ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬ್ಯಾಂಕುಗಳಲ್ಲಿ ಅವಧಿ ಮೀರಿದ ಹಣ ವಾರಸುದಾರರಿಗೆ ವಾಪಸ್

ಬ್ಯಾಂಕುಗಳಲ್ಲಿ ಅವಧಿ ಮೀರಿದ ಹಣ ವಾರಸುದಾರರಿಗೆ ವಾಪಸ್ ----------------- ಹುಳಿಯಾರು : ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಹಣ ಹತ್ತು ವರ್ಷಗಳಿಗೂ ಹೆಚ್ಚು ಕಾಲ ನಾಮಿನೇಷನ್ ಇಲ್ಲದೆ, ವಾರಸುದಾರರು ಮುಂದೆ ಬಾರದ ಕಾರಣ ಬಳಕೆಯಾಗದೆ ಉಳಿದಿದ್ದಲ್ಲಿ, ಅಂತಹ ಹಣವನ್ನು ಸಂಬಂಧಪಟ್ಟ ವಾರಸುದಾರರಿಗೆ ಅಥವಾ ನಾಮಿನಿಗೆ ಮರಳಿಸಬೇಕೆಂಬ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ತಿಳಿಸಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆವತಿಯಿಂದ ಕೆಂಪರಾಯನಹಟ್ಟಿಯಲ್ಲಿ ಆಯೋಜಿಸಿದ್ದ ಕೇಂದ್ರ ಮಾಸಿಕ ಸಭೆಯಲ್ಲಿ ಮಾತನಾಡಿ, ಇಂತಹ ಖಾತೆಗಳಿಗೆ ಸಂಬಂಧಿಸಿದವರು ಕೆವೈಸಿ ದಾಖಲೆಗಳೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕುಗಳಿಂದ ಹಣವನ್ನು ಹಿಂಪಡೆಯಬಹುದು ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಮಾತನಾಡಿದ ತಾಲೂಕಿನ ಸಮನ್ವಯಾಧಿಕಾರಿ ಕವಿತಾ , ಗ್ರಾಹಕರ ಹಣವನ್ನು ಯಾವುದೇ ಕಾರಣಕ್ಕೂ ಬ್ಯಾಂಕುಗಳು ಅಕ್ರಮವಾಗಿ ತಡೆಹಿಡಿಯದೇ, ರಿಸರ್ವ್ ಬ್ಯಾಂಕ್ ರೂಪಿಸಿರುವ ಈ ವ್ಯವಸ್ಥೆಯ ಮೂಲಕ ನ್ಯಾಯಯುತವಾಗಿ ವಾರಸುದಾರರು ಅಥವಾ ನಾಮಿನಿಗೆ ಹಿಂತಿರುಗಿಸಬೇಕೆಂಬುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ಈ ಸೌಲಭ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದು ಅವರು ಮನವಿ ...

ಹುಳಿಯಾರು: ಸಂಭ್ರಮದ ಕ್ರಿಸ್ಮಸ್‌ ಆಚರಣೆ;ಫಾದರ್ ಸುಮಂತ್ ಕುಮಾರ್ ನೇತೃತ್ವದಲ್ಲಿ ಪ್ರಾರ್ಥನೆ

ಹುಳಿಯಾರು: ಸಂಭ್ರಮದ ಕ್ರಿಸ್ಮಸ್‌ ಆಚರಣೆ;ಫಾದರ್ ಸುಮಂತ್ ಕುಮಾರ್ ನೇತೃತ್ವದಲ್ಲಿ ಪ್ರಾರ್ಥನೆ ಹುಳಿಯಾರು : ಪಟ್ಟಣದ ಕ್ರೈಸ್ತ ಆಶೀರ್ವಾದ ಸಭೆಯ ವತಿಯಿಂದ ಗುರುವಾರ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.   ರೆವರೆಂಡ್ ಫಾದರ್ ಸುಮಂತ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ  ವಿಶೇಷ ಪ್ರಾರ್ಥನಾ ಸಭೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪ್ರೀತಿ ರಾಘವೇಂದ್ರ ಅವರು ಸಾರ್ವಜನಿಕರಿಗೆ ಕ್ರಿಸ್ಮಸ್ ಶುಭಾಶಯಗಳು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು "ಶಾಸಕರ ಹಾಗೂ ಸದಸ್ಯರ ಬೆಂಬಲ ಮತ್ತು ಏಸುಕ್ರಿಸ್ತನ  ಆಶೀರ್ವಾದದ ಫಲವಾಗಿ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸುವ ಮೂಲಕ ಇಂದು ನಾನು ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ನೆನೆದರು.  ಇದೇ ಸಂದರ್ಭದಲ್ಲಿ ಅವರು ಕೇಕ್ ಕತ್ತರಿಸಿ ಎಲ್ಲರಿಗೂ ಹಬ್ಬದ ಶುಭ ಹಾರೈಕೆ ಕೋರಿದರು. ಉಡುಗೊರೆ ವಿತರಣೆ:  ಕ್ರಿಸ್ಮಸ್ ಹಬ್ಬದ ನೆನಪಿನ ಕಾಣಿಕೆಯಾಗಿ ಕಾರ್ಯಕ್ರಮದಲ್ಲಿ ನೆರೆದಿದ್ದ ಸುಮಾರು 100 ರಿಂದ 150 ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು. ಫಾದರ್ ಸುಮಂತ್ ಕುಮಾರ್ ಅವರು ಕ್ರಿಸ್ಮಸ್ ಸಂದೇಶ ನೀಡಿ ಮಾತನಾಡಿ ಕ್ರಿಸ್ಮಸ್ ಎಂಬುದು ಕೇವಲ ಸಂಭ...

ಹುಳಿಯಾರು:ಪಲ್ಸ್ ಪೋಲಿಯೋಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಚಾಲನೆ

ಹುಳಿಯಾರು:ಪಲ್ಸ್ ಪೋಲಿಯೋಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಚಾಲನೆ ---------------------- ಹುಳಿಯಾರು :ರಾಷ್ಟ್ರೀಯ ಪೋಲಿಯೋ ಲಸಿಕಾ ದಿನಾಚರಣೆ ಅಂಗವಾಗಿ ಇಂದು ಪಟ್ಟಣದಾದ್ಯಂತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ ಎಂದು ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಮನವಿ ಮಾಡಿದರು. ಹುಳಿಯಾರಿನ ಬಸ್ ನಿಲ್ದಾಣದ ಪೋಲಿಯೋ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಹಾಕುವ ಮೂಲಕ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ಪೋಲಿಯೋ ಎಂಬುದು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುವ ಮಾರಕ ರೋಗ. 5 ವರ್ಷದೊಳಗಿನ ಮಕ್ಕಳಲ್ಲಿ ನರಮಂಡಲದ ಮೇಲೆ ದಾಳಿ ಮಾಡಿ ಅಂಗವೈಕಲ್ಯ ಉಂಟುಮಾಡುವ ಈ ರೋಗವನ್ನು ದೇಶದಿಂದ ಸಂಪೂರ್ಣವಾಗಿ ಓಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ಈ ಲಸಿಕಾ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಪೋಷಕರು ಸಹಕರಿಸಬೇಕು. ಈ ಹಿಂದೆ ಲಸಿಕೆ ಹಾಕಿಸಿದ್ದರೂ ಸಹ, ಇಂದಿನ ಅಭಿಯಾನದಲ್ಲಿ ತಪ್ಪದೇ ಮತ್ತೊಮ್ಮೆ ಹನಿ ಹಾಕಿಸಬೇಕು" ಎಂದು ಮನವಿ ಮಾಡಿದರು. ಹುಳಿಯಾರಿನಲ್ಲಿ ಸರ್ಕಾರಿ ಆಸ್ಪತ್ರೆ,ಬಸ್ ನಿಲ್ದಾಣ, ವಿಜಯನಗರ,ಆಝಾದ್ ನಗರ,ಮಾರುತಿ ನಗರ, ಇಂದಿರಾ ಲಿಂಗಪ್ಪನ ಪಾಳ್ಯ, ವಳಗೇರೆಹಳ್ಳಿ ಸೇರಿದಂತೆ ಒಟ್ಟು ಎಂಟು ಬೂತ್ ಗಳನ್ನು ಸ್ಥಾಪಿಸಲಾಗಿದ್ದು...

ಶ್ರೀ ಮಹಾಲಕ್ಷ್ಮಿ ಮದ್ದರಲಕ್ಕಮ್ಮ ಮಹಾ ಕ್ಷೇತ್ರಕ್ಕೆ ಅಧಿಕಾರಿಗಳ ಭೇಟಿ

ಶ್ರೀ ಮಹಾಲಕ್ಷ್ಮಿ ಮದ್ದರಲಕ್ಕಮ್ಮ ಮಹಾ ಕ್ಷೇತ್ರಕ್ಕೆ ಅಧಿಕಾರಿಗಳ ಭೇಟಿ -------------- ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ಹೊಸ ಬೀದಿಯ ಶುಕ್ರವಾರದ ಕೋಟೆ ಬಾಗಿಲಿನ ಶ್ರೀ ಮಹಾಲಕ್ಷ್ಮಿ ಮದ್ದರಲಕ್ಕಮ್ಮ ಮಹಾ ಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿತು. ಬೆಂಗಳೂರು ನಗರ ದಕ್ಷಿಣ (ಕೆಂಗೇರಿ) ವಿಭಾಗದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಕು. ಆಶಾ ಎಚ್.ಕೆ., ಅದೀಕ್ಷಕರಾದ ಜಾನಕಮ್ಮ, ಶೀಲಾ, ನಿಮಾನ್ಸ್‌ನ ಆಪ್ತ ಸಮಾಲೋಚಕರಾದ ಉಷಾಕಿರಣ್, ಹಾಗೂ ಡಿಸಿಪಿಯು ಅಧಿಕಾರಿಗಳಾದ ಮಂಜುನಾಥ್ ಬುರುಡಿ, ಪ್ರಸಾದ್, ಲತ ಅವರು ದೇವಾಲಯಕ್ಕೆ ಆಗಮಿಸಿ ಮಕ್ಕಳ ಒಳಿತಿಗಾಗಿ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯವು ಮಕ್ಕಳಿಗಾಗಿ ಹಮ್ಮಿಕೊಂಡಿರುವ ವಿವಿಧ ಸೇವಾ ಕಾರ್ಯಗಳನ್ನು ಗಮನಿಸಿದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ದೇವಾಲಯದ ಧರ್ಮಾಧಿಕಾರಿಗಳಾದ ಲಕ್ಷ್ಮೀಶ ಸಿ.ಆರ್. ಅವರು ಅಮ್ಮನವರ ಶೇಷವಸ್ತ್ರ ಪ್ರಸಾದವನ್ನು ನೀಡಿ ಅಧಿಕಾರಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಅಕ್ಷತ, ಮನೋಜ್, ರಾಜಶೇಖರ್, ನಾಗರತ್ನ, ರಂಗಸ್ವಾಮಿ ಸಿ.ಎನ್., ಸಿದ್ದಲಿಂಗಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹುಳಿಯಾರು ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಅವಿರೋಧ ಆಯ್ಕೆ

ಹುಳಿಯಾರು ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಅವಿರೋಧ ಆಯ್ಕೆ ರತ್ನಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆ; ಶಾಸಕ ಸಿ.ಬಿ. ಸುರೇಶ್‌ ಬಾಬು ಸಮ್ಮುಖದಲ್ಲಿ ನಡೆದ ಪ್ರಕ್ರಿಯೆ ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ . ಈ ಹಿಂದಿನ ಅಧ್ಯಕ್ಷರಾಗಿದ್ದ ರತ್ನಮ್ಮ ರೇವಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಪ್ರೀತಿ ರಾಘವೇಂದ್ರ ಅವರು ಏಕೈಕ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿದ್ದ ಚಿಕ್ಕನಾಯಕನಹಳ್ಳಿ ತಹಸಿಲ್ದಾರ್ ಕೆ. ಪುರಂದರ್ ಅವರು ಘೋಷಿಸಿದರು. ಚುನಾವಣಾ ಪ್ರಕ್ರಿಯೆ ವಿವರ : ಅಧಿಕೃತ ವೇಳಾಪಟ್ಟಿಯಂತೆ, ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಪಡಿಸಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿದ್ದ ಸದಸ್ಯರುಗಳು , ಶಾಸಕ ಸಿ.ಬಿ. ಸುರೇಶ್ ಬಾಬು ಅವರೊಂದಿಗೆ ಸುಮಾರು 11.40ರ ಸುಮಾರಿಗೆ ಪಟ್ಟಣ ಪಂಚಾಯಿತಿಗೆ ಆಗಮಿಸಿದರು. ಈ ವೇಳೆ, ಪ್ರೀತಿ ರಾಘವೇಂದ್ರ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12.00 ಗಂಟೆಗೆ ಸಭೆ ಪ್ರಾರಂಭವಾಯಿತು. 12.10 ಗಂಟೆಯವರೆಗೆ ನಾಮಪತ್ರಗಳ ಪರಿಶೀಲನೆ ನ...

ಚಿಕ್ಕನಾಯಕನಹಳ್ಳಿ ಪಟ್ಟಣದ ಸುರಕ್ಷತೆಗೆ ಗಣಿ ಬಾಧಿತ ಅನುದಾನ ಬಳಸಿ ಸಿಸಿಟಿವಿ ಅಳವಡಿಕೆಗೆ ಮನವಿ

ಚಿಕ್ಕನಾಯಕನಹಳ್ಳಿ ಪಟ್ಟಣದ ಸುರಕ್ಷತೆಗೆ ಗಣಿ ಬಾಧಿತ ಅನುದಾನ ಬಳಸಿ ಸಿಸಿಟಿವಿ ಅಳವಡಿಕೆಗೆ ಮನವಿ --------------- ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನ ದಟ್ಟಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಅಪರಾಧ ತಡೆಗಟ್ಟುವ ಉದ್ದೇಶದಿಂದ, ಪ್ರಮುಖ ರಸ್ತೆಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್ ಅವರು ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಅವರಿಗೆ ಮನವಿ ಸಲ್ಲಿಸಿದರು.            ಶನಿವಾರ ವಾರ್ಷಿಕ ಪರಿವೀಕ್ಷಣೆಯ ಅಂಗವಾಗಿ ಐಜಿಪಿ ಲಾಬೂ ರಾಮ್ ಅವರು ಚಿಕ್ಕನಾಯಕನಹಳ್ಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ಈ ಮನವಿ ಸಲ್ಲಿಸಲಾಯಿತು. ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ವಿಶೇಷ ಅನುದಾನವನ್ನು ಬಳಸಿಕೊಂಡು ಸಿಸಿಟಿವಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಚಂದ್ರಶೇಖರ್ ಅವರು ಒತ್ತಾಯಿಸಿದರು.             ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಪಟ್ಟಣಗಳ ಆಯಕಟ್ಟಿನ ಜಂಕ್ಷನ್‌ಗಳು, ವಾಣಿಜ್ಯ ಪ್ರದೇಶಗಳು ಮತ್ತು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸುವುದರಿಂದ ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಮೂಡಲಿದ್ದು, ಅಪರಾಧ ಚಟುವಟಿ...

ಚಿಕ್ಕನಾಯಕನಹಳ್ಳಿ ಪಟ್ಟಣದ ಸುರಕ್ಷತೆಗೆ ಗಣಿ ಬಾಧಿತ ಅನುದಾನ ಬಳಸಿ ಸಿಸಿಟಿವಿ ಅಳವಡಿಕೆಗೆ ಮನವಿ

  ಚಿಕ್ಕನಾಯಕನಹಳ್ಳಿ ಪಟ್ಟಣದ ಸುರಕ್ಷತೆಗೆ ಗಣಿ ಬಾಧಿತ ಅನುದಾನ ಬಳಸಿ ಸಿಸಿಟಿವಿ ಅಳವಡಿಕೆಗೆ ಮನವಿ --------------- ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನ ದಟ್ಟಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಅಪರಾಧ ತಡೆಗಟ್ಟುವ ಉದ್ದೇಶದಿಂದ, ಪ್ರಮುಖ ರಸ್ತೆಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್ ಅವರು ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಅವರಿಗೆ ಮನವಿ ಸಲ್ಲಿಸಿದರು.                  ಶನಿವಾರ ವಾರ್ಷಿಕ ಪರಿವೀಕ್ಷಣೆಯ ಅಂಗವಾಗಿ ಐಜಿಪಿ ಲಾಬೂ ರಾಮ್ ಅವರು ಚಿಕ್ಕನಾಯಕನಹಳ್ಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ಈ ಮನವಿ ಸಲ್ಲಿಸಲಾಯಿತು. ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ವಿಶೇಷ ಅನುದಾನವನ್ನು ಬಳಸಿಕೊಂಡು ಸಿಸಿಟಿವಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಚಂದ್ರಶೇಖರ್ ಅವರು ಒತ್ತಾಯಿಸಿದರು.                 ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಪಟ್ಟಣಗಳ ಆಯಕಟ್ಟಿನ ಜಂಕ್ಷನ್‌ಗಳು, ವಾಣಿಜ್ಯ ಪ್ರದೇಶಗಳು ಮತ್ತು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸುವುದರಿಂದ ಸಾರ್ವಜನಿಕರಲ್ಲಿ ಸುರಕ್ಷತೆಯ...

ಹುಳಿಯಾರು: ಜನ ಸುರಕ್ಷಾ ಶಿಬಿರದಲ್ಲಿ 'ಯೋನೋ' ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಮಾಹಿತಿ

ಹುಳಿಯಾರು: ಜನ ಸುರಕ್ಷಾ ಶಿಬಿರದಲ್ಲಿ 'ಯೋನೋ' ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಮಾಹಿತಿ ಹುಳಿಯಾರು : ಭಾರತೀಯ ಸ್ಟೇಟ್ ಬ್ಯಾಂಕ್  ವತಿಯಿಂದ ಇತ್ತೀಚೆಗೆ ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜನ ಸುರಕ್ಷಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಬ್ಯಾಂಕಿಂಗ್ ಮತ್ತು ವಿಮಾ ಯೋಜನೆಗಳ ಕುರಿತು ಗ್ರಾಹಕರಿಗೆ ಸಮಗ್ರ ಮಾಹಿತಿ ನೀಡಲಾಯಿತು. *YONO (ಯೋನೋ) ಡಿಜಿಟಲ್ ಬ್ಯಾಂಕಿಂಗ್ ಮಹತ್ವ * : ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ತಿಮ್ಮನಹಳ್ಳಿ ಭಾರತೀಯ ಸ್ಟೇಟ್ ಬ್ಯಾಂಕ್‌ನ ವ್ಯವಸ್ಥಾಪಕ ಅನಿಮೇಶ್ ಕುಮಾರ್, ಬ್ಯಾಂಕಿನಲ್ಲಿ ಜಾರಿಯಲ್ಲಿರುವ ಎಸ್‌ಬಿಐ ಯೋನೋ ಡಿಜಿಟಲ್ ಬ್ಯಾಂಕಿಂಗ್ ಸೇವೆಯ ಮಹತ್ವವನ್ನು ವಿವರಿಸಿದರು. ಅವರು, "ಯೋನೋ ಬ್ಯಾಂಕಿಂಗ್ ಯೋಜನೆಯಡಿ ಗ್ರಾಹಕರು ಉಳಿತಾಯ ಖಾತೆಯಲ್ಲಿ ಹಣ ಕಟ್ಟುವುದು, ತೆಗೆಯುವುದು, ಎಟಿಎಂ ಇಲ್ಲದೆ ಹಣ ಹಿಂಪಡೆಯುವುದು, ಬ್ಯಾಲೆನ್ಸ್ ಸಂದೇಶ, ಆರ್ ಟಿ ಜಿ ಎಸ್, ನೆಫ್ಟ್ ಮಾಡುವುದು ಮತ್ತು ಸ್ಟೇಟ್‌ಮೆಂಟ್ ಪಡೆಯುವುದು ಸೇರಿದಂತೆ ಹಲವಾರು ಬ್ಯಾಂಕಿಂಗ್ ಕೆಲಸಗಳನ್ನು ಕುಳಿತಲ್ಲೇ ತಮ್ಮ ಮೊಬೈಲ್ ಸಹಾಯದಿಂದ ಮಾಡಬಹುದು. ಇದರ ಪ್ರಯೋಜನ ಪಡೆದುಕೊಳ್ಳಬೇಕು," ಎಂದು ಜನರಿಗೆ ಕರೆ ನೀಡಿದರು. ಕೇಂದ್ರ ಸರ್ಕಾರದ ವಿಮಾ ಯೋಜನೆಗಳ ವಿವರಣೆ :ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಕೇಂದ್ರದ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್ ಎಂ ಕುಮ...

ಭಗೀರಥ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ

ಭಗೀರಥ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ  ಪರೀಕ್ಷೆಗೂ ಮುನ್ನವೇ ಪುರಸ್ಕಾರ ನೀಡಿದರೆ ಮಕ್ಕಳಲ್ಲಿ ಹೆಚ್ಚುವರಿ ಸ್ಪೂರ್ತಿ: ಶಾಸಕ ಸುರೇಶ್ ಬಾಬು ಸಮುದಾಯದ ಒಗ್ಗಟ್ಟೇ ಅಭಿವೃದ್ಧಿಗೆ ದಾರಿ ಎಂದು ವೆಂಕೋಬ ಕರೆ ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ, ಶ್ರೀಭಗೀರಥ ವಿದ್ಯಾನಿಧಿ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ತಾಲೂಕು ಭಗೀರಥ ಉಪ್ಪಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಭಗೀರಥ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವು ಹುಳಿಯಾರಿನ ಕೋಡಿಪಾಳ್ಯದ ಸಮೀಪದ ಶ್ರೀ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಭಾನುವಾರ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಹೊಸದುರ್ಗ ಭಗೀರಥ ಪೀಠದ ಡಾ. ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉದ್ಘಾಟನೆಯನ್ನು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ್ ನೆರವೇರಿಸಿದರು. ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಶಾಸಕ ಸಿ.ಬಿ. ಸುರೇಶ್ ಬಾಬು ಅವರು, ಮಕ್ಕಳಲ್ಲಿ ಸ್ಪೂರ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಶೈಕ್ಷಣಿಕ ಸಾಧನೆಗೆ ನೀಡುವ ಪುರಸ್ಕಾರವು ಅತ್ಯುತ್ತಮ ವೇದಿಕೆ ಎಂದು ಹೇಳಿದರು. ಸಾಮಾನ್ಯವಾಗಿ ಪರೀಕ್ಷೆಗಳು ಮುಗಿದು ಫಲಿತಾಂಶ ಬರುವಂತೆ ಮಾಡಲಾಗುವ ಪುರಸ್ಕಾರ ಕಾರ್ಯಕ್ರಮಗಳನ್ನು, ಶೈಕ್ಷಣಿಕ ವರ್ಷ ಆರಂಭದಲ್ಲಿಯೇ ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಂ...