ಸುಮಾರು ಐದು ಎಕರೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಇಲ್ಲಿನ ಇಟ್ಟಿಗೆ ಹೆಂಚು ಮತ್ತು ಟೈಲ್ಸ್ ಇವುಗಳ ಉತ್ಪಾದನಾ ಪ್ರಕ್ರಿಯೆ,ಅಗತ್ಯವಾದ ಕಚ್ಚಾ ವಸ್ತುಗಳು, ಅವುಗಳ ನಿರ್ವಹಣೆ,ದಾಸ್ತಾನು, ಮಾರಾಟ, ಒಟ್ಟು ಉತ್ಪಾದನಾ ವೆಚ್ಚ,ಯಂತ್ರೋಪಕರಣಗಳ ನಿರ್ವಹಣೆ,ಕಾರ್ಮಿಕರು ಹಾಗೂ ಅವರಿಗಿರುವ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿಯನ್ನು ಪಡೆದುಕೊಂಡರು.
ನಂತರ ಸೌರ ಶಕ್ತಿ ಸ್ಥಾವರಕ್ಕೆ ಭೇಟಿ ನೀಡಲಾಯಿತು. ಆ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಗಿರೀಶ್ ಅವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಕಲ್ಪತರು ಬ್ರಿಕ್ಸ್ ಅಂಡ್ ಟೈಲ್ಸ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.
ಕೈಗಾರಿಕಾ ಭೇಟಿಯ ಪೂರ್ವಭಾವಿ ಮಾಹಿತಿ ಸಭೆ : ಕೈಗಾರಿಕಾ ಭೇಟಿಗೂ ಮೊದಲು ಕಾಲೇಜಿನಲ್ಲಿ ಪ್ರಾಂಶುಪಾಲರಾದ ಪ್ರೊ.ವೀರಣ್ಣ ಎಸ್.ಸಿ. ಇವರ ಅಧ್ಯಕ್ಷತೆಯಲ್ಲಿ ಕೈಗಾರಿಕಾ ಭೇಟಿಯ ಪೂರ್ವಭಾವಿ ಮಾಹಿತಿ ಸಭೆ ನಡೆಸಲಾಯಿತು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಮಲ್ಲಿಕಾರ್ಜುನ್ ಇವರು ಕಾರ್ಯಕ್ರಮದ ರೂಪುರೇಷೆ ಕುರಿತು ಮಾತನಾಡಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಸಂಗೀತಾ ಪಿ. ಹಾಗೂ ಶ್ರೀಮತಿ ಲಾವಣ್ಯ ಪಿ. ಸಿ. ಅವರು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾದ ಮಾಹಿತಿಗಳ ವಿಚಾರವಾಗಿ ತಿಳಿಸಿದರು. ಉಪನ್ಯಾಸಕರಾದ ಶ್ರೀ ಸೋಮಶೇಖರಪ್ಪ ಇವರು ಕೈಗಾರಿಕಾ ಭೇಟಿಯ ವೇಳೆ ವಿದ್ಯಾರ್ಥಿಗಳ ಶಿಸ್ತು ಹಾಗೂ ನಡತೆಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು ಮಾತನಾಡಿ ಪಠ್ಯದ ಜೊತೆಗೆ ಪ್ರಾಯೋಗಿಕ ಅನುಭವವು ತುಂಬಾ ಮುಖ್ಯವೆಂದು ತಿಳಿಸಿ ಹಾಗೂ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಈ ರೀತಿಯ ಕೈಗಾರಿಕಾ ಭೇಟಿಯು ತಾವು ಅಧ್ಯಯನ ನಡೆಸುತ್ತಿರುವ ಪಠ್ಯಕ್ಕೆ ಪೂರಕವಾಗಿ ಹಲವು ವಿಚಾರಗಳನ್ನು ತಿಳಿಯಲು ಸಹಕಾರಿಯಾಗಿದೆ ಮತ್ತು ಇದು ಒಂದು ಉತ್ತಮವಾದ ಕಾರ್ಯಕ್ರಮವಾಗಿತ್ತು ಎಂದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಮಲ್ಲಿಕಾರ್ಜುನ್ ಇವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ. ಸಂಗೀತಾ ಪಿ., ಉಪನ್ಯಾಸಕರುಗಳಾದ ಶ್ರೀಮತಿ ಲಾವಣ್ಯ ಪಿ. ಸಿ. ಹಾಗೂ ಶ್ರೀ ಸೋಮಶೇಖರಪ್ಪ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಜಯಪ್ರಕಾಶ್, ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀ ಚಂದ್ರಹಾಸ್ ಹಾಗೂ ಶ್ರೀ ಹೊನ್ನಪ್ಪ ಇವರುಗಳು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ