: ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ದಂಪತಿಗಳು ತಮ್ಮ ಕುಲದೇವತೆ ಹುಳಿಯಾರಿನ ಕೆಂಚಮ್ಮನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.ಇವರ ಆಗಮನದ ಸುದ್ದಿ ಅರಿತ ವಿವಿಧ ಪಕ್ಷಗಳಿಗೆ ಹರಿದು ಹಂಚುಹೋಗಿರುವ ಜಯಚಂದ್ರ ಅಭಿಮಾನಿಗಳು ಹಾಗೂ ಬೆಂಬಲಿಗರು ಪಕ್ಷಬೇಧ ಮರೆತು ದೇವಾಲಯಕ್ಕೆ ಆಗಮಿಸಿ ಇವರೊಂದಿಗೆ ಪೂಜಾಕೈಂಕರ್ಯದಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ಮಾತಾನಾಡಿದ ಅವರು ತಾವು ಶಾಸಕರು ಹಾಗೂ ಸಚಿವನಾಗಿದ್ದ ಸಂದರ್ಭದಲ್ಲಿ ಹುಳಿಯಾರಿಗೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ನೆನೆಪಿಸಿಕೊಂಡು ತಾವೂ ಈಗಲೂ ಈ ಭಾಗದ ಜನತೆಯನ್ನು ಮರೆತಿಲ್ಲ,ಕ್ಷೇತ್ರದೊಡಗಿನ ಸಂಬಂಧ ಕಡಿದುಕೊಂಡಿಲ್ಲ ಎಂದರು. ಚಿನಾಹಳ್ಳಿ ಕ್ಷೇತ್ರಕ್ಕೆ ತಮ್ಮ ಮಗ ಸಂತೋಷ್ ಕಾಂಗ್ರೆಸ್ ಅಭ್ಯರ್ಥಿ ಎಂದು ಪ್ರಚಾರಮಾಡಿರುವುದು ಅಭಿಮಾನಿಗಳು ನಮ್ಮ ಮೇಲೆಇಟ್ಟಿರುವ ವಿಶ್ವಾಸವಾಗಿದೆ ಹೊರತು ಈ ಬಗ್ಗೆ ನಾನು ಯಾವುದೆ ಪ್ರಯತ್ನವಾಗಲಿ,ಹೈಕಮಾಂಡಿನ ಮೇಲೆ ಒತ್ತಡವನ್ನಾಗಲಿ ಹಾಕಿಲ್ಲ ಎಂದರು.ಚಿನಾ ಹಳ್ಳಿ ಕ್ಷೇತ್ರದ ಅಭ್ಯರ್ಥಿಯಾಗಿ ಸಾಸಲು ಸತೀಶ್ ಸ್ಪರ್ಧಿಸಲಿದ್ದು ಎಲ್ಲಾ ಕಾರ್ಯಕರ್ತರುಗಳು ಅವರಿಗೆ ಬೆಂಬಲ ಸೂಚಿಸುವಂತೆ ಕರೆ ನೀಡಿದರು.ಇದೇ 17ರಂದು ತಾವು ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮ ಪತ್ರಸಲ್ಲಿಸಲ್ಲಿದ್ದು ತಾಯಿ ಕೆಂಚಮ್ಮನ ಆಶೀರ್ವಾದ ಹಾಗೂ ಅಭಿಮಾನಿಗಳ ಬೆಂಬಲಿದಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದ...