ಹುಳಿಯಾರು:ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡಬಿದರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬಿದರೆ ಗ್ರಾಮವನ್ನು ಜಲ ಜೀವನ್ ಮಿಷನ್ ಯೋಜನೆಯಡಿ ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಯಿತು.ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲಾ ಪಂಚಾಯತ್ ತುಮಕೂರು , ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ತುಮಕೂರು , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿಕ್ಕನಾಯಕನಹಳ್ಳಿ, ಸ್ನೇಹ ಜೀವನ ಸಂಸ್ಥೆಯ ಸಹಯೋಗದೊಂದಿಗೆ, ಹುಳಿಯಾರು ಹೋಬಳಿ ಚಿಕ್ಕಬಿದರೆ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ದೊಡ್ಡಬಿದರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬಿದರೆ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾನೂನು ಸಂಸದೀಯ ಶಾಸನ ರಚನಾ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಮಾತನಾಡಿ ಜಲಜೀವನ್ ಮಿಷನ್ ಯೋಜನೆ ಪ್ರಧಾನಮಂತ್ರಿಗಳ ಮಹತ್ತರ ಯೋಜನೆಯಾಗಿದ್ದು ಪ್ರತೀ ಮನೆ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಮಾಡಬೇಕು ಹಾಗೂ ಯಾವ ಹಳ್ಳಿಗಳಲ್ಲಿ ಓವರ್ ಹೆಡ್ ಟ್ಯಾಂಕ್ ಇಲ್ಲ ಅಲ್ಲಿ ಟ್ಯಾಂಕ್ ನಿರ್ಮಾಣ ಮಾಡಬೇಕು ಹಾಗೂ ಕುಡಿಯಲು ಯೋಗ್ಯವಾದ ನೀರನ್ನು ಕೊಡಬೇಕು ಎಂಬ ಉದ್ದೇಶ ಆಗಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೋಕಿನಲ್ಲಿ ದೊಡ್ಡಬಿದರೆ ಪಂಚಾಯತಿ ಚಿಕ್ಕಬಿದರೆ ಗ್ರಾಮದಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು ಎಲ್ಲಾ ಮನೆಗಳಿಗೆ ನಲ್ಲಿ ಕಲ್ಪಿಸಲಾಗಿದೆ.ಇನ್ನು ಜನರು ನೀರನ್ನು ಮಿತವಾಗಿ ಬಳಸಬೇಕು,ನೀರನ್ನು ಉಳಿಸಬೇಕು ಹಾಗೂ ಬಳಸಿದ ನೀರನ್ನು ಮನೆ ಸುತ್ತಮುತ್ತ ಒಂದು ಇಂಗು ಗುಂಡಿ ಮಾಡಿ ನೀರನ್ನು ಹಿಂಗಿಸಬೇಕು ಅಥವಾ ಕೈತೋಟ ಮಾಡಿಕೊಂಡು ಬಳಸಿದ ನೀರನ್ನು ಮರು ಬಳಕೆ ಮಾಡಬೇಕು ಎಂದು ಹೇಳಿದರು ಹಾಗೂ ಬೋರನ ಕಣಿವೆ ಜಲಾಶಯಕ್ಕೆ ಬಹು ಗ್ರಾಮ ಕುಡಿಯುವ ನೀರಿನ ಮೂಲ ಮಾಡಿ ಅಲ್ಲಿಂದ ನೀರನ್ನು ಕೊಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯ ನಿರ್ವಹಕ ಅಧಿಕಾರಿಗಳಾದ ವಸಂತಕುಮಾರ್ ಮಾತನಾಡಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಸಮುದಾಯ ವಂತಿಕೆಯಿಂದ ಮನೆಮನೆಗೆ ನಲ್ಲಿ ಕೊಟ್ಟಿದ್ದು ಜನರು ನಲ್ಲಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳಬೇಕು, ಕಸವಿಲೇವಾರಿ ಮಾಡುವಾಗ ಹಸಿ ಕಸ ಒಣ ಕಸ ವಿಂಗಡಣೆ ಮಾಡಬೇಕು ಇದರಿಂದ ಉತ್ತಮ ಆರೋಗ್ಯ ಮತ್ತು ಉತ್ತಮವಾದ ಪರಿಸರ ಹೊಂದಲು ಸಾಧ್ಯ ಎಂದು ತಿಳಿಸಿದರು.ಯೋಜನೆ ಕುರಿತು ಗ್ರಾಮಗಳಲ್ಲಿ ಜನರಿಗೆ ಮಾಹಿತಿಗಳನ್ನು ಹಂಚುವ ಕೆಲಸ ಅನುಷ್ಠಾನ ಸಂಸ್ಥೆಯವರು ಉತ್ತಮವಾಗಿ ಮಾಡಿರುತ್ತಾರೆ ಎಂದು ಶ್ಲಾಘಿಸಿದರು
ಕಾರ್ಯಕ್ರಮದಲ್ಲಿ ತಾಲ್ಲೋಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಸಂತಕುಮಾರ್ ,ತಾಲ್ಲೋಕು ದಂಡಾದಿಕಾರಿಗಳಾದ ಶ್ರೀಮತಿ ತೇಜಸ್ವಿನಿ , ಗ್ರಾ,ಕು,ನೀ & ನೈ ಇಲಾಖೆಯ ಕಿರಿಯ ಸಹಾಯಕ ಅಭಿಯಂತರರಾದ ಸೋಮಶೇಖರ್, ಕಂಟ್ರಾಕ್ಟರ್ ಶಿವಣ್ಣ, JE ಗುರುಪ್ರಸಾದ್ ಹಾಗೂ ISA ಸಿಬ್ಬಂದಿಗಳಾದ ಕಿರಣ್, ಶಿವಪ್ರಸಾದ್, ಮೋಹನ್ ISRA ತಂಡದ ದೇವರಾಜ್ & ಕೃಷ್ಣಮೂರ್ತಿ,ಗ್ರಾಮ ಪಂಚಾಯತಿ ಪಿ ಡಿ ಓ ನಾಗೇಶ್ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,ಪಂಚಾಯತಿ ಸಿಬ್ಬಂದಿಗಳು,ಗ್ರಾಮ ಕುಡಿಯುವ ನೀರು ನೈರ್ಮಲ್ಯ ಸಮಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ