ಹುಳಿಯಾರು ಹೋಬಳಿಯ ಹೆಚ್.ಮೇಲನಹಳ್ಳಿ ಗ್ರಾಮದಲ್ಲಿ ಮೇಲನಹಳ್ಳಿ ಕ್ರಿಕೆಟರ್ಸ್ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯವನ್ನು ನ.14 ಮತ್ತು 15 ರಂದು ಹೇಮರಾಜ್ ಮತ್ತು ಷಣ್ಮುಖಪ್ಪ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಪ್ರಥಮ ಬಹುಮಾನ 10,001,ದ್ವಿತೀಯ ಬಹುಮಾನ 5,001 ಮತ್ತು ತೃತೀಯ ಬಹುಮಾನ 2,001 ರೂಗಳು ಹಾಗು ಟ್ರೋಫಿ ನೀಡಲಾಗುವುದು.
ಹುಳಿಯಾರು ಪಿಎಸೈ ಕೆ.ಟಿ.ರಮೇಶ್ ಕ್ರೀಡಾಕೂಟ ಉದ್ಘಾಟಿಸಲಿದ್ದು, ತಾಪಂ ಮಾಜಿ ಸದಸ್ಯ ಎಸ್.ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ.ಪಿ.ಎಲ್.ಡಿ ಬ್ಯಾಂಕ್ ಮಾಜಿ ಸದಸ್ಯ ಎಂ.ಎಸ್.ಬಸವರಾಜು ಕ್ರೀಡಾ ಪಟುಗಳಿಗೆ ಹಿತವಚನ ನುಡಿಯಲಿದ್ದಾರೆ.
ಮುಖ್ಯ ಅತಿಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶ್ರೀರಂಗಯ್ಯ ಪಾಳ್ಗೊಳ್ಳಲಿದ್ದು ವಕೀಲ ರಾಮಚಂದ್ರಯ್ಯ,ಷಣ್ಮುಖಪ್ಪ,ನಾಗರಾಜ್ ಉಪಸ್ಥಿತರಿರುವರು.ಮಾಹಿತಿಗಾಗಿ 9035970093,9008841807 ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ