ಆಲದಕಟ್ಟೆಯ ಸೇವಾಲಾಲ್ ಜ್ಞಾನ ವಿಕಾಸ ಕೇಂದ್ರದಲ್ಲಿ ಆಯೋಜಿಸಿದ್ದ ಸ್ವ ಉದ್ಯೋಗ ಪ್ರೇರಣಾಶಿಬಿರದಲ್ಲಿ ಮಾತನಾಡಿದ ಅವರು, “ಒಂದು ಕಾಲದಲ್ಲಿ ‘ಉದ್ಯೋಗಂ ಪುರುಷ ಲಕ್ಷಣಂ’ ಎಂದು ಹೇಳಲಾಗುತ್ತಿತ್ತು. ಆದರೆ ಕಾಲ ಬದಲಾಗಿದೆ; ಇಂದಿನ ಮಹಿಳೆಯರು ಪುರುಷರ ಸಮಾನವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ” ಎಂದರು.
ಅಡುಗೆಮನೆಯ ಒಳಗೇ ಸೀಮಿತವಾಗಿದ್ದ ಮಹಿಳೆಯರು ಹೊರ ಜಗತ್ತಿನ ಅನುಭವವನ್ನು ಪಡೆದು ಸ್ವಾವಲಂಬಿ ಆಗುವಂತೆ ಪ್ರೇರೇಪಿಸುವುದೇ ಯೋಜನೆಯ ಉದ್ದೇಶವೆಂದೂ ಅವರು ವಿವರಿಸಿದರು. ಸ್ವ ಉದ್ಯೋಗದ ಮೂಲಕ ತಮ್ಮದೇ ಕಾಲ ಮೇಲೆ ನಿಲ್ಲುವಂತಾಗಬೇಕು ಎಂದು ಕೋರಿದರು.
ಸಂಪನ್ಮೂಲ ವ್ಯಕ್ತಿ ರೂಪ ಅವರು ಸೀರೆ ಕುಚ್ಚು, ಮ್ಯಾಟ್ ತಯಾರಿ, ಮನೆಯ ಅಲಂಕಾರಿಕ ವಸ್ತುಗಳ ತಯಾರಿ ಸೇರಿದಂತೆ ಹಲವು ಸ್ವಾವಲಂಬನಾ ಕೌಶಲ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
ಶಿಬಿರವನ್ನು ಗ್ರಾಮ ಪಂಚಾಯತ್ ಸದಸ್ಯೆ ಅನಸೂಯಾ ಉದ್ಘಾಟಿಸಿ ಶುಭ ಹಾರೈಸಿದರು. ಒಕ್ಕೂಟದ ಅಧ್ಯಕ್ಷೆ ರತ್ನಬಾಯಿ, ಮೇಲ್ವಿಚಾರಕಿ ಆಶಾ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕವಿತ ನಿರೂಪಿಸಿದರು. ಸಾಮಾಜಿಕ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ರಂಜನ್ ಮತ್ತು ವೀಣಾ ಶಿಬಿರದ ಯಶಸ್ಸಿಗೆ ಸಹಕಾರ ನೀಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ