ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-೧ ಮತ್ತು ೨ರ ವತಿಯಿಂದ ಗುರುವಾಪುರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ,ತುಮಕೂರು, ಹುಳಿಯಾರು ಮತ್ತು ಕೆಂಕೆರೆ ಶಾಖೆ ಇಲ್ಲಿನ ಸಿಬ್ಬಂದಿಗಳಾದ ಶ್ರೀ ದುರ್ಗರಾಜ್ ಮತ್ತು ಶ್ರೀ ರವಿ ಇವರ ತಂಡ ಶಿಬಿರಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಯೋಗ ತರಬೇತಿಯನ್ನು ನೀಡಿದರು.
ಶಿಬಿರಾಧಿಕಾರಿಗಳಾದ ಡಾ.ಮೋಹನ್ ಕುಮಾರ್ ಮಿರ್ಲೆ ಮತ್ತು ಡಾ. ಜಯಶ್ರೀ ಬಿ. ಕದ್ರಿ ಹಾಗೂ ಸಹ ಶಿಬಿರಾಧಿಕಾರಿಗಳಾದ ಶ್ರೀ ಸೋಮಶೇಖರಪ್ಪ ಎಂ., ಶ್ರೀ ಕುಮಾರಸ್ವಾಮಿ ಕೆ.ಸಿ. ಮತ್ತು ಶ್ರೀ ಶಂಕರ್ ಕೆ.ಎಂ. ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ