್ಥಿಸಿ ಹಣೆಗೆ ಧರಿಸಿದರು.
ಪೂಜಾ ಕಾರ್ಯವನ್ನು ಅರ್ಚಕರಾದ ಎಚ್.ಕೆ.ಗುಂಡಣ್ಣ, ಎಚ್.ಎಸ್.ಲಕ್ಷ್ಮೀನರಸಿಂಹಯ್ಯ, ಜೆ.ಗುಂಡಪ್ಪ ಅವರು ನಡೆಸಿಕೊಟ್ಟರು. ವಿಪ್ರ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನರವೇರಿತು. ಎಚ್.ಎ.ಸುಬ್ರಹ್ಮಣ್ಯರವರಿಂದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಹು.ಕೃ.ವಿಶ್ವನಾಥ್, ರಂಗನಾಥ ಪ್ರಸಾದ್, ಪರಮೇಶಣ್ಣ, ಎಲ್.ಐ.ಸಿ ಗೋಪಿನಾಥ್, ಕೆನರಾಬ್ಯಾಂಕ್ ಸತೀಶ್, ಲಕ್ಷ್ಮೀನಾರಾಯಣ, ರಾಜಣ್ಣ, ಜೆ.ಆರ್.ರಂಗನಾಥಶೆಟ್ಟಿ ಇನ್ನಿತರರು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ