ಹುಳಿಯಾರಿನ ಬಿ.ಎಂ.ಎಸ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-1 ಮತ್ತು 2 ರ ವತಿಯಿಂದ ಗುರುವಾಪುರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ "ಬೇವಿನ ಕಡ್ಡಿ ಅಭಿಯಾನ" ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಎನ್.ಎಸ್.ಎಸ್.ಶಿಬಿರಾರ್ಥಿಗಳು ಊರಿನ ಪ್ರತೀ ಮನೆಗಳಿಗೂ ಭೇಟಿ ನೀಡಿ, ಕಹಿ ಬೇವಿನ ಗಿಡದ ಉಪಯೋಗಗಳನ್ನು ಗ್ರಾಮಸ್ಥರೊಂದಿಗೆ ಹಂಚಿಕೊಂಡರು.ಬೇವಿನ ಗಿಡ ಅನೇಕ ಆಯುರ್ವೇದ ಔಷಧೀಯ ಅಂಶಗಳುಳ್ಳ ಗಿಡವಾಗಿದ್ದು ಹಲ್ಲಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.ಎಲೆ ಹಾಗೂ ಚಕ್ಕೆಗಳಿಂದ ಮಾಡಿದ ಕಷಾಯ ,ಬಿಸಿ ನೀರಿನ ಸ್ನಾನ ಅನೇಕ ಚರ್ಮರೋಗಗಳನ್ನು ಗುಣಪಡಿಸುತ್ತದೆ .ಕಹಿ ಬೇವು ಒಂದು ಉತ್ತಮ ಸೌಂದರ್ಯ ವರ್ಧಕ ಕೂಡ ಆಗಿದ್ದು ಕಹಿ ಬೇವು ಪೇಸ್ಟ್ ಮತ್ತು ಎಣ್ಣೆ ಅನೇಕ ಕಾಸ್ಮೆಟಿಕ್ ಉತ್ಪನ್ನಗಳಲ್ಲಿ ಬಳಸಲ್ಪಡುತ್ತದೆ ಎಂದು ಮಾಹಿತಿ ನೀಡಿದರು.
ಇದೇ ಸಮಯ ಗ್ರಾಮಸ್ಥರು ಕಹಿ ಬೇವಿನ ಕುರಿತಾದ ತಮ್ಮ ಪಾರಂಪರಿಕ ಜ್ಞಾನವನ್ನು ಹಂಚಿಕೊಂಡರು. ಕಹಿ ಬೇವು ಜ್ವರ ನಿವಾರಕ. ಕಹಿ ಬೇವು ಮೊಡವೆ,ಹೊಟ್ಟು ನಿವಾರಣೆಗೆ,ಹಲ್ಲಿನ ತೊಂದರೆಗಳಿಗೆ ಉತ್ತಮ ಔಷಧಿ.ಹಬ್ಬ ಹರಿದಿನಗಳಲ್ಲಿ ಬಳಸಲ್ಪಡುತ್ತದೆ.ಸಿಡುಬಿನಂತಹ ಕಾಯಿಲೆಗಳ ಸಂದರ್ಭ ಉಪಯೋಗಿಸುತ್ತಾರೆ ಎಂದು ಹೇಳಿದರು.
ಶಿಬಿರಾಧಿಕಾರಿಗಳಾದ ಡಾ. ಮೋಹನ್ ಕುಮಾರ್ ಮಿರ್ಲೆ ಮತ್ತು ಡಾ. ಜಯಶ್ರೀ ಬಿ. ಕದ್ರಿ ಹಾಗೂ ಸಹ ಶಿಬಿರಾಧಿಕಾರಿಗಳಾದ ಶ್ರೀ ಸೋಮಶೇಖರಪ್ಪ ಎಂ. ಮತ್ತು ಶ್ರೀ ಶಂಕರ್ ಕೆ.ಎಂ ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ