--------------
ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ಹೊಸ ಬೀದಿಯ ಶುಕ್ರವಾರದ ಕೋಟೆ ಬಾಗಿಲಿನ ಶ್ರೀ ಮಹಾಲಕ್ಷ್ಮಿ ಮದ್ದರಲಕ್ಕಮ್ಮ ಮಹಾ ಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿತು.
ಬೆಂಗಳೂರು ನಗರ ದಕ್ಷಿಣ (ಕೆಂಗೇರಿ) ವಿಭಾಗದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಕು. ಆಶಾ ಎಚ್.ಕೆ., ಅದೀಕ್ಷಕರಾದ ಜಾನಕಮ್ಮ, ಶೀಲಾ, ನಿಮಾನ್ಸ್‌ನ ಆಪ್ತ ಸಮಾಲೋಚಕರಾದ ಉಷಾಕಿರಣ್, ಹಾಗೂ ಡಿಸಿಪಿಯು ಅಧಿಕಾರಿಗಳಾದ ಮಂಜುನಾಥ್ ಬುರುಡಿ, ಪ್ರಸಾದ್, ಲತ ಅವರು ದೇವಾಲಯಕ್ಕೆ ಆಗಮಿಸಿ ಮಕ್ಕಳ ಒಳಿತಿಗಾಗಿ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಾಲಯವು ಮಕ್ಕಳಿಗಾಗಿ ಹಮ್ಮಿಕೊಂಡಿರುವ ವಿವಿಧ ಸೇವಾ ಕಾರ್ಯಗಳನ್ನು ಗಮನಿಸಿದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ದೇವಾಲಯದ ಧರ್ಮಾಧಿಕಾರಿಗಳಾದ ಲಕ್ಷ್ಮೀಶ ಸಿ.ಆರ್. ಅವರು ಅಮ್ಮನವರ ಶೇಷವಸ್ತ್ರ ಪ್ರಸಾದವನ್ನು ನೀಡಿ ಅಧಿಕಾರಿಗಳನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಅಕ್ಷತ, ಮನೋಜ್, ರಾಜಶೇಖರ್, ನಾಗರತ್ನ, ರಂಗಸ್ವಾಮಿ ಸಿ.ಎನ್., ಸಿದ್ದಲಿಂಗಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ