ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು:ಕರ್ನಾಟಕ ಬಂದ್ ಗೆ ಯಾವುದೇ ಪ್ರತಿಕ್ರಿಯೆ ಇಲ್ಲ :ಯತ್ನಾಳ್ ವಿರುದ್ಧ ಆಕ್ರೋಶ

ಜನಜೀವನ ಎಂದಿನಂತೆ: ಕರವೇಯಿಂದ ಪ್ರತಿಭಟನಾ ರ‍್ಯಾಲಿ ಹುಳಿಯಾರು:ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದಿಗೆ ಹುಳಿಯಾರಿನಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಪಟ್ಟಣದಲ್ಲಿ ಬಂದ್ ವಾತಾವರಣ ಲವಲೇಶವೂ ಕಂಡುಬರಲಿಲ್ಲ.ವ್ಯಾಪಾರ-ವಹಿವಾಟು ಎಂದಿನಂತೆ ನಡೆಯಿತು.ಕೆಎಸ್ಆರ್ಟಿಸಿ ಬಸ್ ಸಂಚಾರ ಎಂದಿನಂತೆ ಇತ್ತು. ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿತು.ಎಂದಿನಂತೆ ಜನಸಂಚಾರ,ವಾಹನ ಸಂಚಾರ ಕಂಡುಬಂತು.ಅಂಗಡಿ-ಮುಂಗಟ್ಟುಗಳು,ಹೋಟಲ್ ಗಳು ಎಂದಿನಂತೆ ತೆರೆದಿತ್ತು.ಒಟ್ಟಾರೆ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.        ಕನ್ನಡಪರ ಸಂಘಟನೆಗಳ ಪೈಕಿ ಕರ್ನಾಟಕ ರಕ್ಷಣಾ ವೇದಿಕೆ ಹುಳಿಯಾರು ಘಟಕದಿಂದ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು .ಕರವೇ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕರವೇ ಸರ್ಕಲ್ ನಿಂದ,ಬಸ್ ನಿಲ್ದಾಣ,ರಾಮಗೋಪಾಲ್ ಸರ್ಕಲ್ ಮೂಲಕ ನಾಡಕಚೇರಿಗೆ ಬೈಕ್ ರ‍್ಯಾಲಿ ಯಲ್ಲಿ ಆಗಮಿಸಿ ಉಪತಹಸೀಲ್ದಾರ್ ಸುಮತಿ ಅವರಿಗೆ ಮನವಿ ಸಲ್ಲಿಸಿದರು.            ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್ ಬೆಳಗಾವಿಯಲ್ಲಿ ಸದಾಕಾಲವೂ ಕನ್ನಡ ಧ್ವಜ, ಭಾಷೆ ವಿರೋಧಿಸುತ್ತ ಬಂದಿರುವ ಮರಾಠಿಗರಿಗೆ ನಿಗಮ ಮಂಡಳಿ ಸ್ಥಾಪನೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ನೋವುಂಟುಮಾಡಿದೆ ಎಂದರು.            ಕನ್ನಡ

ಶಾಲಾ-ಕಾಲೇಜುಗಳನ್ನು ಸದ್ಯಕ್ಕೆ ತೆರೆಯುವುದು ಬೇಡ:ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆ

  ಹುಳಿಯಾರು :ರಾಜ್ಯ ಸರ್ಕಾರ ಕರೋನಾ ಕಾಯಿಲೆಯ ನಡುವೆ ಶಾಲಾ ಕಾಲೇಜುಗಳನ್ನು ಆರಂಭಿಸಲು ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದು ಇದರಿಂದ ಪೋಷಕರಿಗೆ ಮತ್ತು ಶಿಕ್ಷಕ ವರ್ಗದವರಿಗೆ ಮಕ್ಕಳಿಗೆ ತೊಂದರೆ ಆಗುವುದರಿಂದ ಶಾಲಾ-ಕಾಲೇಜುಗಳನ್ನು ತೆರೆಯಬಾರದೆಂದು ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆ ರಿ. ಚಿಕ್ಕನಾಯಕನಹಳ್ಳಿ ತಾಲೂಕು ಘಟಕದ ಸದಸ್ಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಚಿಕ್ಕನಾಯಕನಹಳ್ಳಿಯಲ್ಲಿ ತಹಸೀಲ್ದಾರ್ ತೇಜಸ್ವಿನಿ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಸಂಘದ ಸದಸ್ಯರುಗಳು ಕರೋನಾ ಸುರಕ್ಷತೆ ಬಗ್ಗೆ ಸರ್ಕಾರ ಸಾಕಷ್ಟು ಕಾಳಜಿ ವಹಿಸಿದ್ದು ಈ ನಡುವೆ ಶಾಲಾ ಕಾಲೇಜುಗಳನ್ನು ತೆರೆಯಬೇಕೆಂಬ ಒತ್ತಡ ಸರ್ಕಾರದ ಮೇಲೆ ಹೆಚ್ಚಾಗುತ್ತಿದ್ದು ಕರೋನಾ ತೀವ್ರತೆ ಕಡಿಮೆಯಾಗುವವರೆಗೂ ಶಾಲಾ ಕಾಲೇಜನ್ನು ಕರೆಯಬಾರದು ಎಂದು ಒತ್ತಾಯಿಸಿದ್ದಾರೆ.   ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹೆಚ್.ಕೆ.ರವಿಶಂಕರ್,ಉಪಾಧ್ಯಕ್ಷ ತೇಜಸ್ ,ಪ್ರಧಾನ ಕಾರ್ಯದರ್ಶಿ ರವಿರಾಜ್ ,ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ,ಖಜಾಂಚಿ ಹರೀಶ್ ಹಾಗೂ ಸದಸ್ಯರುಗಳಾದ ಪ್ರವೀಣ್, ಸದ್ದಾಮ್, ಚೇತನ್,ಆನಂದ್, ಚೇತನ್ ಕುಮಾರ್ ಭಾಗವಹಿಸಿದ್ದರು.

ಹುಳಿಯಾರು ಕೆರೆಗೆ ಇನ್ನೊಂದು ತಿಂಗಳಲ್ಲಿ ಹರಿದುಬರಲಿದೆ ಹೇಮಾವತಿ ನೀರು

ಜಿಲ್ಲಾ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ಸ್ಥಳ ಪರಿಶೀಲನೆಗೆ ಆಗಮಿಸಿದ ಎಕ್ಸಿಕ್ಯೂಟಿವ್ ಇಂಜಿನಿಯರ್                             ವರದಿ:ಡಿ.ಆರ್.ನರೇಂದ್ರಬಾಬು ಹುಳಿಯಾರು :ಈ ಭಾಗದ ಜನರ ದಶಕಗಳ ಕಾಲದ ಕನಸು ನನಸಾಗಲಿದ್ದು ಇನ್ನು ಕೆಲವೇ ದಿನಗಳಲ್ಲಿ ಹುಳಿಯಾರು ಕೆರೆಗೆ ಹೇಮಾವತಿ ನೀರು ಹರಿಯಲಿದ್ದು,ಈ ಮೂಲಕ ಸಂಘ-ಸಂಸ್ಥೆಗಳು ಸೇರಿದಂತೆ ಅನೇಕರ ಹೋರಾಟದ ಫಲ ದಕ್ಕಲು ಕ್ಷಣಗಣನೆ ಆರಂಭವಾಗಿದೆ. ದಶಕಗಳಿಂದಲೂ ಮಳೆಯಿಲ್ಲದೆ ಬರಪೀಡಿತ ಪ್ರದೇಶವಾಗಿರುವ ಹುಳಿಯಾರಿನಲ್ಲಿ ನೀರಿನ ಸಮಸ್ಯೆ ತೀವ್ರ ಉಲ್ಬಣವಾಗಿದ್ದು ಇಂತಹ ಸಮಯದಲ್ಲಿ ಹೇಮಾವತಿ ನೀರು ಹರಿದು ಜನರ ಸಂಕಷ್ಟಕ್ಕೆ ಇತಿಶ್ರೀ ಹಾಡಲಿರುವುದು ಇಲ್ಲಿನ ಜನಗಳ ಸಂತಸಕ್ಕೆ ಕಾರಣವಾಗಲಿದೆ.   ತಾಲೂಕಿನ 24 ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೇಮಾವತಿ ನೀರು ಹರಿಸಲು ಅಲೊಕೇಶನ್ ಸದ್ಯ ಶೆಟ್ಟಿಕೆರೆ ಕೆರೆಗೆ ನೀರು ತುಂಬುತ್ತಿದೆ. ಅಲ್ಲಿಂದ ಜೋಡಿ ತಿರುಮಲಾಪುರದ ಕೆರೆಗೆ ನೀರು ಬರಲಿದ್ದು,ಅದು ತುಂಬಿದ ನಂತರ ತಿರುಮಲಾಪುರದ ಕೆರೆ ಕೋಡಿಯಿಂದ ಒಣ ಕಾಲುವೆ ಮೂಲಕ ಹುಳಿಯಾರು ಕೆರೆಗೆ ನೀರು ತಲುಪಲಿದೆ.   ನಾನಾ ಕಾರಣಗಳಿಂದಾಗಿ ವಿಳಂಬಗೊಂಡಿದ್ದ ಹೇಮಾವತಿ ನಾಳೆಯ ಕಾಮಗಾರಿ ಇದೀಗ ಚುರುಕಾಗಿ ನಡೆಯುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಆದೇಶದಂತೆ ಇಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ರವಿ ಸೂರನ್ ಹಾಗೂ ಶಿರಾ ಭಾಗದ ಸಹಾಯಕ ಇಂಜಿನ

ಹೆಚ್.ಮೇಲನಹಳ್ಳಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಹುಳಿಯಾರು ಹೋಬಳಿಯ ಹೆಚ್.ಮೇಲನಹಳ್ಳಿ ಗ್ರಾಮದಲ್ಲಿ ಮೇಲನಹಳ್ಳಿ ಕ್ರಿಕೆಟರ್ಸ್ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯವನ್ನು ನ.14 ಮತ್ತು 15 ರಂದು ಹೇಮರಾಜ್ ಮತ್ತು ಷಣ್ಮುಖಪ್ಪ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಪ್ರಥಮ ಬಹುಮಾನ 10,001,ದ್ವಿತೀಯ ಬಹುಮಾನ 5,001 ಮತ್ತು ತೃತೀಯ ಬಹುಮಾನ 2,001 ರೂಗಳು ಹಾಗು ಟ್ರೋಫಿ ನೀಡಲಾಗುವುದು. ಹುಳಿಯಾರು ಪಿಎಸೈ ಕೆ.ಟಿ.ರಮೇಶ್ ಕ್ರೀಡಾಕೂಟ ಉದ್ಘಾಟಿಸಲಿದ್ದು, ತಾಪಂ ಮಾಜಿ ಸದಸ್ಯ ಎಸ್.ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ.ಪಿ.ಎಲ್.ಡಿ ಬ್ಯಾಂಕ್ ಮಾಜಿ ಸದಸ್ಯ ಎಂ.ಎಸ್.ಬಸವರಾಜು ಕ್ರೀಡಾ ಪಟುಗಳಿಗೆ ಹಿತವಚನ ನುಡಿಯಲಿದ್ದಾರೆ. ಮುಖ್ಯ ಅತಿಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶ್ರೀರಂಗಯ್ಯ ಪಾಳ್ಗೊಳ್ಳಲಿದ್ದು ವಕೀಲ ರಾಮಚಂದ್ರಯ್ಯ,ಷಣ್ಮುಖಪ್ಪ,ನಾಗರಾಜ್ ಉಪಸ್ಥಿತರಿರುವರು.ಮಾಹಿತಿಗಾಗಿ 9035970093,9008841807 ಸಂಪರ್ಕಿಸಬಹುದಾಗಿದೆ.

ಕುಶಾಲ್ ಸಿರಿಗನ್ನಡ ಕಂದ

ಹುಳಿಯಾರು:ಸಮೀಪದ ಹೊನ್ನಶೆಟ್ಟಿಹಳ್ಳಿ ಅಂಗವಾಡಿ ಕೇಂದ್ರದ ಮಗು ಹೆಚ್.ಆರ್.ಕುಶಲ್‌ಗೆ ಸಿರಿಗನ್ನಡ ಕಂದ ಪ್ರಶಸ್ತಿ ಲಭಿಸಿದೆ . ಆಕಾಶವಾಣಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗಾಗಿ ಆಯೋಜನೆ ಮಾಡಿದ ರಾಜ್ಯ ಮಟ್ಟದ ಹಾಡು ಮಾತಾಡು ಕಾರ್ಯಕ್ರಮದ ಸರಣಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಿದ ಸಲುವಾಗಿ ಈ ಪ್ರಶಸ್ತಿ ನೀಡಲಾಗಿದೆ. ಎಚ್.ಆರ್.ಕುಶಾಲ್‌ನ ಈ ಸಾಧನೆಗೆ ತಾಯಿ ಜೆ.ಆರ್.ದಿವ್ಯ, ತಂದೆ ಹೆಚ್.ಪಿ.ರಘುಪತಿ ಅವರು ಹರ್ಷ ವ್ಯಕ್ತಪಡಿಸಿದ್ದು ಅಂಗನವಾಡಿ ಕಾರ್ಯಕರ್ತೆ ಹೆಚ್.ಎ.ಪುಷ್ಪಾವತಮ್ಮ ಮಗುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಾಸಲು ಗ್ರಾಮದ ಎಸ್ ಎಂ ಲೋಕೇಶ್ ನಾಯ್ಕ ಯುವ ರೈತ ಪ್ರಶಸ್ತಿಗೆ ಭಾಜನ

  ವರದಿ:ನರೇಂದ್ರಬಾಬು ಹುಳಿಯಾರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದ ಎಸ್.ಎನ್.ಲೋಕೇಶ್ ನಾಯ್ಕ ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ಯುವ ರೈತ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದು ಇಂದು ಬುಧವಾರ ಜಿಕೆವಿಕೆಯಲ್ಲಿ ಆವರಣದಲ್ಲಿ ನಡೆದ 2020ರ ಕೃಷಿಮೇಳದಲ್ಲಿ ನಡೆದ ಸಮಾರಂಭದಲ್ಲಿ ಅತ್ಯುತ್ತಮ ಯುವ ರೈತ ಪ್ರಶಸ್ತಿ ಸ್ವೀಕರಿಸಿದರು. ಸಾಸಲು ಗ್ರಾಮದ ಲೋಕೇಶ್ ನಾಯ್ಕ ಡಿಎಡ್ ವರೆಗೆ ವಿದ್ಯಾಭ್ಯಾಸ ಮಾಡಿದ್ದು ಇವರು ತಮ್ಮ 4 ಎಕರೆ ಜಮೀನಿನಲ್ಲಿ ಕೃಷಿ ಬೆಳೆಗಳಾದ ರಾಗಿ,ಹಾರಕ ಮತ್ತು ತೊಗರಿ ಬೆಳೆಗಳನ್ನು ಹಾಗೂ ತೋಟಗಾರಿಕೆ ಬೆಳೆಗಳಾದ ಅಡಿಕೆ,ಬಾಳೆ,ತೆಂಗು,ಚಕೋತ,ಮಾವು,ಹಲಸು,ನಿಂಬೆ,ನೇರಳೆ,ವೆಲ್ವೆಟ್ ಬೀನ್ಸ್ ಇತ್ಯಾದಿ ಬೆಳೆಗಳನ್ನು ಬೆಳೆದಿದ್ದಾರೆ.  ಕೃಷಿಗೆ ಪೂರಕವಾಗಿ ನಾಟಿ ಹಸು ಮತ್ತು ಹೆಚ್.ಎಫ್ ಹಸುಗಳನ್ನು ಸಾಕಾಣೆ ಮಾಡುತ್ತಿದ್ದು ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ.ಮೇವಿಗಾಗಿ ಜೋಳ,ಅಲಸಂದೆ,ನೇಪಿಯರ್ ಬೆಳೆಗಳನ್ನು ಬೆಳೆದಿದ್ದಾರೆ. ಜೊತೆಗೆ ಅರಣ್ಯ ಕೃಷಿ ಕೈಗೊಂಡಿರುವ ಇವರು ತೇಗ,ಹೆಬ್ಬೇವನ್ನು ತಮ್ಮ ಜಮೀನಿನ ಸುತ್ತ ಬದುಗಳ ಮೇಲೆ ಬೆಳೆದಿದ್ದಾರೆ.ಕೃಷಿ ಜತೆಗೆ ಉಪಕಸುಬಾಗಿ ಜೇನುಸಾಕಣೆಯನ್ನು ಸಹ ಕೈಗೊಂಡಿದ್ದು ಮಣ್ಣಿನ ಸಂರಕ್ಷಣೆಗೆ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮತ್ತು ಜಮೀನಿನ ಸುತ್ತಲೂ ಬದುಗಳ ನಿರ್ಮಾಣ ವಿಧಾನಗಳನ್ನು ಅನುಸರಿಸಿದ್ದಾರೆ.   ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊ

ಬೀದಿಬದಿ ವ್ಯಾಪಾರಿಗಳಿಗೆ ಅರಿವು ಮೂಡಿಸಿದ ಅಭಿಯಾನ ವ್ಯವಸ್ಥಾಪಕ ದೊಡ್ಡವಲಪ್ಪ

  ಬೀದಿಬದಿಯ ವ್ಯಾಪಾರಿಗಳು ಎಂಬ ಗುರುತಿನ ಚೀಟಿಯನ್ನು ಪಡೆಯಲು ಸಲಹೆ ಹುಳಿಯಾರು:ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ಸಹಾಯ ಒದಗಿಸಲು ಪ್ರಧಾನಮಂತ್ರಿ ಬೀದಿ ಬದಿ ಆತ್ಮನಿರ್ಭರ್ ಯೋಜನೆಯನ್ನು ಜಾರಿಗೆ ತಂದಿದ್ದು ಅರ್ಹ ಫಲಾನುಭವಿಗಳು ಇದರ ಉಪಯೋಗ ಪಡೆಯುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ ಅಭಿಯಾನ ವ್ಯವಸ್ಥಾಪಕರಾದ ದೊಡ್ಡವಲಪ್ಪ ತಿಳಿಸಿದರು.  ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಯೋಜನೆಯ ಬಗ್ಗೆ ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎಲ್.ವಿ.ಮಂಜುನಾಥ್ ಅವರೊಂದಿಗೆ ಪಟ್ಟಣದ ಬೀದಿ ಬದಿ ವ್ಯಾಪಾರ ಮಾಡುವ ಸ್ಥಳಗಳಿಗೆ ಖುದ್ದಾಗಿ ತೆರಳಿ ಮಾಹಿತಿ ನೀಡಿದರು.ಹೂ, ಹಣ್ಣು, ಎಳನೀರು, ಮೀನು, ಗೃಹೋಪಯೋಗಿ ವಸ್ತುಗಳು, ತರಕಾರಿ ಮುಂತಾದವುಗಳನ್ನು ತಲೆಹೊರೆ, ತಳ್ಳುಗಾಡಿ, ಸೈಕಲ್, ಮೋಟಾರ್ ಸೈಕಲ್ ಮೂಲಕ ಮನೆಮನೆಗೆ ತೆರಳಿ ಅಥವಾ ಬೀದಿಗಳಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಭೇಟಿಯಾಗಿ ಸಾಲ ಸೌಲಭ್ಯದ ಬಗ್ಗೆ ಅರಿವು ಮೂಡಿಸಿದರು.  ಈ ಯೋಜನೆಡಿ ಪ್ರತೀ ಅರ್ಹ ಫಲಾನುಭವಿಗಳಿಗೆ ರೂ.10,000 ಬ್ಯಾಂಕ್ ಸಾಲವನ್ನು ನೀಡಲಾಗುತ್ತಿದ್ದು ಇದರ ಮರುಪಾವತಿಯನ್ನು 12 ಮಾಸಿಕ ಕಂತುಗಳಲ್ಲಿ ಪಾವತಿ ಮಾಡಬಹುದಾಗಿದೆ ಎಂದರು.   ಬೀದಿಬದಿಯ ವ್ಯಾಪಾರಿಗಳಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದಿದ್ದು ಈ ಯೋಜನೆಯ ಅನು

ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

  ಹುಳಿಯಾರು: 2020-21 ನೇ ಸಾಲಿನ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಯೋಜನೆಯಡಿ ಕಿರು ಸಾಲ ಸೌಲಭ್ಯಕ್ಕಾಗಿ ಹುಳಿಯಾರು ಪಟ್ಟಣ ಪಂಚಾಯ್ತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪಟ್ಟಣದ ಬೀದಿಬದಿ ವ್ಯಾಪಾರಿಗಳು ಜಾತಿ, ಆದಾಯ ದೃಢೀಕರಣ ಪತ್ರ, ಆಧಾರ್ ಕಾರ್ಡ್ ನಕಲು,ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ನಕಲು, 2 ಭಾವಚಿತ್ರ, ಮೊಬೈಲ್ ಸಂಖ್ಯೆ, ಬೀದಿ ಬದಿ ವ್ಯಾಪಾರಿಗಳ ಐ.ಡಿ.ಕಾರ್ಡ್ ಮತ್ತು ಪ್ರಮಾಣ ಪತ್ರದ ನಕಲು ಸೇರಿ ಇನ್ನಿತರ ಅಗತ್ಯ ದಾಖಲಾತಿಗಳೊಂದಿಗೆ ದ್ವಿ ಪ್ರತಿಯಲ್ಲಿ ಪಂಚಾಯ್ತಿಯ ಕಛೇರಿ ಸಮಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹುಳಿಯಾರಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಸಪ್ತಾಹ - ೨೦೨೦

  ಹುಳಿಯಾರು :ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ ಮತ್ತು ೨ರ ಅಡಿಯಲ್ಲಿ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರಿಗೆ "ಜಾಗೃತಿ ಸಪ್ತಾಹ - ೨೦೨೦ : ಪ್ರತಿಜ್ಞಾ ವಿಧಿ"ಯನ್ನು ಬೋಧಿಸಲಾಯಿತು. ಭ್ರಷ್ಟಾಚಾರ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೆ ಬಹುಮುಖ್ಯ ಅಡೆತಡೆ ಎಂದು ನಂಬಿರುತ್ತೇನೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ ನಾಗರಿಕರು ಮತ್ತು ಖಾಸಗಿ ವಲಯದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ನಂಬಿರುತ್ತೇನೆ. ಆದ್ದರಿಂದ ನಾನು ಈ ಕೆಳಕಂಡಂತೆ ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.ನಾನು ಲಂಚವನ್ನು ಕೇಳುವುದಿಲ್ಲ, ಪಡೆಯುವುದೂ ಇಲ್ಲ, ಕೊಡುವುದೂ ಇಲ್ಲ. ಎಲ್ಲ ಕೆಲಸಗಳನ್ನು ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುತ್ತೇನೆ. ಯಾವುದೇ ಭ್ರಷ್ಟಾಚಾರದ ಪ್ರಕರಣಗಳನ್ನು ಸಂಬಂಧಪಟ್ಟ ಸಂಸ್ಥೆಗೆ ವರದಿ ಮಾಡುತ್ತೇನೆ" - ಎಂಬ ಪ್ರತಿಜ್ಞೆಯನ್ನು ಎಲ್ಲರೂ ಸ್ವೀಕರಿಸಿದರು.   ಎಸ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ.ಎಂ.ಜೆ.ಮೋಹನ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.   ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆಯವರು ಗ್ರಾಮ ಪಂಚಾಯತಿ ರಾಜಕಾರಣದ ಬಗ್ಗೆ ಮಾತನಾಡುತ್ತಾ ಭ್ರಷ್ಟಾಚಾರ ಕೆಳಹಂತದಿಂದಲೇ ನಿರ್ಮೂಲನೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.   ಈ

ಹುಳಿಯಾರು:ಬೀದಿನಾಯಿಗಳ ಹಾವಳಿ ವಿಪರೀತ

ಹುಳಿಯಾರು:ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ.ಮುಂಜಾನೆ ಹಾಗೂ ರಾತ್ರಿ ಸಮಯದಲ್ಲಂತೂ ನಾಯಿಗಳ ಕಾಟ ವಿಪರೀತವಾಗಿದ್ದು ಬೈಕ್ ಸವಾರರು ಹಾಗೂ ರಸ್ತೆ ಬದಿ ಜನ ತಿರುಗಾಡಲು ಹೆದರುವ ಪರಿಸ್ಥಿತಿ ಉಂಟಾಗಿದೆ. ಜನಸಾಮಾನ್ಯರು ಒಬ್ಬೊಬ್ಬರೇ ಓಡಾಡುವುದು ಕಷ್ಟವಾಗಿದೆ. ಪ್ರತಿ ವಾರ್ಡ್ ಗಳಲ್ಲೂ ಸಹ ನಾಯಿಗಳ ದಂಡು ಹೆಚ್ಚಾಗಿದೆ.ಬಸ್ ನಿಲ್ದಾಣದಿಂದ ಪೆಟ್ರೋಲ್ ಬಂಕ್ ವರೆಗೂ ಮಾಂಸದ ಅಂಗಡಿಗಳು, ಕೋಳಿ ಅಂಗಡಿಗಳು ಹೆಚ್ಚಿದ್ದು ಇಲ್ಲಿಯ ತ್ಯಾಜ್ಯದಿಂದಾಗಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಅಲ್ಲಿಯೇ ಸುತ್ತಾಡುವ ಇವುಗಳು ಪಕ್ಕನೇ ಅಡ್ಡಬರುವುದರಿಂದ ಹಾಗೂ ಬೈಕ್ ಗಳ ಹಿಂದೆ ಓಡಿಸಿಕೊಂಡು ಬರುವುದರಿಂದ ವಾಹನ ಸವಾರರು ಬೀಳುವ ಸಂಭವ ಹೆಚ್ಚಿದೆ.   ಹುಳಿಯಾರು ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಇಲ್ಲದಿರುವುದು ಹಾಗೂ ಕಸದ ತೊಟ್ಟಿಗಳು ಇಲ್ಲದಿರುವುದರಿಂದ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡುವ ಕಾರಣದಿಂದ ಇವುಗಳನ್ನು ಕೆದಕಲು ಬರುವ ನಾಯಿಗಳಿಂದ ಹಾವಳಿ ಹೆಚ್ಚಾಗಿದೆ.   ಪಟ್ಟಣ ಪಂಚಾಯಿತಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.ಸಂತಾನಹರಣ ಚಿಕಿತ್ಸೆ ಮಾಡುವುದರಿಂದ ಬೀದಿನಾಯಿಗಳ ಹಾವಳಿ ನಿಯಂತ್ರಿಸಬಹುದಾಗಿದೆ.ಅದೇಕೋ ಈ ಕಾರ್ಯಕ್ಕೆ ಪಟ್ಟಣ ಪಂಚಾಯಿತಿಯವರು ಮುಂದಾಗದೆ ನಿರ್ಲಕ್ಷ್ಯವಹಿಸಿದ್ದಾರೆ.ಜನ ನಾಯಿಗಳ ಕಡಿತಕೊಳಗಾಗುವ ಮುಂಚೆಯೇ ಪಟ್ಟಣ ಪಂಚಾಯಿತಿಯವರು ಇತ್ತ ಗಮನಹರಿಸಬೇಕಿದೆ. ಇದಕ್ಕೆ ಕಡಿವಾಣ ಹಾಕಲು ಪಂಚಾಯಿತಿ ಮುಖ್ಯಾಧ

ಹುಳಿಯಾರು-ಕೆಂಕೆರೆ ಕರ್ನಾಟಕ ಪಬ್ಲಿಕ್ ಶಾಲೆಗೆ(KPS) ದಾಖಲಾತಿ ಆರಂಭ

ಹುಳಿಯಾರು-ಕೆಂಕೆರೆ ಕೆಪಿಎಸ್ ಶಾಲೆಯಲ್ಲಿ *LKG ಯಿಂದ 12ನೇ ತರಗತಿಯವರೆಗೆ 2020-21ನೇ ಸಾಲಿಗೆ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು* ಪೋಷಕರು ತಮ್ಮ ಮಕ್ಕಳನ್ನು ಅಗತ್ಯ ದಾಖಲಾತಿಗಳೊಂದಿಗೆ ಶಾಲೆಗೆ ದಾಖಲಿಸಲು ಈ ಮೂಲಕ ಕೋರಲಾಗಿದೆ. LKG ತರಗತಿಗೆ ವಿಶೇಷ ದಾಖಲಾತಿ ಪ್ರಾರಂಭವಾಗಿದ್ದು ಕೆಲವೇ ಸೀಟುಗಳು ಬಾಕಿಯಿರುವುದರಿಂದ ತಮ್ಮ ಮಕ್ಕಳನ್ನು ಆದಷ್ಟು ಶೀಘ್ರವಾಗಿ ದಾಖಲಿಸಲು *ಪ್ರಾಂಶುಪಾಲರಾದ ವಿ.ಹೆಚ್.ರೇವಣ್ಣ ಕೋರಿದ್ದಾರೆ*    *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ*  9353592787 9741260402 9480407592

ಹುಳಿಯಾರಿನಲ್ಲಿ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

  ಹುಳಿಯಾರು: ಕೇಂದ್ರ ಸರ್ಕಾರ ವಿದ್ಯುತ್ ವಲಯವನ್ನು ಖಾಸಗಿಕರಣ ಮಾಡುತ್ತಿರುವುದನ್ನು ವಿರೋಧಿಸಿ ಸೋಮವಾರ ಹುಳಿಯಾರು ಪಟ್ಟಣದ ಬೆಸ್ಕಾಂ ನೌಕರರು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಪಟ್ಟಣದ ಬೆಸ್ಕಾಂ ಕಚೇರಿಯ ಮುಂದೆ ಸರ್ಕಾರದ ಖಾಸಗೀಕರಣದ ನೀತಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 2020ರ ವಿದ್ಯುತ್‌ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದು,ಇದರಿಂದ ಸಾಕಷ್ಟು ಸಮಸ್ಯೆಯಾಗಲಿದ್ದು ರೈತರು ಮತ್ತು ಬಡವರ ಮೇಲೆ ದುಷ್ಪರಿಣಾಮ ಬೀರಲಿದೆ.ಅಲ್ಲದೇ ಖಾಸಗೀಕರಣದ ನೀತಿ ಕಾರ್ಮಿಕರಿಗ ಮರಣ ಶಾಸನವಾಗಲಿದೆ.ವಿದ್ಯುತ್‌ ಇಲಾಖೆ ಲಾಭದಲ್ಲಿ ನಡೆಯುತ್ತಿದ್ದರೂ ಸಹ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವ ಕ್ರಮ ಸರಿಯಲ್ಲ.ಸರ್ಕಾರ ಕೂಡಲೇ ಈ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಲಾಯಿತು.   ಸೆಕ್ಷನ್ ಆಫೀಸರ್ ಉಮೇಶ್ ನಾಯಕ್,ಮೂರ್ತಪ್ಪ ಸೇರಿದಂತೆ 50ಕ್ಕೂ ಹೆಚ್ಚು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆ ನಂತರ ಕಪ್ಪುಪಟ್ಟಿ ಧರಿಸಿ ಕೆಲಸ ಮುಂದುವರಿಸಿದರು.