ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ 'ಕೈಗಾರಿಕಾ ಭೇಟಿ

ಹುಳಿಯಾರು-ಕೆಂಕೆರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಬಿಕಾಂ ವಿದ್ಯಾರ್ಥಿಗಳಿಗೆ 'ಕೈಗಾರಿಕಾ  ಭೇಟಿ'  ಕಾರ್ಯಕ್ರಮವನ್ನು ದಿನಾಂಕ 23-08-2022 ರಂದು ಹಮ್ಮಿಕೊಳ್ಳಲಾಗಿತ್ತು. ಹುಳಿಯಾರಿನ ಕೇಶವಾಪುರದ ಟಿ.ಎಸ್.ರಂಗನಾಥ ಆಂಡ್ ಕಂಪನಿಯ ಕಲ್ಪತರು ಬ್ರಿಕ್ಸ್ ಅಂಡ್ ಟೈಲ್ಸ್ ಗೆ ಭೇಟಿ ನೀಡಲಾಯಿತು.              ಸುಮಾರು ಐದು ಎಕರೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಇಲ್ಲಿನ ಇಟ್ಟಿಗೆ ಹೆಂಚು ಮತ್ತು ಟೈಲ್ಸ್ ಇವುಗಳ ಉತ್ಪಾದನಾ ಪ್ರಕ್ರಿಯೆ,ಅಗತ್ಯವಾದ ಕಚ್ಚಾ ವಸ್ತುಗಳು, ಅವುಗಳ ನಿರ್ವಹಣೆ,ದಾಸ್ತಾನು, ಮಾರಾಟ, ಒಟ್ಟು ಉತ್ಪಾದನಾ ವೆಚ್ಚ,ಯಂತ್ರೋಪಕರಣಗಳ ನಿರ್ವಹಣೆ,ಕಾರ್ಮಿಕರು ಹಾಗೂ ಅವರಿಗಿರುವ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿಯನ್ನು ಪಡೆದುಕೊಂಡರು. ನಂತರ ಸೌರ ಶಕ್ತಿ ಸ್ಥಾವರಕ್ಕೆ ಭೇಟಿ ನೀಡಲಾಯಿತು . ಆ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಗಿರೀಶ್ ಅವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಕಲ್ಪತರು ಬ್ರಿಕ್ಸ್ ಅಂಡ್ ಟೈಲ್ಸ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು. ಕೈಗಾರಿಕಾ ಭೇಟಿಯ ಪೂರ್ವಭಾವಿ ಮಾಹಿತಿ ಸಭೆ : ಕೈಗಾರಿಕಾ ಭೇಟಿಗೂ ಮೊದಲು ಕಾಲೇಜಿನಲ್ಲಿ ಪ್ರಾಂಶುಪಾಲರ

ಹರ್ ಘರ್ ಜಲೋತ್ಸವ ಅಭಿಯಾನದಡಿ ಚಿಕ್ಕಬಿದರೆ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ

ಹುಳಿಯಾರು:ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡಬಿದರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬಿದರೆ ಗ್ರಾಮವನ್ನು ಜಲ ಜೀವನ್ ಮಿಷನ್ ಯೋಜನೆಯಡಿ ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಯಿತು. ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲಾ ಪಂಚಾಯತ್ ತುಮಕೂರು , ಜಿಲ್ಲಾ  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ತುಮಕೂರು , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿಕ್ಕನಾಯಕನಹಳ್ಳಿ, ಸ್ನೇಹ ಜೀವನ ಸಂಸ್ಥೆಯ ಸಹಯೋಗದೊಂದಿಗೆ, ಹುಳಿಯಾರು ಹೋಬಳಿ ಚಿಕ್ಕಬಿದರೆ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ  ದೊಡ್ಡಬಿದರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬಿದರೆ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾನೂನು ಸಂಸದೀಯ ಶಾಸನ ರಚನಾ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಮಾತನಾಡಿ ಜಲಜೀವನ್ ಮಿಷನ್ ಯೋಜನೆ ಪ್ರಧಾನಮಂತ್ರಿಗಳ ಮಹತ್ತರ ಯೋಜನೆಯಾಗಿದ್ದು ಪ್ರತೀ ಮನೆ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಮಾಡಬೇಕು ಹಾಗೂ ಯಾವ ಹಳ್ಳಿಗಳಲ್ಲಿ ಓವರ್ ಹೆಡ್ ಟ್ಯಾಂಕ್ ಇಲ್ಲ ಅಲ್ಲಿ ಟ್ಯಾಂಕ್ ನಿರ್ಮಾಣ ಮಾಡಬೇಕು ಹಾಗೂ ಕುಡಿಯಲು ಯೋಗ್ಯವಾದ ನೀರನ್ನು ಕೊಡಬೇಕು ಎಂಬ ಉದ್ದೇಶ ಆಗಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೋಕಿನಲ್ಲಿ ದೊಡ್ಡಬಿದರೆ ಪಂಚಾಯತಿ ಚಿಕ್ಕಬಿದರೆ ಗ್ರಾಮದಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು ಎಲ್ಲಾ ಮನೆಗಳಿಗೆ ನಲ್ಲಿ ಕಲ್ಪಿಸಲಾಗಿದೆ.ಇನ್ನು ಜನರು ನೀರನ್ನ

ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನಕ್ಕೆ ಚಾಲನೆ

ಹುಳಿಯಾರು:75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಅಂಗವಾಗಿ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿಯ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಾವುಟವನ್ನು ವಿತರಿಸುವುದರ ಮೂಲಕ ಹರ್ ಘರ್ ತಿರಂಗ ಅಭಿಯಾನಕ್ಕೆ ಸಂಸ್ಥೆಯ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಲಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಆದ ಕೆ.ಎಸ್. ಕಿರಣ್ ಕುಮಾರ್ ಚಾಲನೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಕವಿತಾ ಕಿರಣ್ ಕುಮಾರ್ ಮಾತನಾಡಿ ಜನರಲ್ಲಿ ಸ್ವಾತಂತ್ರ್ಯ ಹಾಗೂ ದೇಶಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿಯವರ ಆಶಯದಂತೆ ಹರ್ ಘರ್ ತಿರಂಗ ಅಭಿಯಾನ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಮನೆಮನೆಯಲ್ಲೂ ಹಾರಿಸಲು ಬಾವುಟವನ್ನು ವಿತರಿಸಲಾಗಿದ್ದು ಪ್ರತಿಯೊಬ್ಬರು ನಾಳೆ ಆ.13ರಿಂದ ಆ.15ವರೆಗೆ ಮೂರು ದಿನಗಳ ಕಾಲ ಬಾವುಟವನ್ನು ಹಾರಿಸುವುದರ ಮೂಲಕ ಅಭಿಯಾನ ಯಶಸ್ವಿಗೊಳಿಸುವಂತೆ ಕರೆನೀಡಿದರು. ಈ ವೇಳೆ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು.

ಎನ್.ಎಸ್.ಎಸ್.ಶಿಬಿರದಲ್ಲಿ ಯೋಗ ತರಬೇತಿ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-೧ ಮತ್ತು ೨ರ ವತಿಯಿಂದ ಗುರುವಾಪುರ ಗ್ರಾಮದಲ್ಲಿ ಹಮ್ಮಿಕೊಂಡಿರುವ  ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.  ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ,ತುಮಕೂರು, ಹುಳಿಯಾರು ಮತ್ತು ಕೆಂಕೆರೆ ಶಾಖೆ ಇಲ್ಲಿನ ಸಿಬ್ಬಂದಿಗಳಾದ ಶ್ರೀ ದುರ್ಗರಾಜ್ ಮತ್ತು ಶ್ರೀ ರವಿ ಇವರ ತಂಡ ಶಿಬಿರಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಯೋಗ ತರಬೇತಿಯನ್ನು ನೀಡಿದರು .  ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ‌ ಯೋಗದ ವಿವಿಧ ಆಸನಗಳನ್ನು ಪರಿಚಯ ಮಾಡಿಕೊಟ್ಟರು.  ಶಿಬಿರಾಧಿಕಾರಿಗಳಾದ ಡಾ.ಮೋಹನ್ ಕುಮಾರ್ ಮಿರ್ಲೆ ಮತ್ತು ಡಾ. ಜಯಶ್ರೀ ಬಿ. ಕದ್ರಿ ಹಾಗೂ ಸಹ ಶಿಬಿರಾಧಿಕಾರಿಗಳಾದ ಶ್ರೀ ಸೋಮಶೇಖರಪ್ಪ ಎಂ., ಶ್ರೀ ಕುಮಾರಸ್ವಾಮಿ ಕೆ.ಸಿ. ಮತ್ತು ಶ್ರೀ ಶಂಕರ್ ಕೆ.ಎಂ. ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು.

ಹುಳಿಯಾರಿನಲ್ಲಿ ಇಂದು ಪ್ರತಿಭಟನೆ

ಹುಳಿಯಾರು ಪಟ್ಟಣದ BH ರಸ್ತೆಯ ಅಕ್ಕಪಕ್ಕದಲ್ಲಿ, ಹೊಸದಾಗಿ ಹೆದ್ದಾರಿ ನಿರ್ಮಾಣ ಮಾಡಿರುವ ಸಮಯದಲ್ಲಿ ಒಳಚರಂಡಿಗಳ ಮೇಲ್ಬಾಗದಲ್ಲಿ  ಸ್ಲಾಬ್ ಹಾಕದಿರುವುದು, ಅವೈಜ್ಞಾನಿಕ ಚರಂಡಿಗಳ ನಿರ್ಮಾಣದಿಂದಾಗಿ ಕೊಳಚೆ ನೀರು ಸರಿಯಾಗಿ ಹರಿಯದೆ, ಕೊಳಚೆ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿ ರೋಗ ರುಜಿನಗಳು ಹೆಚ್ಚಾಗಲು ಕಾರಣವಾಗಿರುವುದು, ಸ್ವಚ್ಚತಾ ಕಾರ್ಯ ಸಮರ್ಪಕವಾಗಿ ನಡೆಯದಿರುವುದು....‌ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಸರಿಪಡಿಸುವಂತೆ  ಸರಿಪಡಿಸುವಂತೆ ಒತ್ತಾಯಿಸಿ ಹುಳಿಯಾರು ಪಟ್ಟಣದಲ್ಲಿ 10-8-22  ಬುಧವಾರ ಬೆಳಿಗ್ಗೆ 11.30ಕ್ಕೆ ಹುಳಿಯಾರಿನ ರಾಂಗೋಪಾಲ್ ವೃತ್ತದಲ್ಲಿ ರೈತಸಂಘ, ಕನ್ನಡ ಪರಸಂಘಟನೆಗಳು, ಮಹಿಳಾ ಸಂಘಟನೆಗಳು, ನಾನಾ ಸಂಘಸಂಸ್ಥೆಗಳ ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸುವಂತೆ, ಪ್ರತಿಭಟನಾಕಾರರ ಪರವಾಗಿ ರಾಜ್ಯರೈತಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಹಾಗೂ ಹುಳಿಯಾರು ಜಿ.ಪಂ.ಮಾಜಿ ಸದಸ್ಯ ವೈಸಿ ಸಿದ್ದರಾಮಯ್ಯ‌ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ:ಕೆ.ಎಸ್.ಕೆ

"ಭಾರತದ ಬೇರುಗಳು ಗ್ರಾಮಗಳಲ್ಲಿವೆ.ಈಗ ಹೆಚ್ಚಿನ  ಅತ್ಯುನ್ನತ  ಹುದ್ದೆಗಳಲ್ಲಿ ಇರುವವರು ಕೂಡ ಗ್ರಾಮ ಮೂಲದವರೇ.ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಗ್ರಾಮೀಣ ಹಿನ್ನೆಲೆಯುಳ್ಳವರು.ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಗ್ರಾಮೀಣ ಬದುಕನ್ನು ಸನಿಹದಿಂದ ನೋಡಿ ಅಲ್ಲಿನ ಸಮಸ್ಯೆಗಳನ್ನು,ಅಂತೆಯೇ ಧನಾತ್ಮಕ ಅಂಶಗಳನ್ನು ಅರಿತುಕೊಳ್ಳುತ್ತಾರೆ ಹಾಗೂ ಇದರಿಂದ ಅವರ ವ್ಯಕ್ತಿತ್ವ ವಿಕಸವಾಗುತ್ತದೆ"ಎಂದು ಕರ್ನಾಟಕ ರಾಜ್ಯ ಜೈವಿಕ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರೂ ಆದ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು. ಅವರು ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಗುರುವಾಪುರದಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಒಂದು ಹಾಗೂ ಎರಡರ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ  ಕಾರ್ಯಕ್ರಮಗಳು ಸ್ವಚ್ಛ ಭಾರತ ನಿರ್ಮಾಣಕ್ಕೆ ಪೂರಕವಾಗಿರುತ್ತವೆ.ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಮುಂದೆಯೂ ಪಾಲಿಸಬೇಕು ಎಂದು ಹೇಳಿ ಗ್ರಾಮಸ್ಥರ ಸಹಕಾರಕ್ಕೆ ಅಭಿನಂದಿಸಿದರು.          ಶಿಬಿರದ ಸಮಗ್ರ ವರದಿ ವಾಚಿಸಿದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಾಧಿಕಾರಿ ಡಾ. ಮೋಹನ್ ಕುಮಾರ್ ಮಿರ್ಲೆ

ನಮ್ಮ ಪರಿಸರದಲ್ಲಿನ ಗಿಡಮೂಲಿಕೆಗಳನ್ನು ಗುರುತಿಸಿ ದೈನಂದಿನ ಜೀವನದಲ್ಲಿ ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ

ನಮ್ಮ ಪರಿಸರದಲ್ಲಿನ ಗಿಡ ಮೂಲಿಕೆಗಳು ಅಪಾರವಾದ ಗುಣ ಪಡಿಸುವ ಸಾಮರ್ಥ್ಯ ಹೊಂದಿದ್ದು. ನಾವು ಆ ಔಷಧೀಯ  ಗಿಡ ಮೂಲಿಕೆಗಳನ್ನು ಗುರುತಿಸಿ ದೈನಂದಿನ ಜೀವನದಲ್ಲಿ ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹುಳಿಯಾರಿನ ಆರೋಗ್ಯ ಮಂದಿರದ ಪಂಡಿತ ಬಸವರಾಜು ತಿಳಿಸಿದರು.   ಅವರು  ಗುರುವಾಪುರ ಗ್ರಾಮದಲ್ಲಿ  ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕ ಒಂದು ಹಾಗೂ ಎರಡು ಆಯೋಜಿಸಿದ  ವಾರ್ಷಿಕ ವಿಶೇಷ ಶಿಬಿರದಲ್ಲಿ   ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ನಮ್ಮ ಪರಿಸರದಲ್ಲಿಯೇ ಇರುವ ವಸ್ತುಗಳನ್ನು ನಾವು ಬಳಸಿಕೊಳ್ಳಬಹುದು.ಉದಾಹರಣೆಗೆ ಎಕ್ಕದ ಹಾಲು ಚೇಳು ಕಡಿತಕ್ಕೆ ಉತ್ತಮ ಔಷಧಿಯಾದರೆ ಗುಳ್ಳದ ಕಾಯಿ ಕಂಠಕ್ಕೆ  ಬರುವ  ಸಮಸ್ಯೆಗಳನ್ನು  ಪರಿಹರಿಸುತ್ತದೆ.ಉತ್ತರಾಣಿ  ವಿಷ ಜಂತುಗಳ ಕಡಿತ, ಮೊಡವೆಯಂತಹ  ಚರ್ಮದ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ. ತಂಗಡೆ ಹೂ ಸುಟ್ಟ ಗಾಯ, ಕುದಿವ ನೀರಿನಿಂದ ಸಂಭವಿಸುವ ಗುಳ್ಳೆಗಳಿಗೆ  ದಿವ್ಯೌಷಧವಾಗಿದೆ.  ಪಂಚ ಪಲ್ಲವ  ದ್ರವ್ಯಗಳ ಕಷಾಯ ಮತ್ತು ಲೇಹ್ಯಗಳಿಂದ ಹೆಚ್ಚು ಕಡಿಮೆ ಎಲ್ಲಾ ರೋಗಗಳನ್ನು  ನಿವಾರಿಸಬಹುದು. ಪಂಚ ಪಲ್ಲವ ಎಂದರೆ ಅರಳಿ ಮರ, ಬೇವು, ಬನ್ನಿ, ಅತ್ತಿ ಹಾಗೂ ಬಿಲ್ವಪತ್ರೆ. ಸಾಧಾರಣ  ನೆಗಡಿಯಿಂದ ಹಿಡಿದು ಯಾವುದೇ ಹೆಸರಿಲ್ಲದ ಕಾಯಿಲೆಗಳನ್ನು ಕೂಡ ಗುಣಪಡಿಸುವ ಶಕ್ತಿ  ಈ ಚಿಗುರುಗಳಿಗೆ ಇದೆ.ಇದೇ ರೀತಿಯ ಇನ್

ಗುರುವಾಪುರ ಗ್ರಾಮದಲ್ಲಿ ಎನ್.ಎಸ್.ಎಸ್. .ಶಿಬಿರಾರ್ಥಿಗಳಿಂದ "ಬೇವಿನ ಕಡ್ಡಿ ಅಭಿಯಾನ"

ಹುಳಿಯಾರಿನ ಬಿ.ಎಂ.ಎಸ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-1 ಮತ್ತು 2 ರ ವತಿಯಿಂದ ಗುರುವಾಪುರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ "ಬೇವಿನ ಕಡ್ಡಿ ಅಭಿಯಾನ" ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.   ಎನ್.ಎಸ್.ಎಸ್.ಶಿಬಿರಾರ್ಥಿಗಳು ಊರಿನ ಪ್ರತೀ ಮನೆಗಳಿಗೂ ಭೇಟಿ ನೀಡಿ, ಕಹಿ ಬೇವಿನ ಗಿಡದ ಉಪಯೋಗಗಳನ್ನು ಗ್ರಾಮಸ್ಥರೊಂದಿಗೆ ಹಂಚಿಕೊಂಡರು.ಬೇವಿನ ಗಿಡ ಅನೇಕ ಆಯುರ್ವೇದ ಔಷಧೀಯ ಅಂಶಗಳುಳ್ಳ ಗಿಡವಾಗಿದ್ದು   ಹಲ್ಲಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.ಎಲೆ ಹಾಗೂ ಚಕ್ಕೆಗಳಿಂದ ಮಾಡಿದ ಕಷಾಯ ,ಬಿಸಿ ನೀರಿನ ಸ್ನಾನ ಅನೇಕ ಚರ್ಮರೋಗಗಳನ್ನು ಗುಣಪಡಿಸುತ್ತದೆ .ಕಹಿ ಬೇವು ಒಂದು ಉತ್ತಮ ಸೌಂದರ್ಯ ವರ್ಧಕ ಕೂಡ ಆಗಿದ್ದು ಕಹಿ ಬೇವು ಪೇಸ್ಟ್ ಮತ್ತು ಎಣ್ಣೆ ಅನೇಕ ಕಾಸ್ಮೆಟಿಕ್ ಉತ್ಪನ್ನಗಳಲ್ಲಿ ಬಳಸಲ್ಪಡುತ್ತದೆ ಎಂದು ಮಾಹಿತಿ ನೀಡಿದರು. ಇದೇ ಸಮಯ ಗ್ರಾಮಸ್ಥರು ಕಹಿ ಬೇವಿನ ಕುರಿತಾದ ತಮ್ಮ ಪಾರಂಪರಿಕ ಜ್ಞಾನವನ್ನು ಹಂಚಿಕೊಂಡರು . ಕಹಿ ಬೇವು ಜ್ವರ ನಿವಾರಕ. ಕಹಿ ಬೇವು ಮೊಡವೆ,ಹೊಟ್ಟು ನಿವಾರಣೆಗೆ,ಹಲ್ಲಿನ ತೊಂದರೆಗಳಿಗೆ ಉತ್ತಮ ಔಷಧಿ.ಹಬ್ಬ ಹರಿದಿನಗಳಲ್ಲಿ ಬಳಸಲ್ಪಡುತ್ತದೆ.ಸಿಡುಬಿನಂತಹ ಕಾಯಿಲೆಗಳ ಸಂದರ್ಭ ಉಪಯೋಗಿಸುತ್ತಾರೆ ಎಂದು ಹೇಳಿದರು.  ಶಿಬಿರಾಧಿಕಾರಿಗಳಾದ ಡಾ. ಮೋಹನ್ ಕುಮಾರ್ ಮಿರ್ಲೆ ಮತ್ತು ಡಾ. ಜಯಶ್ರೀ ಬಿ. ಕದ್ರಿ ಹಾ